ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಬಿಎನ್ಎಸ್ ರೆಡ್ಡಿ ವಿರುದ್ಧ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
13 ಮಂದಿ ಸದಸ್ಯರ ಇಂದಿರಾನಗರ ಕ್ಲಬ್‌ನಲ್ಲಿ ಬಿಎನ್‌ಎಸ್ ರೆಡ್ಡಿ ಅಧ್ಯಕ್ಷರಾಗಿದ್ದು, ನಾಗೇಂದ್ರ ಅವರು ಉಪಾದ್ಯಕ್ಷರಾಗಿದ್ದರು. ಇವರಿಬ್ಬರು ಸದಸ್ಯರ ಗಮನಕ್ಕೆ ತರದೇ ಲಕ್ಷಾಂತರ ರೂಪಾಯಿ ಹಣವನ್ನು ಕಾನೂನು ಬಾಹಿರವಾಗಿ ದುರುಪಯೋಗ ಮಾಡಿದ್ದಾರೆ. ಜೊತೆಗೆ ನಕಲಿ ಸಹಿಮಾಡಿ ಸದಸ್ಯರ ಹೆಸರಿನಲ್ಲಿ ಹಣ ಪಡೆದಿದ್ದಾರೆ. ಇದನ್ನ ಪ್ರಶ್ನಿಸಿದಕ್ಕೆ ಕೆಲವರನ್ನು ಸಮಿತಿಯಿಂದ ವಜಾ ಮಾಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ಇಂದಿರಾನಗರ ಕ್ಲಬ್ ಸದಸ್ಯ ರಾಮ್ ಮೋಹನ್ ಮೆನನ್ ಮೊದಲು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಕೋರ್ಟ್ ನಿರ್ದೇಶನದಂತೆ ಅಮಾನತು ಮತ್ತು ಅಕ್ರಮ ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆ ಹಾಕಿರುವ ಸಂಬಂಧ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.