ಬೆಂಗಳೂರು: ನಗರದ ಇಸ್ರೋ ಲೇಔಟ್ ದೇವರೆಕೆರೆ ಪಾರ್ಕ್ ಬಳಿಯಿರುವ ಕೆರೆಯಲ್ಲಿ ನೀರು ಬತ್ತಿ ಹೋಗಿದ್ದು, ಕೆರೆಯಲ್ಲಿದ್ದ ಮೀನುಗಳು ಸಾಕಷ್ಟು ಸತ್ತುಹೋಗಿದ್ದು, ಇನ್ನೂ ಕೆಲವು ಕೆಸರಲ್ಲಿ ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿವೆ.
ಎರಡರಿಂದ ಮೂರು ಸಾವಿರ ಮೀನುಗಳಿದ್ದು, ಇದನ್ನು ರಕ್ಷಿಸುವಂತೆ ಸ್ಥಳೀಯರು ಕೇಳಿಕೊಂಡಿದ್ದಾರೆ. ಆದರೆ ಇವು ವಿದೇಶಿ ತಳಿಯ ಕ್ಯಾಟ್ ಫಿಶ್. ಇವುಗಳನ್ನು ಸಾಕುವುದೂ ಕಾನೂನು ಬಾಹಿರ. ಸ್ಥಳೀಯರು ಈಗಾಗಲೇ ಮೀನು ಸಾಯಬಾರದು ಅಂತ ಹತ್ತು ಟ್ಯಾಂಕ್ ನೀರು ತಂದು ನೀರು ಸುರಿದಿದ್ದಾರೆ. ಆದ್ರೆ ಕ್ಯಾಟ್ ಫಿಶ್ ಪರಿಸರ ವ್ಯವಸ್ಥೆಗೆ ಹಾನಿ ಮಾಡುತ್ತವೆ. ಇತರ ಜಲಚರಗಳನ್ನೆಲ್ಲ ತಿಂದು ಬಿಡುತ್ತವೆ. ಹೀಗಾಗಿ ಕ್ಯಾಟ್ ಫಿಶ್ ಬ್ರೀಡಿಂಗ್ ಮಾಡುವ ಬಗ್ಗೆ ಹಿಂದೆಯೂ ದೂರುಗಳು ಕೇಳಿಬಂದಿದ್ದವು. ಆಗ ಕೆರೆಗಳ ನೀರು ಬತ್ತಿಸಿ, ಕ್ಯಾಟ್ ಫಿಶ್ಗಳನ್ನು ಸಾಯಿಸುವುದು ಒಂದೇ ದಾರಿ ಎಂದು ಅಧಿಕಾರಿಗಳೂ ತಿಳಿಸಿದ್ದರು.
ಇದನ್ನೂ ಓದಿ: ಏರ್ ಶೋದಲ್ಲಿ ಭಾಗಿಯಾದ ಗಣ್ಯರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಔತಣಕೂಟ: ಸಿಎಂ ಬಿಎಸ್ವೈ ಭಾಗಿ
ಇದೀಗ ಇಸ್ರೋ ಲೇಔಟ್ ದೇವರೆಕೆರೆಯ ಪರಿಸ್ಥಿತಿಯೂ ಹೀಗೇ ಆಗಿದ್ದು, ನೀರಿಲ್ಲದೆ ಕ್ಯಾಟ್ ಫಿಶ್ಗಳು ಸಾಯುತ್ತಿವೆ. ಆದರೆ ಕಾನೂನುಬಾಹಿರವಾಗಿ ಇದರ ಬ್ರೀಡಿಂಗ್ ಮಾಡುವಾಗಲೇ ಪಾಲಿಕೆ ತಡೆಯಬೇಕಿತ್ತು. ಈಗ ಮೀನುಗಳು ಒದ್ದಾಡಿ ಜೀವ ಬಿಡುವುದನ್ನು ನೋಡಲು ಹೇಗೆ ಸಾಧ್ಯ ಎಂದು ಪರಿಸರ ತಜ್ಞ ವಿಜಯ್ ನಿಶಾಂತ್ ತಿಳಿಸಿದರು.