ಬೆಂಗಳೂರು: ಲಾಕ್‌ಡೌನ್ ವೇಳೆ ನಷ್ಟದಲ್ಲಿರುವ ಹೂ ಬೆಳೆಗಾರರಿಗೆ ಸರ್ಕಾರ ಹೆಕ್ಟೇರ್‌ಗೆ ₹25,000 ಸಹಾಯ ಧನ ಘೋಷಿಸಿದೆ. ಆದರೆ, ಸರ್ಕಾರದ ಈ ತೀರ್ಮಾನದ ಬಗ್ಗೆ ರಾಜ್ಯ ರೈತ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಒಂದು ಎಕರೆಯಲ್ಲಿ ಹೂ ಬೆಳೆಯಲು, ಬೀಜ, ಗೊಬ್ಬರಕ್ಕೆ 25,000 ರೂ. ಖರ್ಚು ಬೀಳುತ್ತದೆ. ಅಲ್ಲದೆ ರೈತನ ಕುಟುಂಬ, ಕೂಲಿ ಎಲ್ಲ ಸೇರಿದ್ರೆ ಒಂದು ಎಕರೆಗೆ ಒಂದು ಲಕ್ಷ ನಷ್ಟವಾಗ್ತಿದೆ. ಆದರೆ, ಸರ್ಕಾರ ಒಂದು ಹೆಕ್ಟೇರ್ (ಎರಡುವರೇ ಎಕರೆ) ಗೆ 25,000 ಘೋಷಣೆ ಮಾಡಿರೋದು ಅವೈಜ್ಞಾನಿಕ.
ರಾಜ್ಯದಲ್ಲಿ11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೂ ಬೆಳೆಯುತ್ತಿದ್ದಾರೆ. ಆದರೆ, ಇದು ಕೇವಲ ಸರ್ಕಾರ ರೈತರನ್ನು ಸಮಾಧಾನ ಮಾಡುವ ಕೆಲಸ ಆಗ್ತಿದೆ, ಹೊರತು ಇದರಿಂದ ಸಂಕಷ್ಟದಿಂದ ಹೊರಬರಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.