ETV Bharat / city

ಮೊದಲ ಹಂತದ ಗ್ರಾ.ಪಂ ಚುನಾವಣೆ ಮುಕ್ತಾಯ : ರಾಜ್ಯದಲ್ಲಿ ಶೇ. 83.69 ರಷ್ಟು ಮತದಾನ - ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ

GP ELECTIONS
GP ELECTIONS GP ELECTIONS
author img

By

Published : Dec 22, 2020, 7:08 AM IST

Updated : Dec 22, 2020, 10:51 PM IST

22:45 December 22

ಮತದಾರರಿಗೆ ಹಂಚಲು ತಯಾರಿಸಿದ್ದ ಪಲಾವ್ ವಶಕ್ಕೆ ಪಡೆದ ಅಧಿಕಾರಿಗಳು

GP ELECTIONS
ಪಲಾವ್ ವಶಕ್ಕೆ ಪಡೆದ ಅಧಿಕಾರಿಗಳು

ಶಿವಮೊಗ್ಗ : ತಾಲೂಕಿನ ಹೊಸಳ್ಳಿ ಗ್ರಾಮ ಪಂಚಾಯತ್​​ ವ್ಯಾಪ್ತಿಯ ತೋಟದ ಮನೆಯೊಂದರಲ್ಲಿ ಮತದಾರರಿಗೆ ಹಂಚಲು ತಯಾರಿಸಿದ್ದ ಪಲಾವ್​ನ್ನು ಚುನಾವಣಾ ನೀತಿ ಸಂಹಿತೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಂಸಿಸಿ ತಂಡ, ಪಲಾವ್ ಸೇರಿದಂತೆ ಅಡುಗೆ ಸಾಮಾನುಗಳನ್ನು ವಶಕ್ಕೆ ಪಡೆದುಕೊಂಡಿದೆ. ಈ ವೇಳೆ ಸ್ಥಳದಲ್ಲಿದ್ದವರು ಪರಾರಿಯಾಗಿದ್ದಾರೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಎಂಸಿಸಿ ತಂಡದಲ್ಲಿ ತಾ.ಪಂ ಇಒ ಡಾ.ಕಲ್ಲಪ್ಪ ಹಾಗೂ ಸಿಡಿಪಒ ಚಂದ್ರಪ್ಪ ಇದ್ದರು.

22:31 December 22

ಶತಾಯುಷಿಗಳಿಂದ ಹಕ್ಕು ಚಲಾವಣೆ

GP ELECTIONS
ಶತಾಯುಷಿಗಳಿಂದ ಹಕ್ಕು ಚಲಾವಣೆ

ಕಾರವಾರ/ ಭಟ್ಕಳ : ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದಲ್ಲಿ ಶತಾಯುಷಿ ವೃದ್ಧೆಯೋರ್ವರು ಮತದಾನ ಮಾಡುವ ಮೂಲಕ ಗಮನ ಸೆಳೆದರು. 101 ವರ್ಷದ ಲಕ್ಷ್ಮಿ ವೆಂಕಣ್ಣ ನಾಯ್ಕ ತಮ್ಮ ಕುಟುಂಬದ ಜೊತೆ ಆಗಮಿಸಿ ಹಿಲ್ಲೂರು ಗ್ರಾಮದ ಮತಕೇಂದ್ರದಲ್ಲಿ ಹಕ್ಕು ಚಲಾಯಿಸಿದರು.

ಅದೇ ರೀತಿ ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮದ 103 ವಯಸ್ಸಿನ ವೃದ್ಧೆ ದುರ್ಗಮ್ಮ ಜಟ್ಟಪ್ಪ ನಾಯ್ಕ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು. 

21:38 December 22

GP ELECTIONS
ಹಾವೇರಿಯಲ್ಲಿ ಕೋವಿಡ್ ಮುಂಜಾಗೃತ ಕ್ರಮಗಳೊಂದಿಗೆ ಹಕ್ಕು ಚಲಾಯಿಸಿದ ಮತದಾರರು

ಹಾವೇರಿ : ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲೂಕುಗಳ 104 ಗ್ರಾಮ ಪಂಚಾಯತ್​ಗಳಿಗೆ ಇಂದು ಚುನಾವಣೆ ನಡೆಯಿತು. ನಾಲ್ಕು ತಾಲೂಕುಗಳ 104 ಗ್ರಾ.ಪಂಗಳ 1,506 ಸದಸ್ಯ ಸ್ಥಾನಗಳ ಪೈಕಿ, 149 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಇನ್ನುಳಿದ, 1,357 ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದ್ದು, ಒಟ್ಟು ಶೇ. 84.01ರಷ್ಟು ಮತದಾನವಾಗಿದೆ.

21:37 December 22

GP ELECTIONS
ಮಂಡ್ಯದಲ್ಲಿ ಬ್ಯಾಲೆಟ್​ ಬಾಕ್ಸ್ ಸ್ಟ್ರಾಂಗ್​ ರೂಂಗೆ ಕೊಂಡೊಯೊಯ್ಯತ್ತಿರುವ ಚುನಾವಣಾ ಸಿಬ್ಬಂದಿ

ಮಂಡ್ಯ: ಸಕ್ಕರೆ ನಾಡಿನಲ್ಲಿ ಯಾವ ಗೊಂದಲವಿಲ್ಲದೆ ಮೊದಲ ಹಂತದ ಗ್ರಾಮ ಪಂಚಾಯತ್​ ಚುನಾವಣೆ ನಡೆಯಿತು. ಶೇ. 85.96 ಮತದಾನ ನಡೆದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ.

ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ಸೇರಿ ಮೂರು ತಾಲೂಕುಗಳ 126 ಗ್ರಾ.ಪಂಗಳ  2,011 ಸ್ಥಾನಗಳಲ್ಲಿ 364 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 1,646 ಸ್ಥಾನಗಳಿಗೆ 4,010 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ಇಂದು ನಡೆದ ಚುನಾವಣೆಯಲ್ಲಿ ಮಂಡ್ಯ ತಾಲೂಕಿನಲ್ಲಿ ಶೇ.86.21, ಮದ್ದೂರಿನಲ್ಲಿ ಶೇ.87.03, ಮಳವಳ್ಳಿಯಲ್ಲಿ‌ ಶೇ.84.53 ಮತದಾನ ನಡೆದಿದೆ. ಕೊರೊನಾ ಹಿನ್ನೆಲೆ ಸಾರ್ವಜನಿಕರು ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಪಾಡಿಕೊಂಡು ತಮ್ಮ ಹಕ್ಕು ಚಲಾಯಿಸಿದರು.

21:36 December 22

GP ELECTIONS
ಬಂಟ್ವಾಳದಲ್ಲಿ ನಡೆದ ಮತದಾನದ ಚಿತ್ರಣ

ಬಂಟ್ವಾಳ : ತಾಲೂಕಿನ 57 ಗ್ರಾ.ಪಂಗಳ 822 ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಶೇ.77.7 ರಷ್ಟು ಮತದಾನವಾಗಿದೆ. ಚುನಾವಣಾ ಶಾಖೆಯ ಕಂಟ್ರೋಲ್ ರೂಮ್ ನೀಡಿದ ಮಾಹಿತಿ ಪ್ರಕಾರ, ಒಟ್ಟು 2,77,133 ಮತದಾರರ ಪೈಕಿ 2,15,535 ಮಂದಿ ಮತ ಚಲಾಯಿಸಿದ್ದಾರೆ. ಇವರಲ್ಲಿ 1,04,156 ಪುರುಷರು, 1,11,376 ಮಹಿಳೆಯರು ಹಾಗೂ 3 ಇತರರು ಹಕ್ಕು ಚಲಾಯಿಸಿದ್ದಾರೆ. ಮತದಾನ ಪೂರ್ಣಗೊಂಡ ಕೂಡಲೇ ಮತಪೆಟ್ಟಿಗೆಗಳನ್ನು ಭದ್ರಪಡಿಸಿ ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿರುವ ಮೂರು ಸ್ಟ್ರಾಂಗ್​ ರೂಮ್​ಗಳಿಗೆ ತರಲಾಯಿತು.

21:06 December 22

1,17,383 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ

ಮೊದಲ ಹಂತದ ಗ್ರಾಮ ಪಂಚಾಯತ್​ ಚುನಾವಣೆ ಮುಕ್ತಾಯಗೊಂಡಿದ್ದು, ಶೇ. 83.69 ಮತದಾನವಾಗಿದೆ. ಒಟ್ಟು 2,930 ಗ್ರಾ.ಪಂ.ಗಳಿಗೆ ಇಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಿತು. 1,17,383 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. 

20:47 December 22

GP ELECTIONS
ರಾಣೆಬೆನ್ನೂರಿನಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡ ಚುನಾವಣಾ ಪ್ರಕ್ರಿಯೆ

ರಾಣೆಬೆನ್ನೂರು: ತಾಲೂಕಿನ 33 ಗ್ರಾಮ ಪಂಚಾಯತ್​ಗೆ ನಡೆದ ಚುನಾವಣೆಯಲ್ಲಿ ಶೇ. 83.51 ರಷ್ಟು ಮತದಾನವಾಗಿದೆ. ತಾಲೂಕಿನಲ್ಲಿ ಒಟ್ಟು 40 ಗ್ರಾಮ ಪಂಚಾಯತ್​ಗಳ ಪೈಕಿ 33 ಗ್ರಾಮ‌ ಪಂಚಾಯತ್​ಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದಿದೆ. ಒಟ್ಟು 236 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, 66,057 ಪುರುಷರು, 61,782 ಮಹಿಳೆಯರು ಸೇರಿದಂತೆ ಒಟ್ಟು 1,27,839 ಜನರು ಹಕ್ಕು ಚಲಾಯಿಸಿದರು.  

ಕಪ್ಪು ಬಾವುಟ ಪ್ರದರ್ಶಿಸಿ ಮತದಾನ : ತಾಲೂಕಿನ ಅಸುಂಡಿ ಗ್ರಾಮದಲ್ಲಿ ಕಳೆದ ಒಂದು ದಶಕದಿಂದ ಮೂಲಸೌಕರ್ಯ ವಂಚಿತವಾಗಿರುವ ಎಸ್ಸಿ ಜನಾಂಗದ ಮತದಾರರು ಕಪ್ಪು ಬಾವುಟ ಪ್ರದರ್ಶಿಸಿ ಮೆರವಣಿಗೆ ‌ಮಾಡಿದರು. ತಮ್ಮ ಕಾಲೊನಿಯಿಂದ ಮತದಾನ ಕೇಂದ್ರದವರೆಗೆ ಘೋಷಣೆ ಕೂಗುತ್ತಾ ತೆರಳಿ ಆಕ್ರೋಶ ವ್ಯಕ್ತಪಡಿಸಿದರು.

20:41 December 22

ಪಿಪಿಇ ಕಿಟ್​ ಧರಿಸಿ ಬಂದು ಮತ ಚಲಾಯಿಸಿದ ಕೊರೊನಾ ರೋಗಿಗಳು

GP ELECTIONS
ಕೋವಿಡ್ ರೋಗಿಗಳಿಂದ ಮತ ಚಲಾವಣೆ

ಮುದ್ದೇಬಿಹಾಳ/ಮಂಡ್ಯ : ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾ.ಪಂನಲ್ಲಿ ಪಿಪಿಇ ಕಿಟ್ ಧರಿಸಿಕೊಂಡು ಬಂದು ಕೊರೊನಾ ರೋಗಿಯೊಬ್ಬರು ಮತದಾನ ಮಾಡಿದರು. ಕವಡಿಮಟ್ಟಿ ಗ್ರಾಮದ ಬೂತ್ ಸಂಖ್ಯೆ 47/ಎಯಲ್ಲಿ ಕವಡಿಮಟ್ಟಿ ಗ್ರಾಮದ ಕೋವಿಡ್ ರೋಗಿ ಸಂಖ್ಯೆ 2561 ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮತದಾನ ಮಾಡಿದರು.

ಕೈ ಬೆರಳಿಗೆ ಶಾಯಿ ಹಾಕಲು ನಡುಗಿದ ಚುನಾವಣಾ ಸಿಬ್ಬಂದಿ : ಮತ ಚಲಾಯಿಸಿದ ಬಳಿಕ ಭಯದಿಂದ ಕೋವಿಡ್ ಸೋಂಕಿತನ ಕೈ ಬೆರಳಿಗೆ ಶಾಯಿ ಹಾಕಲು ಚುನಾವಣಾ ಸಿಬ್ಬಂದಿ ಹಿಂದೇಟು ಹಾಕಿದರು.ಈ ವೇಳೆ ಗರಸಂಗಿ ಪಿಹೆಚ್​ಸಿ ವೈದ್ಯಾಧಿಕಾರಿ ಡಾ.ಎಂ.ಎಸ್.ಪಾಟೀಲ ಶಾಯಿ ಹಾಕಿದರು

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಉಪ್ಪಿನಕೆರೆ ಗ್ರಾಮದ ಮತಗಟ್ಟೆಯಲ್ಲೂ ಕೋವಿಡ್​ ರೋಗಿಯೊಬ್ಬರು ಮುಂಜಾಗೃತ ಕ್ರಮಗಳೊಂದಿಗೆ ಬಂದು ಹಕ್ಕು ಚಲಾಯಿಸಿದರು. 

20:40 December 22

ಕೊನೆ ವೇಳೆಗೆ ಬರ್ಗಿ ಮತಗಟ್ಟೆಯಲ್ಲಿ ಸಾಲುಗಟ್ಟಿ ನಿಂತ ಜನ

ಕಾರವಾರದ ಬರ್ಗಿ ಮತಗಟ್ಟೆಯಲ್ಲಿ ಸಾಲುಗಟ್ಟಿ ನಿಂತ ಜನ

ಕಾರವಾರ : ಕುಮಟಾ ತಾಲೂಕು ಬರ್ಗಿಯ ಮತಗಟ್ಟೆ ಸಂಖ್ಯೆ 1 ರಲ್ಲಿ ಸಂಜೆಯಾಗುತ್ತಿದ್ದಂತೆ ನೂರಕ್ಕೂ ಹೆಚ್ಚು ಜನರು ಮತ ಚಲಾಯಿಸಲು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು.

ಬೆಳಗ್ಗೆ ಹೆಚ್ಚಿನ ಜನರು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿ ಹೋಗಿದ್ದರು, ಮಧ್ಯಾಹ್ನ ಜನರ ಸಂಖ್ಯೆ ಕೊಂಚ ಕಡಿಮೆಯಾಗಿತ್ತು. ಆದರೆ, ಸಂಜೆ ವೇಳೆ ಮತ್ತೆ ಜನರು ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂತು.

19:37 December 22

ಮತಗಟ್ಟೆಯಲ್ಲಿ ಗೊಂದಲಕ್ಕೀಡಾದ ಯುವತಿ ರಾಧಿಕಾ

ಕಾರವಾರ : ಇವಿಎಂ ಮತಯಂತ್ರವಿದೆ ಅಂದುಕೊಂಡು ತಾಲೂಕಿನ ಶೇಜವಾಡ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಮೊದಲ ಬಾರಿ ಮತ ಚಲಾಯಿಸಲು ಬಂದ ರಾಧಿಕಾ ಎಂಬ ಯುವತಿ ಕೊಂಚ ಗೊಂದಲಕ್ಕೀಡಾಗಿದ್ದಳು. ಬಳಿಕ ಬೇರೆಯವರು ಮತ ಚಲಾಯಿಸುವುದನ್ನು ನೋಡಿ ತನ್ನ ಹಕ್ಕು ಚಲಾಯಿಸಿದಳು.

ಮತದಾನ ಮಾಡಿದ ಬಳಿಕ ಈಟಿವಿ ಭಾರತ್​ ಜೊತೆ ಮಾತನಾಡಿದ ರಾಧಿಕಾ, ಮತಯಂತ್ರದ ಮೂಲಕ ಮತದಾನ ಮಾಡುವುದು ಎಂದುಕೊಂಡು ಮನೆಯಿಂದ ಬಂದಿದ್ದೆ. ಇಲ್ಲಿ ಬಂದಾಗ ಚೀಟಿ ಕೊಟ್ಟು ಡಬ್ಬಕ್ಕೆ ಹಾಕುವುದೆಂದು ಗೊತ್ತಾಯಿತು. ಸ್ವಲ್ಪ ಗೊಂದಲಕ್ಕೊಳಗಾದರು, ಕೊನೆಗೆ ಬೇರೆಯವರನ್ನು ನೋಡಿ ನನ್ನ ಮೊದಲ ಮತ ಚಲಾಯಿಸಿದೆ ಎಂದಳು.

19:36 December 22

GP ELECTIONS
ಕೋಟತಟ್ಟು ಮತ ಕೇಂದ್ರದಲ್ಲಿ ಹಕ್ಕು ಚಲಾಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ : ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಜಿಲ್ಲೆಯ ಕೋಟತಟ್ಟು ಮತ ಕೇಂದ್ರದಲ್ಲಿ ಪತ್ನಿ ಶಾಂತ, ಪುತ್ರಿಯರಾದ ಸ್ವಾತಿ, ಶ್ರುತಿ ಜೊತೆ ಆಗಮಿಸಿ ಮತದಾನ ಮಾಡಿದರು.  

ಈ ವೇಳೆ ಮಾತನಾಡಿದ ಅವರು, ಗ್ರಾಮ ಪಂಚಾಯತ್​ ಚುನಾವಣೆ ಅಂದರೆ, ಆಳಿಸಿಕೊಳ್ಳುವವರ ಆಡಳಿತ‌. ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಂಡರೆ ಗ್ರಾಮ ಅಭಿವೃದ್ಧಿಯಾಗಲು ಸಾಧ್ಯ. ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಗ್ರಾಮಾಭಿವೃದ್ಧಿ ಮಾಡೋಣ. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ ಎಂದರು. 

19:35 December 22

GP ELECTIONS
ಹೊಯ್ಸಳಲು ಗ್ರಾಮದಲ್ಲಿ ಮತಗಟ್ಟೆಯಲ್ಲಿ ಕೆಲಕಾಲ ಬಿಗುವಿನ ವಾತವರಣ ನಿರ್ಮಾಣವಾಗಿತ್ತು

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮದಲ್ಲಿ ಮತಗಟ್ಟೆ ಸಮೀಪ ಅಭ್ಯರ್ಥಿಗಳ ಚಿಹ್ನೆಗೆ ಗುರುತು ಮಾಡುತ್ತಿದ್ದ ಅರೋಪ ಕೇಳಿ ಬಂದ ಹಿನ್ನೆಲೆ, ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.  

ಸ್ಥಳಕ್ಕೆ ಗೋಣಿಬೀಡು ಪೊಲೀಸರು ಆಗಮಿಸಿ ಅಭ್ಯರ್ಥಿಗಳನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರು. ಘಟನೆಯ ಕುರಿತು ಒಂದು ಗುಂಪು ಜಿಲ್ಲಾಧಿಕಾರಿಗೆ ದೂರು ಕೊಡಲು ಮುಂದಾಗಿತ್ತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಎರಡೂ ಕಡೆಯವರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಇದರಿಂದ ಕೆಲಕಾಲ ಮತದಾನಕ್ಕೆ ಸ್ಥಗಿತಗೊಂಡಿತ್ತು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು.

17:50 December 22

ಜುಮಲಾಪುರ ದೊಡ್ಡ ತಾಂಡಾದ ಜನರಿಂದ ಚುನಾವಣೆ ಬಹಿಷ್ಕಾರ

ಸುರಪುರ : ಹುಣಸಗಿ ತಾಲೂಕು ಜುಮಲಾಪುರ ದೊಡ್ಡ ತಾಂಡಾದ ಜನರು ಚುನಾವಣೆ ಬಹಿಷ್ಕರಿಸಿದ್ದಾರೆ. ತಹಶೀಲ್ದಾರ್​ ಮತದಾರರ ಮನವೊಲಿಸಲು ಎಷ್ಟೇ ಪ್ರಯತ್ನಪಟ್ಟರೂ ವಿಫಲವಾಗಿದೆ.

ತಾಂಡಾಕ್ಕೆ ಕೇವಲ ಒಂದು ಗ್ರಾಮ ಪಂಚಾಯತ್​ ಸದಸ್ಯ ಸ್ಥಾನ ನೀಡಲಾಗಿದ್ದು, ಇದರಿಂದ ತಾಂಡಾದ ಅಭಿವೃದ್ಧಿಗೆ ತೊಂದರೆಯಾಗಿದೆ. ಆದ್ದರಿಂದ ಎರಡು ಸದಸ್ಯ ಸ್ಥಾನ ನೀಡಬೇಕೆಂಬುವುದು ಜನರ ಆಗ್ರಹವಾಗಿದೆ.

17:39 December 22

ಗಾಲಿ ಕುರ್ಚಿಯಲ್ಲಿ ಬಂದು ಮತದಾನ ಮಾಡಿದ ವೃದ್ಧೆ

ಕಾರವಾರ : ನಡೆಯಲಾಗದೆ ಹಾಸಿಗೆ ಮೇಲಿರುವ 87 ವರ್ಷದ ವೃದ್ಧೆಯೊಬ್ಬರು ಗಾಲಿ ಕುರ್ಚಿಯಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿ ಮಾದರಿಯಾದರು.

ಕಾರವಾರ ತಾಲೂಕು ಅಸ್ನೋಟಿಯ ವೃದ್ಧೆ ಶಾಂತಾಬಾಯಿ ಅಸ್ನೋಟಿಕರ್, ಮಕ್ಕಳ ಸಹಾಯದಿಂದ ಆಟೋದಲ್ಲಿ ಅಸ್ನೋಟಿ ಶಾಲೆಯ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

17:38 December 22

ಮತದಾನ ಮಾಡಿ ಮಾದರಿಯಾದ ವೃದ್ಧೆಯರು

GP ELECTIONS
ಮತದಾನ ಮಾಡಿ ಮಾದರಿಯಾದ ವೃದ್ಧೆಯರು

ಮಂಗಳೂರು : ಇಳಿ ವಯಸ್ಸಿನಲ್ಲೂ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ವೃದ್ಧೆಯರು ಇತರರಿಗೆ ಮಾದರಿಯಾದರು. ಬಂಟ್ವಾಳ ತಾಲೂಕು ಸಜಿಪನಡು ಶಾಲೆಯಲ್ಲಿ ಇಬ್ಬರು ವೃದ್ಧೆಯರು ಮತ ಚಲಾಯಿಸಿದರು. ಒಬ್ಬರು ಮೊಮ್ಮಗನ ಸಹಾಯದಿಂದ ಬಂದರೆ, ಮತ್ತೋರ್ವರು ಮಗನ ಸಹಾಯದಿಂದ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.  

16:58 December 22

ಹಕ್ಕು ಚಲಾಯಿಸಿದ ಶಾಸಕ ಗೂಳಿಹಟ್ಟಿ ಶೇಖರ್

GP ELECTIONS
ಹಕ್ಕು ಚಲಾಯಿಸಿದ ಶಾಸಕ ಗೂಳಿಹಟ್ಟಿ ಶೇಖರ್

ಚಿತ್ರದುರ್ಗ : ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್​ ಸ್ವಗ್ರಾಮ ಗೂಳಿಹಟ್ಟಿ ಭೋವಿಹಟ್ಟಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಹೊಸದುರ್ಗ ತಾಲೂಕಿನ‌ಲ್ಲಿ ಮಧ್ಯಾಹ್ನ ವೇಳೆಗೆ ಶೇ. 47.48 ಮತದಾನವಾಗಿತ್ತು.

16:57 December 22

ರಂತಡ್ಕ ಶಾಲೆಯಲ್ಲಿ ಶಾಸಕ ಯು.ಟಿ ಖಾದರ್ ಮತಚಲಾವಣೆ

GP ELECTIONS
ಹಕ್ಕು ಚಲಾಯಿಸಿದ ಶಾಸಕ ಯುಟಿ ಖಾದರ್

ಮಂಗಳೂರು : ಉಳ್ಳಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾ.ಪಂ ಚುನಾವಣೆಯ ಮತದಾನ ಮುಂದುವರೆದಿದ್ದು, ಬೋಳಿಯಾರು ರಂತಡ್ಕ ಶಾಲೆಯ ಮತಗಟ್ಟೆಯಲ್ಲಿ ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಮತ ಚಲಾಯಿಸಿದರು.

16:26 December 22

ಚುನಾವಣಾ ಏಜೆಂಟ್​ಗೆ ಡಿಸಿ ತರಾಟೆ

GP ELECTIONS
ಚುನಾವಣಾ ಏಜೆಂಟ್​ಗೆ ಡಿಸಿ ತರಾಟೆ

ರಾಯಚೂರು : ತಾಲೂಕಿನ ಗುಂಜಳ್ಳಿ, ಯರಗೇರಾ ಗ್ರಾಮದ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮತದಾರರ ಜೊತೆ ಮಾತನಾಡಿದ ಏಜೆಂಟ್​ನ್ನು ಜಿಲ್ಲಾಧಿಕಾರಿ ತರಾಟೆಗೆ​ ತೆಗೆದುಕೊಂಡರು. ಮತದಾನಕ್ಕೆ ಬರುವರ ಮಾಹಿತಿ ಮತ್ತು ಪೋಟೋ ಮಾತ್ರ ನೋಡಿ, ಅದು ಬಿಟ್ಟು ಅವರ ಜೊತೆಗೆ ಮಾತನಾಡದಂತೆ ತಾಕೀತು ಮಾಡಿದರು.

16:26 December 22

ಹಂಗರಕಿ ಗ್ರಾಮದಲ್ಲಿ ಅಮೃತ ದೇಸಾಯಿ ಮತ ಚಲಾವಣೆ

GP ELECTIONS
ಮತ ಚಲಾಯಿಸಿ ಹೊರಬರುತ್ತಿರುವ ಶಾಸಕ ಅಮೃತ ದೇಸಾಯಿ

ಧಾರವಾಡ : ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ತಾಲೂಕಿನ ಹಂಗರಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಇದೇ ಪ್ರಥಮ ಬಾರಿಗೆ ಹಂಗರಕಿ ಗ್ರಾಮದಲ್ಲಿ ಚುನಾವಣೆ ನಡೆಯುತ್ತಿದ್ದು, ಇಷ್ಟು ವರ್ಷ ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಗುತ್ತಿತ್ತು.  

15:43 December 22

ಹೆಬ್ಬಾಳು ಗ್ರಾಮದ ಮತದಾರರ ಪಟ್ಟಿಯಲ್ಲಿ ಗೊಂದಲ : ಡಿಸಿಯಿಂದ ಅಭ್ಯರ್ಥಿಗಳ ಸಭೆ

GP ELECTIONS
ದಾವಣಗೆರೆ ಜಿಲ್ಲಾಧಿಕಾರಿ‌ ಮಹಾಂತೇಶ್ ಬೀಳಿಗಿ

ದಾವಣಗೆರೆ : ಮತದಾರರ ಪಟ್ಟಿ ಅದಲು ಬದಲಾಗಿ ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಗೊಂದಲ ಉಂಟಾಗಿದ್ದು, ಮತದಾನ ಪ್ರಕ್ರಿಯೆ ಸ್ಥತಗಿತಗೊಳಿಸಲಾಗಿದೆ.

ಒಂದು ಮತ್ತು ಎರಡನೇ ವಾರ್ಡ್​ನ ​ಮತದಾರರ ಪಟ್ಟಿಯಲ್ಲಿ ಗೊಂದಲ ಉಂಟಾಗಿದೆ. ಜಿಲ್ಲಾಧಿಕಾರಿ‌ ಮಹಾಂತೇಶ್ ಬೀಳಿಗಿ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿ, ಮತದಾರ ಪಟ್ಟಿ ಅದಲು ಬದಲಾಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಆಗಿರುವ ಎಡವಟ್ಟಿನ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತಂದು, ಅವರ ನಿರ್ದೇಶನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.  

15:41 December 22

ಶಾಸಕರಾದ ಅರಗ ಜ್ಞಾನೇಂದ್ರ, ಅಶೋಕ ನಾಯ್ಕರಿಂದ ಹಕ್ಕು ಚಲಾವಣೆ

ಶಿವಮೊಗ್ಗ : ತೀರ್ಥಹಳ್ಳಿ ಶಾಸಕ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ, ಪತ್ನಿಯ ಜೊತೆ‌ ಬಂದು ತೀರ್ಥಹಳ್ಳಿ ತಾಲೂಕು ಆರಗ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಅದೇ ರೀತಿ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ ನಾಯ್ಕ, ಪತ್ನಿ ರತ್ನಕುಮಾರಿ ಹಾಗೂ ಪುತ್ರ ಕಾರ್ತಿಕ್ ಜೊತೆ ಶಿವಮೊಗ್ಗ ತಾಲೂಕು ಹಸೂಡಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆ ತನಕ ಶೇ. 46.17 ರಷ್ಟು ಮತದಾನವಾಗಿದೆ.

15:10 December 22

ದೊಡ್ಡರಸಿನಕೆರೆಯಲ್ಲಿ ಮತ ಚಲಾಯಿಸಿದ ಸಂಸದೆ ಸುಮಲತಾ ಅಂಬರೀಶ್​

GP ELECTIONS
ಸಂಸದೆ ಸುಮಲತಾ ಅಂಬರೀಶ್​

ಮಂಡ್ಯ:  ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಮತ ಚಲಾಯಿಸಿದರು. ಸಂಸದೆಯಾದ ಬಳಿಕ, ಇದೇ ಮೊದಲ ಬಾರಿಯಾಗಿದೆ ಸುಮಲತಾ ಅಂಬರೀಶ್​ ಹಕ್ಕು ಚಲಾಯಿಸಿದ್ದು. ಮತ ಚಲಾಯಿಸಿದ ಬಳಿಕ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಅವರು, ಮತದಾನ ಎಲ್ಲರ ಹಕ್ಕು, ನಾನು ಕೂಡ ನನ್ನ ಹಕ್ಕು ಚಲಾಯಿಸಿದ್ದೇನೆ ಎಂದರು.   

14:28 December 22

ಉಡುಪಿಯಲ್ಲಿ ಉತ್ತಮ ಪ್ರತಿಕ್ರಿಯೆ

GP ELECTIONS
ಉಡುಪಿಯಲ್ಲಿ ಉತ್ತಮ ಪ್ರತಿಕ್ರಿಯೆ
  • ಉಡುಪಿ ಜಿಲ್ಲೆಯಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ
  • ಮಧ್ಯಾಹ್ನ 1 ಗಂಟೆಯ ವರೆಗೆ ಶೇ.34 ರಷ್ಟು ಮತದಾನ
  • ಉಡುಪಿ ತಾಲೂಕಿನಲ್ಲಿ ಶೇ.34, ಹೆಬ್ರಿಯಲ್ಲಿ ಶೇ.35
  • ಬ್ರಹ್ಮಾವರ ಶೇ.33 ಹಾಗೂ ಬೈಂದೂರು ತಾಲೂಕಿನಲ್ಲಿ ಶೇ.29ರಷ್ಟು ವೋಟಿಂಗ್​​
  • ನಕ್ಸಲ್ ಪೀಡಿತ ಪ್ರದೇಶಗಳಲ್ಲಿಯೂ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ
  • ಮಧ್ಯಾಹ್ನ 3 ಗಂಟೆಯ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತಗಟ್ಟೆಗೆ ಆಗಮಿಸುವ ನಿರೀಕ್ಷೆ

14:22 December 22

ಮತಗಟ್ಟೆ ಅಧಿಕಾರಿಗೆ ಮೂರ್ಛೆ ರೋಗ

ಮತಗಟ್ಟೆ ಅಧಿಕಾರಿಗೆ ಮೂರ್ಛೆ ರೋಗ
  • ಮತಗಟ್ಟೆ ಅಧಿಕಾರಿಗೆ ಮೂರ್ಛೆ ರೋಗ
  • ಕುಸಿದು ಬಿದ್ದ ಪಿಆರ್​​ಓ ಉಮೇಶ ಸಾಳುಂಕೆ
  • ಬೀದರ್​​ನ ಬಸವಕಲ್ಯಾಣದ ಹಾರಕೂಡ ಗ್ರಾಮದಲ್ಲಿ ಘಟನೆ
  • ಬಸವಕಲ್ಯಾಣ ಆಸ್ಪತ್ರೆಗೆ ದಾಖಲು

14:16 December 22

ಮತ ಚಲಾಯಿಸಿದ ಮಾಜಿ ಸಚಿವ ಎ ಮಂಜು

ಮತ ಚಲಾಯಿಸಿದ ಮಾಜಿ ಸಚಿವ ಎ ಮಂಜು
  • ಸ್ವಗ್ರಾಮದಲ್ಲಿ ಮತ ಚಲಾಯಿಸಿದ ಮಾಜಿ ಸಚಿವ ಎ ಮಂಜು
  • ಹಾಸನದ ಹನ್ಯಾಳುವಿನಲ್ಲಿ ಪತ್ನಿ ತಾರಾ ಜೊತೆ ಬಂದು ಮತದಾನ

14:13 December 22

ಶತಾಯುಷಿ ಅಜ್ಜಿಯರಿಂದ ಮತದಾನ

GP ELECTIONS
ಶತಾಯುಷಿ ಅಜ್ಜಿಯರಿಂದ ಮತದಾನ
  • ಶತಾಯುಷಿ ಅಜ್ಜಿಯರಿಂದ ಮತದಾನ
  • ಮೈಸೂರು ಹಾಗೂ ಚಾಮರಾಜನಗರದಲ್ಲಿ ವೋಟಿಂಗ್​
  • ಹೆಚ್.ಡಿ.ಕೋಟೆ ತಾಲೂಕಿನ ಬೋರಮ್ಮ,
  • ಚಾಮರಾಜನಗರ ತಾಲೂಕಿನ ಹಿರೇಬೇಗೂರು ಗ್ರಾಮದ ಮಾದಮ್ಮರಿಂದ ಹಕ್ಕು ಚಲಾವಣೆ

13:24 December 22

ಮದುವೆಗೂ ಮುನ್ನ ವಧುವಿನಿಂದ ಮತ ಚಲಾವಣೆ

GP ELECTIONS
ಮದುವೆಗೂ ಮುನ್ನ ವಧುವಿನಿಂದ ಮತ ಚಲಾವಣೆ
  • ಹಸೆಮಣೆ ಏರುವ ಮುನ್ನ ಬಂದು ವೋಟ್​ ಮಾಡಿದ ಯುವತಿ
  • ಚಿತ್ರದುರ್ಗ ತಾಲೂಕಿನ‌ ಮಠದ ಕುರುಬರಹಟ್ಟಿ ಗ್ರಾಮದ ಯುವತಿ ಭವಾನಿಯಿಂದ ಮತದಾನ
  • ಅರಿಶಿಣ ಶಾಸ್ತ್ರ ಮುಗಿಸಿ ನೇರವಾಗಿ ಮತಗಟ್ಟೆಗೆ ಬಂದ ವಧು
  • ಸಹೋದರನೊಂದಿಗೆ ಬಂದು ಮತ ಚಲಾಯಿಸಿ ಮಂಟಪಕ್ಕೆ ತೆರಳಿದ ಭವಾನಿ

13:10 December 22

ಡಿಕೆಶಿಯಿಂದ ಹಕ್ಕು ಚಲಾವಣೆ

GP ELECTIONS
ಡಿಕೆಶಿಯಿಂದ ಹಕ್ಕು ಚಲಾವಣೆ
  • ಮತ ಚಲಾಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
  • ಪತ್ನಿ ಉಷಾ ಶಿವಕುಮಾರ್ ಜೊತೆ ಬಂದು ವೋಟ್​​ ಮಾಡಿದ ಡಿಕೆಶಿ
  • ಕನಕಪುರದ ಸಾತನೂರಿನ ದೊಡ್ಡಾಲಹಳ್ಳಿಯಲ್ಲಿ ಮತದಾನ

13:04 December 22

ದಾವಣಗೆರೆಯಲ್ಲಿ ಮಾರಾಮಾರಿ- ವಾಗ್ವಾದ

ದಾವಣಗೆರೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ
  • ದಾವಣಗೆರೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ
  • ದಾವಣಗೆರೆ ತಾಲೂಕಿನ ಹದಡಿ ಗ್ರಾಮದ ಮತಗಟ್ಟೆಯಲ್ಲಿ ಘಟನೆ
  • ಅಭ್ಯರ್ಥಿಗಳ ಪರ ಪ್ರಚಾರಕರ ಮಧ್ಯೆ ಜಗಳ
  • ಮತದಾರರನ್ನು ಸೆಳೆಯಲು ಮತಗಟ್ಟೆ ಸಮೀಪವೇ ನಿಂತಿದ್ದ ಬೆಂಬಲಿಗರು
  • ಪೋಲಿಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣ
  • ಇನ್ನು ಹೆಬ್ಬಾಳದ ಮತಗಟ್ಟೆಯಲ್ಲಿ ಮತದಾರರು-ಚುನಾವಣಾಧಿಕಾರಿಗಳ ನಡುವೆ ವಾಗ್ವಾದ
  • ಮತದಾರರ ಪಟ್ಟಿಯಲ್ಲಿ ಆಗಿರುವ ಗೊಂದಲ ಸರಿಪಡಿಸುವಂತೆ ಮತಗಟ್ಟೆಗೆ ನುಗ್ಗಿದ ಜನರು

12:59 December 22

ಧಾರವಾಡ: ಮತದಾನದ ದಿನವೇ ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿ

GP ELECTIONS
ಮತದಾನದ ದಿನವೇ ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿ
  • ಮತದಾನದ ದಿನವೇ ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿ
  • ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಘಟನೆ
  • ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿದ್ದ ದಾಮೋದರ ಎಲಿಗಾರ (33) ಆತ್ಮಹತ್ಯೆ
  • ಗರಗ ಗ್ರಾಮದ 2ನೇ ವಾರ್ಡ್​ಗೆ ಸ್ಪರ್ಧೆ ಮಾಡಿದ್ದ ದಾಮೋದರ
  • ಸೋಲಿನ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ‌ ಶಂಕೆ

12:42 December 22

ಶಿವಮೊಗ್ಗದಲ್ಲಿ ಮತದಾನದ ದಿನವೇ ಕಾಂಚಣ ಸದ್ದು..

  • ಮತಗಟ್ಟೆಯ ಬಳಿಯೇ ಮತದಾರರಿಗೆ ಹಣ ಹಂಚುತ್ತಿರುವ ಅಭ್ಯರ್ಥಿ
  • ಕುಬೇರ್ ನಾಯ್ಕ ಎಂಬ ಅಭ್ಯರ್ಥಿಯಿಂದ ಹಣ ಹಂಚಿಕೆ ಆರೋಪ
  • ಭದ್ರಾವತಿ ತಾಲೂಕು ಕೊಡ್ಲಿಗೆರೆ ಗ್ರಾಮ ಪಂಚಾಯತಿಗೆ ಸ್ಪರ್ಧಿಸಿರುವ ಕುಬೇರ್ ನಾಯ್ಕ
  • ಕಲ್ಪನಹಳ್ಳಿಯ ಮತಗಟ್ಟೆಯ ಬಳಿ ಹಣ ಹಂಚುತ್ತಿರುವ ವಿಡಿಯೋ ವೈರಲ್

12:32 December 22

ಹಕ್ಕು ಚಲಾಯಿಸಿದ ಶಾಸಕಿ ರೂಪಾಲಿ ನಾಯ್ಕ

  • ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕರಿಂದ ಮತ ಚಲಾವಣೆ
  • ಕಾರವಾರದ ಚೆಂಡಿಯಾದಲ್ಲಿ ವೋಟ್​ ಮಾಡಿದ ಶಾಸಕಿ
  • ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯಿತಿ ಪ್ರಮುಖ ಪಾತ್ರವಹಿಸುತ್ತದೆ
  • ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಬೇಕು
  • ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು
  • ಮತದಾನದ ಬಳಿಕ ರೂಪಾಲಿ ನಾಯ್ಕ ಹೇಳಿಕೆ

12:25 December 22

ರಾಯಚೂರಲ್ಲಿ ಪೊಲೀಸರು - ಗ್ರಾಮಸ್ಥರ ಮಧ್ಯೆ ಗಲಾಟೆ

  • ಮತದಾನ ಕೇಂದ್ರದಲ್ಲಿ ಪೊಲೀಸರು - ಗ್ರಾಮಸ್ಥರ ಮಧ್ಯೆ ಗಲಾಟೆ
  • ಪೊಲೀಸ್​ ಜೀಪ್ ಮೇಲೆ ಗ್ರಾಮಸ್ಥರಿಂದ ಕಲ್ಲು ತೂರಾಟ​
  • ರಾಯಚೂರು ಜಿಲ್ಲೆಯ ದೇವದುರ್ಗ ತಾ. ಜುಟಮರಡಿ ಗ್ರಾಮದಲ್ಲಿ‌ ಘಟನೆ
  • ಪೊಲೀಸ್ ವಾಹನವೊಂದು ಜಖಂ
  • ಓರ್ವ ಪೇದೆ ಮೇಲೆ ಹಲ್ಲೆ ಆರೋಪ
  • ಮತಗಟ್ಟೆ ಒಳಗೆ ಪ್ರವೇಶಿಸುತ್ತಿದ್ದ ವೇಳೆ ಪೊಲೀಸರ ಜತೆ ಮಾತಿನ ಚಕಮಕಿ

12:20 December 22

ಮತದಾನ ಚಿಹ್ನೆ ಬದಲಾವಣೆ : ಕೆ. ತುಪ್ಪದೂರಲ್ಲಿ ಕೆಲಕಾಲ ಮತದಾನ ಸ್ಥಗಿತ

  • ಅಭ್ಯರ್ಥಿಗಳ ಮತದಾನ ಚಿಹ್ನೆ ಬದಲಾವಣೆಯಿಂದ ಗೊಂದಲ
  • ಮತದಾನ ಕೆಲ‌ಕಾಲ ಸ್ಥಗಿತ
  • ರಾಯಚೂರಿನ ಕೆ. ತುಪ್ಪದೂರಲ್ಲಿ ಘಟನೆ
  • ಅಭ್ಯರ್ಥಿ ಸಿದ್ದಮ್ಮಗೆ ಮಡಿಕೆ ಗುರುತು ಬದಲು ಆಟೋ
  • ಅಭ್ಯರ್ಥಿ ದೇವಮ್ಮಗೆ ಟ್ರ್ಯಾಕ್ಟರ್ ಬದಲು ಗ್ಯಾಸ್ ಸ್ಟೌವ್ ಗುರುತು ನೀಡಲಾಗಿದೆ
  • ಐದು ಜನ ಸ್ಪರ್ಧಿಗಳಲ್ಲಿ ಇಬ್ಬರ ಚಿಹ್ನೆ ಬದಲಾವಣೆ
  • ಅಧಿಕಾರಿಗಳ ಎಡವಟ್ಟಿನಿಂದ ಗೊಂದಲ

12:11 December 22

ಕೊಪ್ಪಳ: ಸ್ವಗ್ರಾಮಗಳಲ್ಲಿ ಮತದಾನ ಮಾಡಿದ ಶಾಸಕರು

GP ELECTIONS
ಸ್ವಗ್ರಾಮಗಳಲ್ಲಿ ಮತದಾನ ಮಾಡಿದ ಶಾಸಕರು
  • ಸ್ವಗ್ರಾಮಗಳಲ್ಲಿ ಮತದಾನ ಮಾಡಿದ ಶಾಸಕರು
  • ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹಾಗೂ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್​ರಿಂದ ಹಕ್ಕು ಚಲಾವಣೆ
  • ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ವೋಟ್​ ಮಾಡಿದ ಹಾಲಪ್ಪ ಆಚಾರ್
  • ಹಿಟ್ನಾಳ್ ಗ್ರಾಮದಲ್ಲಿ ಮತ ಚಲಾಯಿಸಿದ ರಾಘವೇಂದ್ರ ಹಿಟ್ನಾಳ್

11:55 December 22

ಶ್ರವಣಬೆಳಗೊಳ ಶಾಸಕರಿಂದ ಹಕ್ಕು ಚಲಾವಣೆ

ಕುಟುಂಬ ಸಮೇತರಾಗಿ ಬಂದು ವೋಟ್​ ಮಾಡಿದ ಶ್ರವಣಬೆಳಗೊಳ ಶಾಸಕ ಸಿಎನ್ ಬಾಲಕೃಷ್ಣ
  • ಹಾಸನದಲ್ಲಿ ಮಂದಗತಿಯಲ್ಲಿ ಸಾಗಿದ ಮತದಾನ
  • ಜಿಲ್ಲೆಯ ಹೊಳೆನರಸೀಪುರ, ಚನ್ನರಾಯಪಟ್ಟಣ ಸಕಲೇಶಪುರ ಹಾಗೂ ಹಾಸನ ತಾಲೂಕಿನಲ್ಲಿ ವೋಟಿಂಗ್​
  • 9 ಗಂಟೆಯ ವರೆಗೆ ಶೇ 9.8ರಷ್ಟು ಮತದಾನ
  • ಕುಟುಂಬ ಸಮೇತರಾಗಿ ಬಂದು ವೋಟ್​ ಮಾಡಿದ ಶ್ರವಣಬೆಳಗೊಳ ಶಾಸಕ ಸಿಎನ್ ಬಾಲಕೃಷ್ಣ

11:42 December 22

ಮತಗಟ್ಟೆಗಳಲ್ಲಿ ಹಿರಿಯ ನಾಗರಿಕದ್ದೇ ಹವಾ..!

GP ELECTIONS
ಚಾಮರಾಜನಗರದಲ್ಲಿ ಉತ್ಸಾಹದಿಂದ ಬಂದು ವೋಟ್​ ಮಾಡುತ್ತಿರುವ ವೃದ್ಧರು
  • ಚಾಮರಾಜನಗರದಲ್ಲಿ ಯುವಕರನ್ನು ನಾಚಿಸುತ್ತಿರುವ ವೃದ್ಧರು
  • ಮತಗಟ್ಟೆಗಳಲ್ಲಿ ಹಿರಿಯ ನಾಗರಿಕದ್ದೇ ಹವಾ
  • ಉತ್ಸಾಹದಿಂದ ಬಂದು ವೋಟ್​ ಮಾಡುತ್ತಿರುವ ಅಜ್ಜ-ಅಜ್ಜಿಯರು
  • ಮೊಮ್ಮಕ್ಕಳ ಜೊತೆ, ಊರುಗೋಲು, ವೀಲ್ ಚೇರ್​​ಗಳ ಮೂಲಕ ಆಗಮಿಸಿ ಮತದಾನ
  • 40-50 ವರ್ಷದಿಂದ ಮತದಾನ ಮಾಡುತ್ತಿದ್ದೇವೆ
  • ನಮ್ಮ ಇಷ್ಟದ ಅಭ್ಯರ್ಥಿಗೆ ಮತ ಚಲಾಯಿಸಿಕೊಂಡು ಬರುತ್ತಿದ್ದೇವೆ
  • ನಾವು ಇದ್ದಷ್ಟು ದಿನ ವೋಟ್​ ಮಾಡುತ್ತೇವೆಂದ ವೃದ್ಧರು

11:35 December 22

90 ವರ್ಷದ ವೃದ್ಧೆಯನ್ನು ಎತ್ತಿಕೊಂಡು ಬಂದು ಮತದಾನ ಮಾಡಿಸಿದ ಪುತ್ರ

  • ಬಾಗಲಕೋಟೆಯ 88 ಗ್ರಾಮ ಪಂಚಾಯತಿಗಳ ಒಟ್ಟು 1397 ಸ್ಥಾನಗಳಿಗೆ ಇಂದು ಮತದಾನ
  • ಜಮಖಂಡಿ, ಮುಧೋಳ, ಬೀಳಗಿ ತಾಲೂಕಿನಲ್ಲಿ ನಡೆಯುತ್ತಿರುವ ವೋಟಿಂಗ್​
  • 90 ವರ್ಷದ ವೃದ್ಧೆಯನ್ನು ಎತ್ತಿಕೊಂಡು ಬಂದು ಮತದಾನ ಮಾಡಿಸಿದ ಪುತ್ರ
  • ಬೀಳಗಿ ತಾಲೂಕಿನ ಹೊಸ ಕೊರ್ತಿ ಗ್ರಾಮದಲ್ಲಿಲ್ಲದ ವೀಲ್​ ಚೇರ್​ ವ್ಯವಸ್ಥೆ

11:23 December 22

ಹಿರಿಯ ನಟಿ ಡಾ ಲೀಲಾವತಿಯಿಂದ ಮತದಾನ

GP ELECTIONS
ಹಿರಿಯ ನಟಿ ಡಾ ಲೀಲಾವತಿ, ನಟ ವಿನೋದ್​ ರಾಜ್​ರಿಂದ ಮತದಾನ
  • ವೋಟ್​ ಮಾಡಿದ ಕನ್ನಡದ ಹಿರಿಯ ನಟಿ ಡಾ ಲೀಲಾವತಿ
  • ನೆಲಮಂಗಲ ತಾಲೂಕಿನ ಮೈಲನಹಳ್ಳಿ ಗ್ರಾಮದಲ್ಲಿ ಮತದಾನ
  • ಪುತ್ರ, ನಟ ವಿನೋದ್ ರಾಜ್ ಜೊತೆ ಆಗಮಿಸಿ ಹಕ್ಕು ಚಲಾವಣೆ

11:23 December 22

ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್​​ರಿಂದ ಹಕ್ಕು ಚಲಾವಣೆ

  • ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್​​ರಿಂದ ಹಕ್ಕು ಚಲಾವಣೆ
  • ತುಮಕೂರು ತಾಲೂಕಿನ ಗೊಲ್ಲಳ್ಳಿಯಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 293ರಲ್ಲಿ ಮತದಾನ‌
  • ಎಲ್ಲರೂ ಮತದಾನ ಮಾಡುವಂತೆ ಕರೆ ನೀಡಿದ ಕಾಂಗ್ರೆಸ್​ ನಾಯಕ

11:01 December 22

ಕಲ್ಲಹಳ್ಳಿಯಲ್ಲಿ 26 ವರ್ಷದ ಬಳಿಕ ಚುನಾವಣೆ

GP ELECTIONS
ಕಲ್ಲಹಳ್ಳಿಯಲ್ಲಿ 26 ವರ್ಷದ ಬಳಿಕ ಚುನಾವಣೆ
  • ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಉತ್ಸಾಹದಿಂದ ಮತದಾನ
  • ಕಲ್ಲಹಳ್ಳಿಯಲ್ಲಿ ಬರೋಬ್ಬರಿ 26 ವರ್ಷದ ಬಳಿಕ ನಡೆಯುತ್ತಿರುವ ಚುನಾವಣೆ
  • ಇಲ್ಲಿ 9 ಸ್ಥಾನಗಳಿದ್ದು, ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ.
  • 2700 ಮತದಾರರಿದ್ದು, ಈಗಾಗಲೇ ನೂರಕ್ಕೂ ಹೆಚ್ಚು ಜನರು ಹಕ್ಕು ಚಲಾಯಿಸಿದ್ದಾರೆ

10:43 December 22

ಹೆಬ್ಬಾಳು ಗ್ರಾಮದಲ್ಲಿ ಮತದಾನ ಸಂಪೂರ್ಣ ಸ್ಥಗಿತ

  • ದಾವಣಗೆರೆ ಹೆಬ್ಬಾಳು ಗ್ರಾಮದಲ್ಲಿ ಮತದಾನ ಸಂಪೂರ್ಣ ಸ್ಥಗಿತ
  • ಹೆಬ್ಬಾಳು ಗ್ರಾಮದ 2ನೇ ವಾರ್ಡ್ ಮತದಾರರಲ್ಲಿ ಗೊಂದಲ
  • ಎರಡು ವಾರ್ಡ್​ಗಳಲ್ಲಿ 12 ಅಭ್ಯರ್ಥಿಗಳು ಸ್ಪರ್ಧೆ
  • ಒಂದನೇ ವಾರ್ಡ್ ಅಭ್ಯರ್ಥಿ 2ನೇ ವಾರ್ಡ್​ನಲ್ಲಿ ಪ್ರಚಾರ
  • 2ನೇ ವಾರ್ಡ್​ ಅಭ್ಯರ್ಥಿ 1ನೇ ವಾರ್ಡ್​ನಲ್ಲಿ ಪ್ರಚಾರ
  • ಹೀಗಾಗಿ ಮತದಾನದ ವೇಳೆ ಬೇರೆ ಅಭ್ಯರ್ಥಿಗಳ ಚಿಹ್ನೆಗಳು ಕಂಡು ಜನರಲ್ಲಿ ಗೊಂದಲ
  • ಸದ್ಯಕ್ಕೆ  ಮತದಾನ ಸಂಪೂರ್ಣ ಸ್ಥಗಿತವಾಗಿದೆ
  • ಸ್ಥಳಕ್ಕೆ ದಾವಣಗೆರೆ ತಹಶೀಲ್ದಾರ್ ಗಿರೀಶ್ ಭೇಟಿ
  • ಗ್ರಾಮ ಪಂಚಾಯಿತಿಯಲ್ಲಿ ಅಭ್ಯರ್ಥಿಗಳಿಂದ ಸಭೆ
  • ಒಟ್ಟು 1704 ಮತದಾರರಿರುವ ಹೆಬ್ಬಾಳು ಗ್ರಾಮ

10:19 December 22

ಕೋಲಾರದಲ್ಲಿ ಗ್ರಾ.ಪಂ ಚುನಾವಣೆ ಬಹಿಷ್ಕಾರ

ಕೋಲಾರದಲ್ಲಿ ಗ್ರಾ.ಪಂ ಚುನಾವಣೆ ಬಹಿಷ್ಕಾರ
  • ಕೋಲಾರದಲ್ಲಿ ಗ್ರಾ.ಪಂ ಚುನಾವಣೆ ಬಹಿಷ್ಕಾರ
  • ರಸ್ತೆ ವ್ಯವಸ್ಥೆ ಮಾಡದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ
  • ಮತದಾನದಿಂದ ದೂರ ಉಳಿಯುವ ಮೂಲಕ ಚುನಾವಣೆ ಬಹಿಷ್ಕಾರ ಹಾಕಿದ ಗ್ರಾಮಸ್ಥರು
  • ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕಂಬಿಪುರ ಗ್ರಾಮದಲ್ಲಿ ಘಟನೆ
  • 9 ಗಂಟೆಯಾದ್ರು ಮತಗಟ್ಟೆಗಳತ್ತ ಸುಳಿಯದ ಜನರು
  • ಗ್ರಾಮಸ್ಥರ ಮನವೊಲಿಸಲು ಮಾಲೂರು ಪೊಲೀಸರು ಹಾಗೂ ತಹಶೀಲ್ದಾರ್ ಯತ್ನ
  • ಯಾರ ಮಾತಿಗೂ ಬೆಲೆ ಕೊಡದ ಗ್ರಾಮಸ್ಥರು
  • ಅವಶ್ಯಕ ಕೆಲಸಗಳಿಗೆ ಅಬ್ಬೇನಹಳ್ಳಿ ಗ್ರಾಮಕ್ಕೆ ಹೋಗಲು ಇಲ್ಲದ ರಸ್ತೆ
  • 1 ಕಿ.ಮೀ ದೂರದಲ್ಲಿರುವ ಗ್ರಾಮಕ್ಕೆ 20 ಕಿ.ಮೀ ಸುತ್ತಿಕೊಂಡು ಹೋಗುವ ಸ್ಥಿತಿ
  • ಹೀಗಾಗಿ ಈ ಬಾರಿ ಚುನಾವಣೆ ಬಹಿಷ್ಕಾರ

09:59 December 22

ತುಮಕೂರು: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ 120 ಕುಕ್ಕರ್ ವಶಕ್ಕೆ

GP ELECTIONS
ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಕುಕ್ಕರ್​ಗಳು ವಶಕ್ಕೆ
  • ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಕುಕ್ಕರ್​ಗಳು ವಶಕ್ಕೆ
  • 120 ಕುಕ್ಕರ್​ಗಳನ್ನು ವಶಕ್ಕೆ ಪಡೆದ ಪೊಲೀಸರು
  • ತುಮಕೂರಿನ ಕುಣಿಗಲ್ ತಾಲೂಕಿನ ಪಡುವಗೆರೆ ಗ್ರಾಮದಲ್ಲಿ ಘಟನೆ
  • ಈಗಾಗಲೇ 30 ಕುಕ್ಕರ್ ಹಂಚಲಾಗಿದೆ ಎಂಬ ಆರೋಪ ಕೇಳಿಬಂದಿದೆ
  • ಕುಕ್ಕರ್ ಸಂಗ್ರಹಿಸಿಟ್ಟ ನಾಗರಾಜ ಎಂಬಾತನನ್ನು ವಶಕ್ಕೆ ಪಡೆದ ಕುಣಿಗಲ್ ಪೊಲೀಸರು

09:54 December 22

ಧಾರವಾಡದಲ್ಲಿ ಶಾಂತಿಯುತ ಮತದಾನ

ಧಾರವಾಡದಲ್ಲಿ ಶಾಂತಿಯುತ ಮತದಾನ
  • ಧಾರವಾಡ ತಾಲೂಕಿನ ಬಹುತೇಕ ಗ್ರಾಮದಲ್ಲಿ ಶಾಂತಿಯುತ ಮತದಾನ
  • ಇಂದು ಧಾರವಾಡ, ಅಳ್ನಾವರ, ಕಲಘಟಗಿ ತಾಲೂಕಿನಲ್ಲಿ ಚುನಾವಣೆ
  • ಕೆಲವು ಗ್ರಾಮಗಳಲ್ಲಿ ಕೋವಿಡ್​ ನಿಯಮ ಪಾಲನೆಯಾಗುತ್ತಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ

09:38 December 22

ಉತ್ತರ ಕನ್ನಡದಲ್ಲಿ ಕೊರೆಯುವ ಚಳಿ ನಡುವೆಯೂ ಬಿರುಸಿನ ಮತದಾನ

  • ಉತ್ತರ ಕನ್ನಡದಲ್ಲಿ ಕೊರೆಯುವ ಚಳಿ ನಡುವೆಯೂ ಬಿರುಸಿನ ಮತದಾನ
  • ಜಿಲ್ಲೆಯ 5 ತಾಲೂಕುಗಳ 101 ಗ್ರಾಮ ಪಂಚಾಯಿತಿಗಳಲ್ಲಿ ಇಂದು ಚುನಾವಣೆ
  • 1380 ಸ್ಥಾನಗಳ ಪೈಕಿ 1264 ಸ್ಥಾನಗಳಿಗೆ ವೋಟಿಂಗ್​
  • ಅದೃಷ್ಟ ಪರೀಕ್ಷೆಗಿಳಿದಿರುವ 3735 ಅಭ್ಯರ್ಥಿಗಳು
  • ಅಹಿತಕರ ಘಟನೆಗಳು ನಡೆಯದಂತೆ ಮತಗಟ್ಟೆ ಬಳಿ 641 ಮಂದಿ ಪೊಲೀಸ್ ಸಿಬ್ಬಂದಿ ನಿಯೋಜನೆ

09:31 December 22

ಚಿತ್ರದುರ್ಗದಲ್ಲಿ ವೀಲ್ ಚೇರ್‌ ಇಲ್ಲದೆ ಪರದಾಟ

ಚಿತ್ರದುರ್ಗದಲ್ಲಿ ವೀಲ್ ಚೇರ್‌ ಇಲ್ಲದೆ ಪರದಾಟ

ಮತಗಟ್ಟೆಗಳಲ್ಲಿ ವೀಲ್ ಚೇರ್​ ಇಲ್ಲದೆ ವೃದ್ಧರ, ವಿಕಲಚೇತನರ ಪರದಾಟ

ಚಿತ್ರದುರ್ಗದ ಮಠದಕುರುಬರಹಟ್ಟಿ ಮತಗಟ್ಟೆಯಲ್ಲಿ ಅವ್ಯವಸ್ಥೆ

ಮತದಾರರನ್ನು ಎತ್ತಿಕೊಂಡು ಬರುತ್ತಿರುವ ಕುಟುಂಬಸ್ಥರು

09:20 December 22

ಲೋಡೆಡ್ ಗನ್​​ ಜೊತೆ ಬಂದ ಚುನಾವಣಾಧಿಕಾರಿ

GP ELECTIONS
ಚುನಾವಣಾಧಿಕಾರಿಯಿಂದ ಲೋಡೆಡ್ ಗನ್​​ ವಶಕ್ಕೆ
  • ಲೋಡೆಡ್ ಪಿಸ್ತೂಲ್ ಜೊತೆಗೆ ಮತಗಟ್ಟೆಗೆ ಆಗಮಿಸಿದ ಚುನಾವಣಾಧಿಕಾರಿ
  • ಪಿಆರ್‌ಒ (ಪೊಲೀಂಗ್ ರಿಟರ್ನಿಂಗ್ ಆಫೀಸರ್) ಸುಲೇಮಾನ್ ಸನದಿ ಬಳಿ ಗನ್​ ಪತ್ತೆ
  • ಬೆಳಗಾವಿಯ ದೇಸೂರ ಗ್ರಾಮದ ಮತಗಟ್ಟೆಗೆ ನಿಯೋಜನೆಗೊಂಡಿದ್ದ ಅಧಿಕಾರಿ
  • ಬೆಚ್ಚಿಬಿದ್ದ ಸಿಬ್ಬಂದಿಯಿಂದ ಪೊಲೀಸರಿಗೆ ಮಾಹಿತಿ
  • ಗನ್​ ವಶಕ್ಕೆ ಪಡೆದು ಗುಂಡನ್ನು ಹೊರತೆಗೆಸಿರುವ ಪೊಲೀಸರು
  • ಪೊಲೀಸರಿಂದ ಸಲೇಮಾನ್ ಸನದಿಯ ತೀವ್ರ ವಿಚಾರಣೆ
  • ಚುನಾವಣಾಧಿಕಾರಿಗೆ ಮಾಹಿತಿ ನೀಡಿ ಪಿಆರ್‌ಒ ಬದಲಾವಣೆ

09:15 December 22

ಮುರುಘಾ ಶರಣರಿಂದ ಮತದಾನ

GP ELECTIONS
ಡಾ.ಶಿವಮೂರ್ತಿ ಮುರುಘಾ ಶರಣರಿಂದ ಮತದಾನ
  • ಡಾ.ಶಿವಮೂರ್ತಿ ಮುರುಘಾ ಶರಣರಿಂದ ಮತದಾನ
  • ಚಿತ್ರದುರ್ಗ ತಾಲೂಕಿನ ಕುರುಬರಹಟ್ಟಿ ಗ್ರಾಮದ ಮತಗಟ್ಟೆಯಲ್ಲಿ ವೋಟಿಂಗ್​
  • ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬರ ಜವಬ್ದಾರಿ
  • ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಪ್ರಜೆಗಳ ಪರಮಾಧಿಕಾರ
  • ಎಲ್ಲರು ತಪ್ಪದೇ ಮತದಾನ ಮಾಡಿ
  • ಮತದಾನದ ಬಳಿಕ ಮುರುಘಾ ಶರಣರಿಂದ ಹೇಳಿಕೆ

09:10 December 22

ಬಿಡಿಎ ಅಧ್ಯಕ್ಷರಿಂದ ಮತ ಚಲಾವಣೆ

ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್​ರಿಂದ ಮತ ಚಲಾವಣೆ
  • ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್​ರಿಂದ ಮತ ಚಲಾವಣೆ
  • ಬಿಡಿಎ- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
  • ಸ್ವಗ್ರಾಮವಾದ ಸಿಂಗನಾಯಕನಹಳ್ಳಿಯಲ್ಲಿ ವೋಟ್​ ಮಾಡಿದ ವಿಶ್ವನಾಥ್

09:02 December 22

ವೃದ್ಧದಂಪತಿಯ ಉತ್ಸಾಹ

GP ELECTIONS
ಬೆಳಗಾವಿಯಲ್ಲಿ ವೃದ್ಧದಂಪತಿಯ ಉತ್ಸಾಹ
  • ಬೆಳಗಾವಿಯಲ್ಲಿ ಮತಚಲಾಯಿಸಿದ ವೃದ್ಧದಂಪತಿ
  • ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಹೆಚ್ ಮತಗಟ್ಟೆಗೆ ಆಟೋದಲ್ಲಿ ಬಂದ ದಂಪತಿ
  • ಉತ್ಸಾಹದಿಂದ ಹಕ್ಕು ಚಲಾವಣೆ

09:01 December 22

ಬೆಳಗಾವಿಯಲ್ಲಿ ಅಭ್ಯರ್ಥಿಗಳ ಏಜೆಂಟರ ಮಧ್ಯೆ ವಾಗ್ವಾದ

  • ನಕಲಿ ಮತದಾರ ಮಹಿಳೆ ಕರೆದುಕೊಂಡು ಬಂದ ಆರೋಪ
  • ಅಭ್ಯರ್ಥಿಗಳ ಏಜೆಂಟರ ಮಧ್ಯೆ ವಾಗ್ವಾದ
  • ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು
  • ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಹೆಚ್ ಮತಗಟ್ಟೆಯಲ್ಲಿ ಘಟನೆ

08:49 December 22

ಹಕ್ಕು ಚಲಾಯಿಸಲು ತವರಿಗೆ ಬಂದ ವಲಸಿಗರು

GP ELECTIONS
ಮುದ್ದೇಬಿಹಾಳಕ್ಕೆ ಬಂದಿಳಿದ ಕಾರ್ಮಿಕರು
  • ಹಕ್ಕು ಚಲಾಯಿಸಲು ತವರಿಗೆ ಬಂದ ಗುಳೇ ಹೋದ ಕಾರ್ಮಿಕರು
  • ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಗುಳೇ ಹೋಗಿದ್ದ ಕೂಲಿ ಕಾರ್ಮಿಕರು
  • ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿಗೆ ವಾಹನಗಳಲ್ಲಿ ಬಂದಿಳಿಯುತ್ತಿರುವ ವಲಸಿಗರು

08:43 December 22

ಗ್ರಾಮ ಸಮರ: ಚಾಮರಾಜನಗರ, ಗುಂಡ್ಲುಪೇಟೆಯಲ್ಲಿ ಉತ್ಸಾಹದಿಂದ ಮತದಾನ

GP ELECTIONS
ಚಾಮರಾಜನಗರ, ಗುಂಡ್ಲುಪೇಟೆಯಲ್ಲಿ ಉತ್ಸಾಹದಿಂದ ಮತದಾನ
  • ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯ ಗ್ರಾ.ಪಂ ಚುನಾವಣೆಗೆ ಮತದಾನ ಆರಂಭ
  • 1241 ಸ್ಥಾನಗಳಿಗೆ ಕಣದಲ್ಲಿರುವ 3079 ಮಂದಿ
  • ಈ ಪೈಕಿ 62 ಆಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ
  • ಮತಗಟ್ಟೆ ಅಧಿಕಾರಿಗಳಿಗೆ, ಸಿಬ್ಬಂದಿಗೆ ಕೋವಿಡ್ ಕಿಟ್ ನೀಡಿರುವ ಚುನಾವಣಾ ಆಯೋಗ

08:30 December 22

ಹಿರೇಬಾಗೇವಾಡಿಯಲ್ಲಿ ಲಾಠಿ ಪ್ರಹಾರ

ಹಿರೇಬಾಗೇವಾಡಿಯಲ್ಲಿ ಲಾಠಿ ಪ್ರಹಾರ
  • ಗುಂಪು ಗುಂಪಾಗಿ ಮತದಾನ ಕೇಂದ್ರಕ್ಕೆ ದೌಡಾಯಿಸಿದ ಅಭ್ಯರ್ಥಿಗಳ ಬೆಂಬಲಿಗರು
  • ಪೊಲೀಸರಿಂದ ಲಘು ಲಾಠಿ ಪ್ರಹಾರ
  • ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ಘಟನೆ
  • ಲಾಠಿ ರುಚಿಗೆ ಕಾಲ್ಕಿತ್ತು ಓಡಿದ ಬೆಂಬಲಿಗರು
  • ಹಿರೇಬಾಗೆವಾಡಿಯಲ್ಲಿ 28 ಸ್ಥಾನಗಳಿಗೆ 90 ಜನ ಅಭ್ಯರ್ಥಿಗಳು ಕಣದಲ್ಲಿ
  • ಈಗಾಗಲೇ 3 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ

08:27 December 22

ಶಿವಮೊಗ್ಗದಲ್ಲಿ ಸಾಲುಗಟ್ಟಿ ನಿಂತಿರುವ ಮತದಾರರು

  • ಶಿವಮೊಗ್ಗ ಜಿಲ್ಲೆಯಲ್ಲಿ ಮತದಾನ ಆರಂಭ
  • ಮತಗಟ್ಟೆ ಬಳಿ ಸರತಿ ಸಾಲಿನಲ್ಲಿ ನಿಂತಿರುವ ಮತದಾರರು
  • ಮತಗಟ್ಟೆಯ ಸುತ್ತ ಪೊಲೀಸ್ ಬಿಗಿ ಬಂದೋ ಬಸ್ತ್
  • ಮತದಾನಕ್ಕೆ ಬರುವವರಿಗೆ ಥರ್ಮಲ್ ಸ್ಕ್ರೀನ್ ಮೂಲಕ‌ ಪರೀಕ್ಷೆ
  • ಇಂದು ಶಿವಮೊಗ್ಗ, ಭದ್ರಾವತಿ ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ವೋಟಿಂಗ್​​
  • 113 ಗ್ರಾಮ ಪಂಚಾಯತಿಯ 1,212 ಸ್ಥಾನಗಳಿಗೆ ಮತದಾನ

08:20 December 22

ಮಂಡ್ಯ: ಮತಗಟ್ಟೆಯಲ್ಲಿ ಕೊರೊನಾ ಮುನ್ನೆಚ್ಚರಿಕಾ ಕ್ರಮ ಅನುಸರಣೆ

GP ELECTIONS
ಮಂಡ್ಯದ ಮತಗಟ್ಟೆಯಲ್ಲಿ ಕೊರೊನಾ ಮುನ್ನೆಚ್ಚರಿಕಾ ಕ್ರಮ ಅನುಸರಣೆ
  • ಮಂಡ್ಯದಲ್ಲಿ ಶಾಂತಿಯುತವಾಗಿ ನಡೆಯುತ್ತಿರುವ ಮತದಾನ
  • ಮತಗಟ್ಟೆಯಲ್ಲಿ ಕೊರೊನಾ ಮುನ್ನೆಚ್ಚರಿಕಾ ಕ್ರಮ ಅನುಸರಣೆ
  • ಮತಗಟ್ಟೆಗೆ ಬಂದು ವೋಟ್ ಮಾಡುತ್ತಿರುವ ಜನರು
  • ಮೂರು ತಾಲೂಕಿನ 6,67,856 ಜನರಿಂದ ಇಂದು ಹಕ್ಕು ಚಲಾವಣೆಯಾಗಲಿದೆ
  • 4010 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ

07:37 December 22

ಕೋಟೆನಾಡಿನಲ್ಲಿ ಹಕ್ಕು ಚಲಾಯಿಸುತ್ತಿರುವ ಮತದಾರರು

  • ಚಿತ್ರದುರ್ಗದಲ್ಲಿ ಮತದಾನ ಪ್ರಕ್ರಿಯೆ ಆರಂಭ
  • ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ತಾಲೂಕುಗಳಲ್ಲಿ ಮತಗಟ್ಟೆ ಬಳಿ ಧಾವಿಸುತ್ತಿರುವ ಜನರು
  • ಒಟ್ಟು 810 ಮತಗಟ್ಟೆಗಳಲ್ಲಿ ನಡೆಯುತ್ತಿರುವ ವೋಟಿಂಗ್​​
  • ಮತಗಟ್ಟೆ ಕೇಂದ್ರಗಳ ಸುತ್ತಲೂ ಪೊಲೀಸ್ ಬಿಗಿ ಬಂದೋಬಸ್ತ್​​
  • ಕೊರೊನಾ ತಡೆಗೆ ಸುರಕ್ಷಿತ ಕಿಟ್​ಗಳನ್ನು ಧರಿಸಿರುವ ಚುನಾವಣಾ ಸಿಬ್ಬಂದಿ
  • ಕೋವಿಡ್​ ನಿಯಮ ಪಾಲಿಸುತ್ತಿರುವ ಮತದಾರರು

07:23 December 22

ಕಣದಲ್ಲಿರುವ ದಂಪತಿಯಿಂದ ಮತಪೆಟ್ಟಿಗೆಗೆ ಪೂಜೆ

ಬೆಳಗಾವಿಯಲ್ಲಿ ಚುನಾವಣಾ ಕಣದಲ್ಲಿರುವ ದಂಪತಿಯಿಂದ ಮತಪೆಟ್ಟಿಗೆಗೆ ಪೂಜೆ
  • ಗ್ರಾ.ಪಂ ಚುನಾವಣೆ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭ
  • ಮತದಾನಕ್ಕೂ ಮುನ್ನ ಮತಪೆಟ್ಟಿಗೆಗೆ ಪೂಜೆ ಸಲ್ಲಿಸಿದ ದಂಪತಿ
  • ಚುನಾವಣಾ ಕಣದಲ್ಲಿರುವ ದಂಪತಿಯಿಂದ ಪೂಜೆ
  • ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ‌.ಹೆಚ್ ಗ್ರಾಮದಲ್ಲಿ ಪೂಜೆ ಸಲ್ಲಿಕೆ
  • ಸಾಮಾನ್ಯ ಮಹಿಳೆ, ಸಾಮಾನ್ಯ ಪುರುಷ ಕೋಟಾದಡಿ ಸ್ಪರ್ಧಿಸಿರುವ ಪತಿ-ಪತ್ನಿ

06:14 December 22

ಮೊದಲ ಹಂತದ ಗ್ರಾಮ ಪಂಚಾಯತ್​ ಚುನಾವಣೆ

ಬೆಂಗಳೂರು: ಇಂದು ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಮತದಾನ ಪ್ರಕ್ರಿಯೆ ಆರಂಭವಾಗಿದೆ. ಒಟ್ಟು 5,762 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 113 ತಾಲೂಕುಗಳ 2,930 ಗ್ರಾಮ ಪಂಚಾಯತಿಗಳಲ್ಲಿ ಮತದಾನ ನಡೆಯಲಿದ್ದು, ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಡಿ.27 ರಂದು ಎರಡನೇ ಹಂತದ ಚುನಾವಣೆ 2,832 ಗ್ರಾಮ ಪಂಚಾಯತಿಗಳಿಗೆ ನಡೆಯಲಿದೆ.  

Last Updated : Dec 22, 2020, 10:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.