ಬೆಂಗಳೂರು: ಭಾರತೀಯ ವಾಯುಪಡೆಯ ನಿವೃತ್ತ ಮಹಿಳಾ ವಿಂಗ್ ಕಮಾಂಡರ್ ಡಾ.ವಿಜಯಲಕ್ಷ್ಮಿ ರಮಣನ್ ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
![First lady wing commander Vijayalakshmi Ramanan dies](https://etvbharatimages.akamaized.net/etvbharat/prod-images/kn-bng-04-firstwomenwingcomanderdemise-7205473_22102020164711_2210f_1603365431_1035.jpg)
1924ರಲ್ಲಿ ಜನಿಸಿದ ಅವರು, 1943 ರಲ್ಲಿ ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಚೆನ್ನೈನ ಎಗ್ಮೋರ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. 1955ರಲ್ಲಿ ಸೇನಾ ವೈದ್ಯಕೀಯ ದಳಕ್ಕೆ ಸೇರ್ಪಡೆಯಾದ ಅವರು, ಸ್ತ್ರೀರೋಗ ತಜ್ಞರಾಗಿ ಹಾಗೂ ಪ್ರಥಮ ಮಹಿಳಾ ಅಧಿಕಾರಿಯಾಗಿ ನೇಮಕಗೊಂಡರು. 1962, 1966 ಹಾಗೂ 1971ರ ಯುದ್ಧದ ಸಮಯದಲ್ಲಿ ಗಾಯಾಳು ಯೋಧರಿಗೆ ಚಿಕಿತ್ಸೆ ನೀಡಿದ್ದರು. 1977ರಲ್ಲಿ ವಿಶಿಷ್ಟ ಸೇವಾ ಪುರಸ್ಕಾರವನ್ನು ಪಡೆದಿದ್ದು, 1979ರಲ್ಲಿ ನಿವೃತ್ತರಾಗಿದ್ದರು.
ವಯೋಸಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರ ಪತಿ ದಿವಂಗತ ಕೆ.ವಿ.ರಮಣನ್ ಕೂಡ ವಿಂಗ್ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದರು.