ETV Bharat / city

ಗುರುರಾಘವೇಂದ್ರ ಬ್ಯಾಂಕ್​ನಿಂದ ಬೇಕಾಬಿಟ್ಟಿ ಸಾಲ ಮರುಪಾವತಿ ನೋಟಿಸ್, ಆರೋಪ!

ಶ್ರೀ ಗುರುರಾಘವೇಂದ್ರ ಕೋ - ಆಪರೇಟಿವ್‌ ಬ್ಯಾಂಕ್‌ನಿಂದ ಸಾಲ ಪಡೆಯದಿದ್ದರೂ ಹಲವರಿಗೆ ಬ್ಯಾಂಕ್‌ನಿಂದ ಪಡೆದ ಸಾಲವನ್ನು ಬಡ್ಡಿ ಸಮೇತ ಮರುಪಾವತಿಸುವಂತೆ ನೋಟಿಸ್‌ಗಳನ್ನು ಕಳುಹಿಸಲಾಗಿದೆ. ಬ್ಯಾಂಕ್​ ಆಡಳಿತ ಮಂಡಳಿ ಗ್ರಾಹಕರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ಕಾರ್ಯದರ್ಶಿ ಶಂಕರ ಗುಹಾ ದ್ವಾರಕಾನಾಥ್‌ ಆರೋಪಿಸಿದ್ದಾರೆ.

fake Loan Repayment Notice from Gururaghavendra Bank
ಗುರುರಾಘವೇಂದ್ರ ಬ್ಯಾಂಕ್​ನಿಂದ ಬೇಕಾಬಿಟ್ಟಿ ಸಾಲ ಮರುಪಾವತಿ ನೋಟಿಸ್, ಆರೋಪ!
author img

By

Published : Sep 24, 2021, 12:56 PM IST

ಬೆಂಗಳೂರು: ಶ್ರೀ ಗುರುರಾಘವೇಂದ್ರ ಕೋ-ಆಪರೇಟಿವ್‌ ಬ್ಯಾಂಕ್‌ನಿಂದ ಇತ್ತೀಚೆಗೆ ಹಲವರಿಗೆ ಬ್ಯಾಂಕ್‌ನಿಂದ ಪಡೆದ ಸಾಲವನ್ನು ಬಡ್ಡಿ ಸಮೇತ ಮರುಪಾವತಿಸುವಂತೆ ನೋಟಿಸ್‌ಗಳನ್ನು ಕಳುಹಿಸಲಾಗಿದೆ. ವಿಚಿತ್ರ ಎಂದರೆ ಹೀಗೆ ನೋಟಿಸ್‌ ಪಡೆದವರಲ್ಲಿ ಹಲವರಿಗೆ ಬ್ಯಾಂಕ್‌ ಎಲ್ಲಿದೆ ಎಂಬುದೇ ಗೊತ್ತಿಲ್ಲ. ಈ ಬ್ಯಾಂಕ್‌ನಲ್ಲಿ ಠೇವಣಿಯೂ ಇಲ್ಲ. ಬ್ಯಾಂಕ್‌ನಲ್ಲಿ ಯಾವುದೇ ವ್ಯವಹಾರವೂ ಮಾಡಿರುವುದಿಲ್ಲ. ಆಡಳಿತ ಮಂಡಳಿ ಗ್ರಾಹಕರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ಕಾರ್ಯದರ್ಶಿ ಶಂಕರ ಗುಹಾ ದ್ವಾರಕಾನಾಥ್‌ ಆರೋಪಿಸಿದ್ದಾರೆ.

ಗುರುರಾಘವೇಂದ್ರ ಬ್ಯಾಂಕ್​ನಿಂದ ಬೇಕಾಬಿಟ್ಟಿ ಸಾಲ ಮರುಪಾವತಿ ನೋಟಿಸ್, ಆರೋಪ!

ಸಾಲ ಪಡೆಯಲಿಲ್ಲ - ಸಾಲ ಮರುಪಾವತಿಸುವಂತೆ ನೋಟಿಸ್​:

ಗುರುವಾರ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವೈದ್ಯಕೀಯ ಘಟಕದ ಕಾರ್ಯದರ್ಶಿ ಶಂಕರ ಗುಹಾ ದ್ವಾರಕಾನಾಥ್‌, ಬ್ಯಾಂಕ್‌ನ ಆಡಳಿತ ಮಂಡಳಿ ಯಾರದ್ದೋ ದಾಖಲೆಗಳನ್ನು ಬ್ಯಾಂಕ್‌ಗೆ ನೀಡಿ ಅವರ ಹೆಸರಲ್ಲಿ ತಾವು ಸಾಲ ಪಡೆದು ವಂಚನೆ ಮಾಡಿರುವುದು ಇದರಿಂದ ಸ್ಪಷ್ಟವಾಗಿ ತಿಳಿದು ಬರುತ್ತಿದೆ. ತಾವು ಬ್ಯಾಂಕ್‌ನಿಂದ ಸಾಲ ಪಡೆಯದಿದ್ದರೂ, ಕೋಟ್ಯಂತರ ರೂಪಾಯಿ ಸಾಲ ವಾಪಸ್‌ ಮಾಡುವಂತೆ ಬ್ಯಾಂಕ್‌ ನೋಟಿಸ್‌ ಕಳುಹಿಸಿರುವುದರಿಂದ ನೋಟಿಸ್‌ ಪಡೆದವರು ಆತಂಕಕ್ಕೆ ಒಳಗಾಗಿದ್ದಾರೆ.

ಬ್ಯಾಂಕ್‌ಗೆ ನೋಟಿಸ್‌:

ನನ್ನನ್ನು ಸಂಪರ್ಕಿಸಿ ಮುಂದೆ ಏನು ಮಾಡಬೇಕೆಂದು ಕೇಳಿರುತ್ತಾರೆ. ಅವರಿಗೆ ವಕೀಲರ ನೆರವು ಕೊಡಿಸಿ, ಅವರ ಮೂಲಕ ಬ್ಯಾಂಕ್‌ನಿಂದ ನೋಟಿಸ್‌ ಪಡೆದವರ ಠೇವಣಿಯ ಬಗ್ಗೆ ಹಾಗೂ ಸಾಲದ ಬಗ್ಗೆ ವಿವರವಾಗಿ ಮಾಹಿತಿ ನೀಡುವಂತೆ ಬ್ಯಾಂಕ್‌ಗೆ ನೋಟಿಸ್‌ ಕಳುಹಿಸಲಾಗಿದೆ. ನೋಟಿಸ್‌ ತಲುಪಿ 10 ದಿನಗಳಾದರೂ ಬ್ಯಾಂಕ್‌ನಿಂದ ಯಾವುದೇ ಉತ್ತರ ಬಂದಿರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಚಂಪಕಾವತಿ ಎನ್ನುವವರಿಗೆ ನೋಟಿಸ್​:

ಈ ವೇಳೆ ದಾಖಲೆಯೊಂದನ್ನು ತೋರಿಸಿ, ಚಂಪಕಾವತಿ ಎನ್ನುವವರು 35 ಲಕ್ಷ ರೂಪಾಯಿ ಹಣವನ್ನು ಸಾಲವಾಗಿ 2011ರಲ್ಲಿ ತೆಗೆದುಕೊಂಡಿದ್ದು, ಅದರ ಯಾವುದೇ ಕಂತನ್ನು ಕಟ್ಟದೇ ಅದರ ಬಡ್ಡಿ ಮತ್ತು ಅಸಲು ಸೇರಿ ಇದೀಗ 2 ಕೋಟಿ 12 ಲಕ್ಷ ರೂಪಾಯಿಗಳಾಗಿದ್ದು, ತಕ್ಷಣವೇ ಕಟ್ಟುವಂತೆ ನೋಟಿಸ್‌ ಜಾರಿ ಮಾಡಿರುತ್ತಾರೆ.

ಇವರಿಗೆ ಲೋನ್‌ ಕೊಡುವಾಗ ಶೂರಿಟಿಯಾಗಿ ಯಾವ ಪತ್ರಗಳನ್ನು ಇವರಿಂದ ತೆಗೆದುಕೊಂಡಿದ್ದರು ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. 35 ಲಕ್ಷ ರೂಪಾಯಿಗಳನ್ನು ಯಾವ ಕಾರಣಕ್ಕೆ ಸಾಲ ಕೊಟ್ಟಿದ್ದರು, ಲೋನ್‌ ಕೊಡುವಾಗ ಯಾವುದೇ ಗ್ಯಾರಂಟಿ ತೆಗೆದುಕೊಳ್ಳದೇ ಹೇಗೆ ಕೊಟ್ಟರು ಎಂಬುದಕ್ಕೂ ಮಾಹಿತಿಯಿಲ್ಲ.

ಈ ರೀತಿ ಕೆಲವು ಘಟನೆಗಳು ನಮಗೆ ಕಂಡು ಬಂದಿವೆ. ಈ ತರಹ ಎಷ್ಟು ಬೇನಾಮಿಗಳನ್ನು ಸೃಷ್ಟಿಸಲಾಗಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು. ಆಡಿಟ್‌ ರಿಪೋರ್ಟ್‌ ವೇಳೆಯೂ ಈ ಬಗ್ಗೆ ಯಾವುದೇ ಮಾಹಿತಿ ಹೊರಬೀಳದಿರುವುದು ಆಶ್ಚರ್ಯಕರ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಇಂಧನ ಬೆಲೆ ಏರಿಕೆಗೆ ಖಂಡನೆ: ಕೆಪಿಸಿಸಿ ಕಚೇರಿಯಿಂದ ವಿಧಾನಸೌಧಕ್ಕೆ ಟಾಂಗಾ ಏರಿ ಬಂದ ಕೈ ನಾಯಕರು

ಶ್ರೀ ಗುರು ರಾಘವೇಂದ್ರ ಕೋ - ಆಪರೇಟಿವ್‌ ಬ್ಯಾಂಕ್‌ ಆಡಳಿತ ಮಂಡಳಿ ಮಾಡಿರುವ ಹಗರಣವನ್ನು ಯಾವುದೇ ರಾಜಕೀಯ ಒತ್ತಡವಿಲ್ಲದೇ ಎಲ್ಲ ಆಯಾಮಗಳಿಂದಲೂ ತನಿಖೆ ಮಾಡಲು ಸಿಬಿಐಗೆ ಮಾತ್ರ ಸಾಧ್ಯ. ಹಾಗಾಗಿ ಈ ಹಗರಣ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮತ್ತೊಮ್ಮೆ ಆಗ್ರಹಪಡಿಸುತ್ತೇನೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.