ETV Bharat / city

ಬೆಂಗಳೂರಿಂದ ದುಬೈಗೆ ಹಾರಿದ ಒಮಿಕ್ರಾನ್ ಸೋಂಕಿತ: ಎಫ್​ಐಆರ್ ದಾಖಲು - ಬೆಂಗಳೂರಿಂದ ಒಮಿಕ್ರಾನ್ ಸೋಂಕಿತ ದುಬೈಗೆ

ಬೆಂಗಳೂರಿಗೆ ಆಗಮಿಸಿದ್ದ ದಕ್ಷಿಣ ಆಫ್ರಿಕಾದ ಒಮಿಕ್ರಾನ್ ಸೋಂಕಿತನ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಒಮಿಕ್ರಾನ ಸೋಂಕಿತನ ವಿರುದ್ಧ ಬೆಂಗಳೂರಲ್ಲಿ ಕೇಸ್,FIR against Omicron infected Man in Bengaluru
ಒಮಿಕ್ರಾನ ಸೋಂಕಿತನ ವಿರುದ್ಧ ಬೆಂಗಳೂರಲ್ಲಿ ಕೇಸ್
author img

By

Published : Dec 7, 2021, 8:09 PM IST

ಬೆಂಗಳೂರು: ದುಬೈಗೆ ಪರಾರಿಯಾಗಿರುವ ದಕ್ಷಿಣ ಆಫ್ರಿಕಾದ ಒಮಿಕ್ರಾನ್ ಸೋಂಕಿತ ಹಾಗೂ ಆತ ತಂಗಿದ್ದ ಪ್ರತಿಷ್ಠಿತ ಶಾಂಗ್ರಿಲಾ ಹೋಟೆಲ್ ಆಡಳಿತ ಮಂಡಳಿ ವಿರುದ್ಧ ಎಫ್​​ಐಆರ್ ದಾಖಲಾಗಿದೆ.

ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 269, 271, 114 ಹಾಗೂ ಕರ್ನಾಟಕ ಎಪಿಡಿಮಿಕ್ ಡಿಸಿಸ್ ಆ್ಯಕ್ಟ್ ಅಡಿಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ನವೀನ್ ಎಂಬುವರಿಂದ ದೂರು ಕೊಡಲಾಗಿತ್ತು. ನವೆಂಬರ್ 20ಕ್ಕೆ ಬೆಂಗಳೂರಿಗೆ ಆಫ್ರಿಕಾ ಪ್ರಜೆ ಬಂದಿದ್ದ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಶಾಂಗ್ರಿಲಾ ಹೊಟೇಲ್​​ನಲ್ಲಿ 14 ದಿನಗಳ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಆತ 27 ನೇ ತಾರೀಕಿನಂದು ಹೋಟೆಲ್ ತೊರೆದು ದುಬೈಗೆ ಪರಾರಿಯಾಗಿದ್ದಾರೆ. ನಂತರ ಅವರಿಗೆ ಒಮಿಕ್ರಾನ್ ಇರುವುದು ಪತ್ತೆಯಾಗಿತ್ತು. ಆದರೆ ಆ ವೇಳೆಗಾಗಲೇ ಆಫ್ರಿಕಾ ಪ್ರಜೆ ದುಬೈ ಸೇರಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಒಮಿಕ್ರಾನ ಸೋಂಕಿತನ ವಿರುದ್ಧ ಬೆಂಗಳೂರಲ್ಲಿ ಕೇಸ್,FIR against Omicron infected Man in Bengaluru
ಒಮಿಕ್ರಾನ ಸೋಂಕಿತನ ವಿರುದ್ಧ ಬೆಂಗಳೂರಲ್ಲಿ ಕೇಸ್

(ಇದನ್ನೂ ಓದಿ: 104 ದಿನ ವೆಂಟಿಲೇಟರ್‌ನಲ್ಲಿದ್ದು 158 ದಿನಗಳ ಚಿಕಿತ್ಸೆ ಬಳಿಕ ಕೋವಿಡ್‌ನಿಂದ ಮಹಿಳೆ ಗುಣಮುಖ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.