ETV Bharat / city

ಪರಿಷತ್ ಸದಸ್ಯರಾಗಿ 40 ವರ್ಷ: ಸನ್ಮಾನ ಸಂದರ್ಭ ಭಾವುಕರಾದ ಬಸವರಾಜ ಹೊರಟ್ಟಿ - ಕರ್ನಾಟಕ ರಾಜಕೀಯ ಸುದ್ದಿ

ಸನ್ಮಾನ ಸ್ವೀಕರಿಸಿ ಮಾತನಾಡಿದ ಹೊರಟ್ಟಿ, ನಾನು ಸಾಮಾನ್ಯ ಶಿಕ್ಷಕನಾಗಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ಬಂದೆ. ಅಂದು ನನ್ನ ಸಹಪಾಠಿ ಶಿಕ್ಷಕರೂ ಆಯ್ಕೆಯಾಗಿ ಬಂದಿದ್ದರು. ಸುಮಾರು 40 ವರ್ಷಗಳ ಕಾಲ ಪರಿಷತ್ ಸದಸ್ಯನಾಗಿದ್ದೇನೆ. ರಾಜಕೀಯದಲ್ಲಿ ಜಾತಿ-ಧರ್ಮ, ಹಣಕ್ಕೆ ಪ್ರಾಮುಖ್ಯತೆ ಕೊಟ್ಟವನಲ್ಲ. ಹೀಗಾಗಿ ಜನರ ನಿರಂತರ ಪ್ರೀತಿ ನನ್ನ ಮೇಲಿದೆ ಎಂದು ಭಾವುಕರಾಗಿ ನುಡಿದರು.

Basavaraj Horatti
ಬಸವರಾಜ ಹೊರಟ್ಟಿ
author img

By

Published : Jul 1, 2020, 3:22 PM IST

ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾಗಿ 40 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಲ್ಮನೆ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಕೆ.ಸಿ.ಕೊಂಡಯ್ಯ, ಯು.ಬಿ.ವೆಂಕಟೇಶ್, ಚೌಡರೆಡ್ಡಿ ತೂಪಲ್ಲಿ ಹಾಗೂ ತೇಜಸ್ವಿನಿ ಗೌಡ ಅವರು ಹಿರಿಯ ಸದಸ್ಯರಾದ ಹೊರಟ್ಟಿ ಅವರನ್ನು ಮೈಸೂರು ಪೇಟ ತೊಡಿಸಿ, ಶಾಲು ಹಾಗೂ ಏಲಕ್ಕಿ ಹಾರವನ್ನು ಹಾಕಿ, ಸಿಹಿ ತಿನ್ನಿಸಿ ಸನ್ಮಾನಿಸಿದರು.

ಸನ್ಮಾನಿಸಿದವರ ಪರವಾಗಿ ಮಾತನಾಡಿದ ಕೆ.ಟಿ.ಶ್ರೀಕಂಠೇಗೌಡರು, ಹೊರಟ್ಟಿ ಅವರ ಅನುಭವ ಹಾಗೂ ಹಿರಿತನವನ್ನು ಕೊಂಡಾಡಿದರು.

ಜನರ ಪ್ರೀತಿ ನನ್ನ ಮೇಲಿದೆ...

ಸನ್ಮಾನ ಸಂದರ್ಭ ಭಾವುಕರಾದ ಬಸವರಾಜ ಹೊರಟ್ಟಿ

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜ ಹೊರಟ್ಟಿ, ನಾನು ಸಾಮಾನ್ಯ ಶಿಕ್ಷಕನಾಗಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ಬಂದೆ. ಅಂದು ನನ್ನ ಸಹಪಾಠಿ ಶಿಕ್ಷಕರೂ ಆಯ್ಕೆಯಾಗಿ ಬಂದಿದ್ದರು. ಸುಮಾರು 40 ವರ್ಷಗಳ ಕಾಲ ಪರಿಷತ್ ಸದಸ್ಯನಾಗಿದ್ದೇನೆ. ರಾಜಕೀಯದಲ್ಲಿ ಜಾತಿ-ಧರ್ಮ, ಹಣಕ್ಕೆ ಪ್ರಾಮುಖ್ಯತೆ ಕೊಟ್ಟವನಲ್ಲ. ಹೀಗಾಗಿ ಜನರ ನಿರಂತರ ಪ್ರೀತಿ ನನ್ನ ಮೇಲಿದೆ ಎಂದು ಭಾವುಕರಾಗಿ ನುಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.