ಬೆಂಗಳೂರು: ನೀಲಿ ಸಿನಿಮಾಗಳ ಮಾಜಿ ನಟಿ ಸನ್ನಿ ಲಿಯೋನ್ ದೇಶದೆಲ್ಲೆಡೆ ಅಪಾರವಾದ ಅಭಿಮಾನಿಗಳನ್ನ ಹೊಂದಿದ್ದಾರೆ. ಸದ್ಯ ಬಹುಭಾಷೆ ನಟಿಯಾಗಿರೋ ಸನ್ನಿ ಸಿನಿಮಾ, ಅಲ್ಲದೇ ಒಂದಿಷ್ಟು ಸಾಮಾಜಿಕ ಕೆಲಸಗಳನ್ನ ಮಾಡುತ್ತಾ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಮೂರು ಜನ ಅನಾಥ ಮಕ್ಕಳನ್ನ ದತ್ತು ಪಡೆದು, ತನ್ನ ಸ್ವತಃ ಮಕ್ಕಳಂತೆ ಸಾಕುತ್ತಿರುವ ಸನ್ನಿ ಲಿಯೋನ್ಗೆ ಇಡೀ ವಿಶ್ವವೇ ಫಿದಾ ಆಗಿದೆ.
ಓದಿ: ಸನ್ನಿ ಲಿಯೋನ್ಗೆ ಇಂದು ಹುಟ್ಟು ಹಬ್ಬದ ಸಂಭ್ರಮ: ಸ್ವಚ್ಛ ಮನಸ್ಸಿನ ನೀಲಿ ಚಿತ್ರಗಳ ರಾಣಿಯ ಏಳುಬೀಳು ಹೀಗಿತ್ತು!
ಈಗ ಕರ್ನಾಟಕದ ಹಳ್ಳಿಯೊಂದರಲ್ಲಿ ಸನ್ನಿ ಲಿಯೋನ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಾಶಯ ಕೋರಿದ್ದರು. ಅಂದಹಾಗೆ, ಮೇ 13 ರಂದು ಸನ್ನಿಗೆ 40ನೇ ಜನ್ಮದಿನದ ಸಂಭ್ರಮ. ಈ ಸಂಭ್ರಮ ದಿನವನ್ನು ದೇಶಾದ್ಯಂತ ಇರುವ ಅಭಿಮಾನಿಗಳು ಆಚರಿಸಿದರು. ಸಾಮಾಜಿಕ ಜಾಲತಾಣಗಳ ಮೂಲಕ ಮೋಹಕ ಬೆಡಗಿ ಸನ್ನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು. ವಿಶೇಷವೆಂದರೆ, ಕರ್ನಾಟಕದ ಒಂದಷ್ಟು ಫ್ಯಾನ್ಸ್ ಸನ್ನಿಯ ಗಮನ ಸೆಳೆದಿದ್ದಾರೆ.
ಸನ್ನಿ ಲಿಯೋನ್ ಹುಟ್ಟುಹಬ್ಬದ ಸಲುವಾಗಿ ಕರ್ನಾಟಕದ ಹಳ್ಳಿಯೊಂದರ ರಸ್ತೆಬದಿಯಲ್ಲಿ ಫ್ಲೆಕ್ಸ್ ಹಾಕಿಸಲಾಗಿದೆ. ಸೀರೆಯುಟ್ಟು ಮಿಂಚುತ್ತಿರುವ ಸನ್ನಿ ಲಿಯೋನ್ ಅವರ ಫೋಟೋವೊಂದನ್ನು ಹಾಕಿ, ಅದರಲ್ಲಿ ಹ್ಯಾಪಿ ಬರ್ತ್‌ಡೇ ಸನ್ನಿ ಲಿಯೋನ್ ಅಂತ ಬರೆಯಲಾಗಿದೆ. ಅಲ್ಲದೆ, ಅನಾಥ ಮಕ್ಕಳ ತಾಯಿ, ಅಭಿಮಾನಿಗಳ ದೇವತೆ ಎಂದೆಲ್ಲ ಬರೆಸಲಾಗಿದೆ. ಜೊತೆಗೆ ಜನ್ಮದಿನ ಶುಭ ಕೋರುವ ಈ ಕಟೌಟ್ ಫ್ಲೆಕ್ಸ್‌ಗೆ ಒಂದು ದೊಡ್ಡ ಹೂವಿನ ಹಾರವನ್ನೂ ಹಾಕಲಾಗಿದೆ.
ಈ ಫೋಟೋವನ್ನ ಸ್ವತಃ ಸನ್ನಿ ಲಿಯೋನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಹಾರ್ಟ್ ಸಿಂಬಲ್ ಹಾಕಿ ಸಂತೋಷ ಪಟ್ಟಿದ್ದಾರೆ. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಇನ್ನು ಸನ್ನಿ ಲಿಯೋನ್ ಕನ್ನಡ ಚಿತ್ರರಂಗದಲ್ಲಿ ಡಿಕೆ ಹಾಗು ಲವ್ ಯೂ ಆಲಿಯಾ ಸಿನಿಮಾದಲ್ಲಿ ಐಟಂ ಹಾಡುಗಳಲ್ಲಿ ಸೊಂಟ ಬಳುಕಿಸಿದ್ದರು.