ETV Bharat / city

Fake Stamp Paper Scam : ಹೆಚ್​ಎಎಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಮನೆಗಳ ಮೇಲೆ ದಾಳಿ, ಐವರ ಬಂಧನ - ನಕಲಿ ಸ್ಟಾಂಪ್‌ ಪೇಪರ್‌ ಹಗರಣ

ಕಳೆದ ಒಂದು ತಿಂಗಳಿನಿಂದ ಎಸ್‌ಐಟಿ(SIT) ಹೆಚ್ಚಿನ ದಾಖಲೆಗಳನ್ನು ಸಂಗ್ರಹಿಸಿ ಮತ್ತು ಹಲವು ಸುಳಿವುಗಳ ಆಧಾರದ ಮೇಲೆ ಎರಡು ಪೊಲೀಸ್ ತಂಡಗಳು ದಾಳಿ ನಡೆಸಿ ನಕಲಿ ಸ್ಟಾಂಪ್ ಪೇಪರ್‌ಗಳು, ನಕಲಿ ಸೀಲುಗಳು ಮತ್ತು ಪೆನ್ ಡ್ರೈವ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ..

Fake Stamp Paper Scam
ಹೆಚ್​ಎಎಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಮನೆಗಳ ಮೇಲೆ ದಾಳಿ
author img

By

Published : Nov 14, 2021, 3:39 PM IST

ಬೆಂಗಳೂರು : ನಗರದ ಹೆಚ್​ಎಎಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಮನೆಗಳ ಮೇಲೆ ದಾಳಿ ನಡೆಸಿರುವ ಪೂರ್ವ ವಿಭಾಗದ ಪೊಲೀಸರು ನಕಲಿ ಸ್ಟಾಂಪ್‌ ಪೇಪರ್‌ ಹಗರಣವನ್ನು(Fake Stamp Paper Scam) ಬೇಧಿಸಿ ಐವರನ್ನು ಬಂಧಿಸಿದ್ದಾರೆ.

ನಕಲಿ ಸ್ಟಾಂಪ್ ಪೇಪರ್‌ಗಳಲ್ಲಿ(Fake Stamp Paper) ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಸ್ಥಳೀಯ ನಿವಾಸಿಗಳು ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ವಂಚನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದರು.

ನಗರದ ಹಲಸೂರು ಮತ್ತು ಹೆಚ್​ಎಎಲ್‌ ಪೊಲೀಸರು ಕೆಲವು ಸಿವಿಲ್ ದಾಖಲೆಗಳನ್ನು ನಕಲಿ ಎಂದು ಪತ್ತೆ ಹಚ್ಚಿದ ನಂತರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಎಸ್‌ಐಟಿ(SIT) ಹೆಚ್ಚಿನ ದಾಖಲೆಗಳನ್ನು ಸಂಗ್ರಹಿಸಿ ಮತ್ತು ಹಲವು ಸುಳಿವುಗಳ ಆಧಾರದ ಮೇಲೆ ಎರಡು ಪೊಲೀಸ್ ತಂಡಗಳು ದಾಳಿ ನಡೆಸಿ ನಕಲಿ ಸ್ಟಾಂಪ್ ಪೇಪರ್‌ಗಳು, ನಕಲಿ ಸೀಲುಗಳು ಮತ್ತು ಪೆನ್ ಡ್ರೈವ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಬಂಧಿತರ ಗುರುತುಗಳನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ. ಇನ್ನೂ ಕೆಲವು ಆರೋಪಿಗಳು ಹಗರಣದಲ್ಲಿ ಭಾಗಿಯಾಗಿರುವ ಕುರಿತು ವಿಚಾರಣೆ ವೇಳೆ ತಿಳಿದು ಬಂದಿದೆ.

ಒಂದೆರಡು ದಿನಗಳಲ್ಲಿ ಎಲ್ಲರನ್ನೂ ಬಂಧಿಸುತ್ತೇವೆ. ಕಿಂಗ್‌ಪಿನ್ ಸೇರಿದಂತೆ ಗ್ಯಾಂಗ್​ನ ಎಲ್ಲರನ್ನೂ ಬಂಧಿಸುವ ಮೂಲಕ ನಕಲಿ ಸ್ಟಾಂಪ್ ಪೇಪರ್ ಹಗರಣವನ್ನು (Fake Stamp Paper Scam) ಬೇಧಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಓದಿ: ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಶಾಮೀಲಾದ್ರೂ ಬಿಡಲ್ಲ, ಬಲಿ ಹಾಕ್ತೀವಿ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.