ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದಾಖಲೆ ನಿರ್ಮಿಸಿದ್ದಾರೆ. 10 ಲಕ್ಷ ಹಿಂಬಾಲಕರನ್ನು ಹೊಂದಿರುವ ರಾಜ್ಯದ ಮೊದಲ ರಾಜಕಾರಣಿಯಾಗಿ ಯಡಿಯೂರಪ್ಪ ಹೊರಹೊಮ್ಮಿದ್ದು, ತಮ್ಮ ವರ್ಚಸ್ಸು ಕುಗ್ಗಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರೂ ಅವರನ್ನು ಟ್ವಿಟರ್ ಖಾತೆಯಲ್ಲಿ ಹಿಂಬಾಲಿಸುವವರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದೀಗ 10 ಲಕ್ಷ ಹಿಂಬಾಲಕರನ್ನು ತಲುಪಿದೆ. 10 ಲಕ್ಷ ಫಾಲೋವರ್ಸ್ ಅನ್ನು ಹೊಂದಿದ ರಾಜ್ಯದ ಮೊದಲ ರಾಜಕಾರಣಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಇದ್ದಾರೆ.
ಇದನ್ನೂ ಓದಿ: ಖಾತೆ ಹಂಚಿಕೆಯಲ್ಲೂ ಮೇಲುಗೈ ಸಾಧಿಸಿದ್ರಾ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ!?
ರಾಜ್ಯದಲ್ಲಿ ಯಡಿಯೂರಪ್ಪ, ಸಿದ್ದರಾಮಯ್ಯ ಮತ್ತು ದೇವೇಗೌಡ ಅತ್ಯಂತ ಪ್ರಭಾವಿ ರಾಜಕಾರಣಿಗಳಾಗಿದ್ದು, ಇವರಲ್ಲಿ ಅತಿ ಹೆಚ್ಚು ಟ್ವಿಟರ್ ಫಾಲೋವರ್ಸ್ ಹೊಂದಿದವರಲ್ಲಿ ಯಡಿಯೂರಪ್ಪ ಮೊದಲ ಸ್ಥಾನ ಅಲಂಕರಿಸಿದ್ದಾರೆ.
-
ಟ್ವಿಟರ್ ನಲ್ಲಿ ನಮ್ಮ ಬಳಗ ದಶಲಕ್ಷದ ಮೈಲಿಗಲ್ಲನ್ನು ದಾಟಿರುವುದು ನಿಮ್ಮೆಲ್ಲರ ಪ್ರೀತಿ, ಅಭಿಮಾನಗಳ ಸಂಕೇತ ಎಂದು ಭಾವಿಸುತ್ತೇನೆ.
— B.S. Yediyurappa (@BSYBJP) August 11, 2021 " class="align-text-top noRightClick twitterSection" data="
ತಮ್ಮ ಬೆಂಬಲ, ಅಭಿಮಾನದಿಂದ ಸದಾ ನನ್ನನ್ನು ಹಾರೈಸುತ್ತಿರುವ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು! pic.twitter.com/Ey1M5UzEUN
">ಟ್ವಿಟರ್ ನಲ್ಲಿ ನಮ್ಮ ಬಳಗ ದಶಲಕ್ಷದ ಮೈಲಿಗಲ್ಲನ್ನು ದಾಟಿರುವುದು ನಿಮ್ಮೆಲ್ಲರ ಪ್ರೀತಿ, ಅಭಿಮಾನಗಳ ಸಂಕೇತ ಎಂದು ಭಾವಿಸುತ್ತೇನೆ.
— B.S. Yediyurappa (@BSYBJP) August 11, 2021
ತಮ್ಮ ಬೆಂಬಲ, ಅಭಿಮಾನದಿಂದ ಸದಾ ನನ್ನನ್ನು ಹಾರೈಸುತ್ತಿರುವ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು! pic.twitter.com/Ey1M5UzEUNಟ್ವಿಟರ್ ನಲ್ಲಿ ನಮ್ಮ ಬಳಗ ದಶಲಕ್ಷದ ಮೈಲಿಗಲ್ಲನ್ನು ದಾಟಿರುವುದು ನಿಮ್ಮೆಲ್ಲರ ಪ್ರೀತಿ, ಅಭಿಮಾನಗಳ ಸಂಕೇತ ಎಂದು ಭಾವಿಸುತ್ತೇನೆ.
— B.S. Yediyurappa (@BSYBJP) August 11, 2021
ತಮ್ಮ ಬೆಂಬಲ, ಅಭಿಮಾನದಿಂದ ಸದಾ ನನ್ನನ್ನು ಹಾರೈಸುತ್ತಿರುವ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು! pic.twitter.com/Ey1M5UzEUN