ಆನೇಕಲ್: ಕೊರೊನಾ ವ್ಯಾಕ್ಸಿನ್ ಇದೀಗ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಬಂದಿದ್ದು, ಆಯ್ದ 210 ಸೋಂಕಿತರಿಗೆ ಪ್ರಾಯೋಗಿಕವಾಗಿ ತಹಶೀಲ್ದಾರ್ ಹಾಗೂ ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ವ್ಯಾಕ್ಸಿನ್ ಹಾಕಲಾಯಿತು.
ಓದಿ: ಪುರಾವೆ ಇಲ್ಲದೆ ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಡಾ. ಸುದರ್ಶನ್ ಮನವಿ
ಕೊರೊನಾ ವ್ಯಾಕ್ಸಿನ್ ಕೊಡುವ ಮುಖಾಂತರ 30 ನಿಮಿಷಗಳ ಕಾಲ ಚುಚ್ಚುಮದ್ದು ಪಡೆದ ವ್ಯಕ್ತಿಯನ್ನು ನಿಗಾದಲ್ಲಿರಿಸಿ ಪರೀಕ್ಷಿಸಲಾಯಿತು. ವ್ಯಕ್ತಿ ಆರೋಗ್ಯವಾಗಿ ಅಡ್ಡ ಪರಿಣಾಮಗಳಿಲ್ಲದೇ ಸಹಜವಾಗಿರುವುದನ್ನು ಗಮನಿಸಲಾಯಿತು. ಆನೇಕಲ್ ಭಾಗದಲ್ಲಿ 17,100 ಕೊರೊನಾ ಸೋಂಕಿತರಿದ್ದು, ಈವರೆಗೆ 256 ಜನ ಸಾವನ್ನಪ್ಪಿದ್ದಾರೆ ಎಂದು ತಹಶೀಲ್ದಾರ್ ಸಿ. ಮಹದೇವಯ್ಯ ಮಾಹಿತಿ ನೀಡಿದರು.
ಅಲ್ಲದೆ ವ್ಯಾಕ್ಸಿನ್ ವೇಳೆ ಅಡ್ಡ ಪರಿಣಾಮಗಳಾದರೆ ಮುಂಜಾಗ್ರತ ಕ್ರಮವಾಗಿ ನಾರಾಯಣ ಹೆಲ್ತ್ ಸಿಟಿ, ಆಕ್ಷ್ಫರ್ಡ್ ಆಸ್ಪತ್ರೆಗಳಿಗೆ ಕಳುಹಿಸಿ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.