ETV Bharat / city

'ವರ್ಕ್ ಫ್ರಮ್​ ಹೋಂ' ಆರೋಗ್ಯಕ್ಕೆ ಮಾರಕ, ಫಾಸ್ಟ್ ಫುಡ್ ಫಾಸ್ಟಾಗಿ ಪ್ರಾಣ ತೆಗೆಯುತ್ತೆ: ಡಾ. ಮಂಜುನಾಥ್​

ಕೊರೊನಾ ಲಾಕ್​ಡೌನ್​ ವೇಳೆ 'ವರ್ಕ್ ಫ್ರಮ್​ ಹೋಂ' ಟ್ರೆಂಡ್ ಹೆಚ್ಚಾಗಿದೆ. ಇದು ಆರೋಗ್ಯಕ್ಕೆ ಹಾನಿಕರ. ಇದನ್ನು 'ಸಿಟ್ಟಿಂಗ್ ಡಿಸೀಸ್' ಎಂದೇ ವೈದ್ಯಕೀಯವಾಗಿ ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ ಎಂದು ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಡಾ. ಸಿ.ಎನ್.ಮಂಜುನಾಥ್ ಹೇಳಿದ್ದಾರೆ.

ಡಾ. ಮಂಜುನಾಥ್​
ಡಾ. ಮಂಜುನಾಥ್​
author img

By

Published : Jun 10, 2020, 8:08 PM IST

Updated : Jun 10, 2020, 8:32 PM IST

ಬೆಂಗಳೂರು: ನಮ್ಮ ಪೂರ್ವಿಕರ ಜೀವನ ಶೈಲಿ, ಆಹಾರ ಪದ್ಧತಿ ತಪ್ಪದೇ ಅನುಸರಿಸಿದರೆ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರಬಹುದು ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ, ಖ್ಯಾತ ಹೃದಯ ರೋಗ ತಜ್ಞ ಡಾ. ಸಿ.ಎನ್.ಮಂಜುನಾಥ್ ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಕೊರೊನಾ ಲಾಕ್​ಡೌನ್​ ವೇಳೆ 'ವರ್ಕ್ ಫ್ರಮ್​ ಹೋಂ' ಟ್ರೆಂಡ್ ಹೆಚ್ಚಾಗಿದೆ. ಇದು ಆರೋಗ್ಯಕ್ಕೆ ಹಾನಿಕರವಾಗಿದೆ. ಇದನ್ನ 'ಸಿಟ್ಟಿಂಗ್ ಡಿಸೀಸ್' ಎಂದೇ ವೈದ್ಯಕೀಯವಾಗಿ ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ. ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ಒತ್ತಡದ ಬದುಕಿನಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳೂ ಹೆಚ್ಚಾಗಿವೆ. ವಯೋವೃದ್ಧರಷ್ಟೇ ಅಲ್ಲದೆ 20ರಿಂದ 35ರ ವಯಸ್ಕರಲ್ಲಿಯೂ ಹೃದಯ ರೋಗ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ವರದಿಯಾಗತೊಡಗಿವೆ ಎಂದು ಹೇಳಿದರು.

ಡಾ. ಸಿ ಎನ್ ಮಂಜುನಾಥ್ ಸಂದರ್ಶನ

ಫಾಸ್ಟ್ ಫುಡ್ ಜನರ ಪ್ರಾಣವನ್ನು ಬಹಳ ಫಾಸ್ಟ್​ ಆಗಿ ತೆಗೆಯುತ್ತೆ...

ಸಾಮಾನ್ಯವಾಗಿ ಮಕ್ಕಳು ತಮ್ಮ ತಂದೆ-ತಾಯಿಗಳನ್ನು ಹೃದಯ ಸಂಬಂಧಿ ತೊಂದರೆಗೆ ಆಸ್ಪತ್ರೆಗೆ ಕರೆದುಕೊಂಡು ಬರುವ ಸನ್ನಿವೇಶ ಇಂದು ಬದಲಾಗಿದೆ. ಮಕ್ಕಳ ಬದಲಿಗೆ ಪೋಷಕರೇ ತಮ್ಮ ಮಕ್ಕಳನ್ನು ಹೃದಯ ಸಂಬಂಧಿ ರೋಗಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಹೃದಯ ಸಂಬಂಧಿ ಕಾಯಿಲೆಯಿಂದ ರಕ್ಷಿಸಿಕೊಳ್ಳಲು ಡಾ. ಮಂಜುನಾಥ್ ಹಲವಾರು ಅತ್ಯಮೂಲ್ಯ ಸಲಹೆ-ಸೂಚನೆಗಳನ್ನು ಈ ಸಂದರ್ಶನದಲ್ಲಿ ನೀಡಿದ್ದಾರೆ.

Last Updated : Jun 10, 2020, 8:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.