ಬೆಂಗಳೂರು: ನ್ಯಾಯಾಲದಲ್ಲಿ ಆರೋಪಿಗಳಿಗೆ ಜಾಮೀನು ನೀಡುವಾಗ ನಕಲಿ ದಾಖಲೆಗಳು, ನಕಲಿ ವ್ಯಕ್ತಿಗಳ ಮೂಲಕ ವಂಚಿಸಿರುವ ವಿಚಾರ ಬಯಲಾಗಿದ್ದು ಹಲಸೂರು ಗೇಟ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿವೆ. ರಂಗನಾಥ್ ಹಾಗೂ ಮಂಜುನಾಥ್ ಎಂಬ ಆರೋಪಿಗಳಿಬ್ಬರು ನ್ಯಾಯಾಲಯದಲ್ಲಿ ಜಾಮೀನು ಪಡದಿದ್ದಾರೆ.
ವಂಚಕರು ತಮ್ಮ ಹೆಸರಿನಲ್ಲಿ ಆರ್.ಟಿ.ಸಿ ಫಾರ್ಮ್, ನಕಲಿ ಆಧಾರ್ ಕಾರ್ಡ್ ಸಲ್ಲಿಸಿ ಜಾಮೀನು ಪಡೆದಿದ್ದಾರೆಂದು ಆರೋಪಿಸಿ ಮಂಜುಳಾ ಎಂಬುವವರು ಪ್ರಕರಣ ದಾಖಲಿಸಿದ್ದಾರೆ. ಅದೇ ಮಾದರಿಯ ಮತ್ತೊಂದು ಪ್ರಕರಣದಲ್ಲಿ ರವಿಕುಮಾರ್ ಎಂಬುವವರು ಆರ್.ಟಿ.ಸಿ ತೆಗೆದುಕೊಳ್ಳುವ ಸಂದರ್ಭದಲ್ಲಿ ತಮ್ಮ ಹೆಸರಿನಲ್ಲಿ ಆರೋಪಿಯೊಬ್ಬನು ಜಾಮೀನು ಪಡೆದಿರುವುದು ಬಯಲಾಗಿದೆ ಎಂದು ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಓದಿ: ಜೈಲಿಂದ ಹೊರಬಂದ ಶಾಸಕ ಜಿಗ್ನೇಶ್ 'ಪುಷ್ಪ' ಸಿನಿಮಾ ಸ್ಟೈಲಲ್ಲಿ ರಿಯಾಕ್ಷನ್!
ನಕಲಿ ವ್ಯಕ್ತಿಗಳಿಗೆ ಹಣ ನೀಡಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿ, ದಂಧೆಕೋರರು ಜಾಮೀನು ಕೊಡಿಸಿರುವ ಸಾಧ್ಯತೆಯಿದೆ. ಈ ಪ್ರಕರಣ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.