ಬೆಂಗಳೂರು : ಫಿಲಂ ಚೇಂಬರ್ ವಿರುದ್ಧ ಅಧಾರವಿಲ್ಲದೆ ಪ್ರಶಾಂತ್ ಸಂಬರ್ಗಿ ಅರೋಪ ಮಾಡ್ತಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ನೀಡಿದ್ದಾರೆ.
ವಾಣಿಜ್ಯ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ರಾಮಕೃಷ್ಣ ತೆರಳಿ ಕಮಿಷನರ್ ಕಮಲ್ ಪಂತ್ ಅವರಿಗೆ ದೂರು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾ. ರಾ. ಗೋವಿಂದು, ಪ್ರಶಾಂತ್ ಸಂಬರ್ಗಿ ವಿರುದ್ದ ಕಾನೂನು ಕ್ರಮ ಜರುಗಿಸೋ ಭರವಸೆ ನೀಡಿದ್ದಾರೆ. ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ಯಾರಿದ್ದಾರೋ ಅವರ ವಿರುದ್ಧ ಹೋರಾಟಕ್ಕೆ ನಾವು ಕೈಜೋಡಿಸ್ತೇವೆ. ನಮ್ಮ ಸಹಕಾರ ಬೆಂಬಲ ಇರುತ್ತೆ ಅಂತ ಹೇಳಿದ್ದೇವೆ. ಈ ವಿಷಯ ಕೇಳಿ ಕಮಲ್ ಪಂತ್ ಖುಷಿ ಪಟ್ಟರು ಎಂದರು.
ಇನ್ನು ನಮ್ಮ ವಿರುದ್ಧ ಆರೋಪ ಮಾಡುವ ಸಂಬರ್ಗಿ ಬಣ್ಣ ಬಯಲಾಗಿದೆ. ಸಂಬರ್ಗಿ ಡ್ರಗ್ಸ್ ಕಿಂಗ್ ಪಿನ್ ರಾಹುಲ್ ಹಾಗೂ ಯಾವುದೋ ಹುಡುಗಿ ಜೊತೆಗಿನ ಫೋಟೊ ಹೊರ ಬಿದ್ದಿದೆ. ಹಾಗಾದ್ರೆ ಸಂಬರ್ಗಿ ಯಾರು? ರಾಹುಲ್ಗೂ ಇವರಿಗೂ ಏನೂ ಸಂಬಂಧ? ಈ ಬಗ್ಗೆ ತನಿಖೆಯಾಗಬೇಕು ಅಂತ ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಸಿಸಿಬಿ ಅಧಿಕಾರಿ ಸಂದೀಪ್ ಪಾಟಿಲ್ ಅವರನ್ನು ಸಹ ಭೇಟಿಯಾಗಿದ್ದೇವೆ. ಸಂಬರ್ಗಿ ಅರೋಪದಿಂದ ಚೇಂಬರ್ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ದೂರು ದೂರು ನೀಡಿದ್ದಾಗಿ ಸಾರಾ ಗೋವಿಂದು ಮಾಹಿತಿ ನೀಡಿದರು.