ETV Bharat / city

ಸಮುದಾಯದ ಮುಖಂಡರು ಜವಾಬ್ದಾರಿ ಕೊಟ್ಟರೆ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ: ಖಂಡ್ರೆ - KPCC working president Eshwar khandre news

ಉಪಚುನಾವಣೆಯಲ್ಲಿ ಹಣ ಬಲ ಕೆಲಸ ಮಾಡಿತ್ತು. ಆದರೆ ಜನರ ತೀರ್ಪಿಗೆ ನಾವು ತಲೆಬಾಗುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.

Eshwar khandre
ಈಶ್ವರ್ ಖಂಡ್ರೆ
author img

By

Published : Nov 11, 2020, 11:40 PM IST

ಬೆಂಗಳೂರು: ಸಾರ್ವಜನಿಕ ಲೆಕ್ಕಪತ್ರ ಸಮಿತಿಯಿಂದ ಮಾಜಿ ಸಚಿವ ಎಚ್.ಕೆ. ಪಾಟೀಲರನ್ನು ಕಿಕ್ ಔಟ್ ಮಾಡಿಲ್ಲ, ಒಂದು ವರ್ಷ ಕಳೆದ ಹಿನ್ನೆಲೆ ಹೊಸ ಅಧ್ಯಕ್ಷರಾಗಿ ಮಾಜಿ ಸಚಿವ ರಾಮಲಿಂಗರೆಡ್ಡಿ ಅವರನ್ನು ನೇಮಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಿಕ್ಔಟ್ ಅನ್ನುವ ರೀತಿ ಇಲ್ಲ. ಮೆಡಿಕಲ್ ಅವ್ಯವಹಾರ ಆರೋಪ ಬಂದಿತ್ತು. ನಾವು ಈ ಅವ್ಯವಹಾರದ ಅಡಿಟ್​ಗೆ ಒತ್ತಾಯಿಸಿದ್ದೆವು. ಸರ್ಕಾರದ ಮೇಲೆ ಒತ್ತಾಯ ತಂದಿದ್ದೆವು. ಮಂಗಳವಾರ ಸಮಿತಿ ಸಭೆ ನಡೆಯಲಿದೆ. ಆ ಸಭೆಯಲ್ಲೂ ಅಕ್ರಮದ ಬಗ್ಗೆ ಚರ್ಚೆ ಮುಂದುವರಿಸುತ್ತೇವೆ. ಮುಚ್ಚಿಹಾಕೋಕೆ ಯಾರಿಂದಲೂ ಸಾಧ್ಯವಿಲ್ಲ. ಅದಕ್ಕಾಗಿ ಬದಲಾವಣೆ ಆಗಿಲ್ಲ ಎಂದರು.

ಎಚ್.ಕೆ. ಪಾಟೀಲರು ಅಧ್ಯಕ್ಷರಾಗಿ ಒಂದು ವರ್ಷ ಕಾಲ ಮುಗಿದಿದೆ. ಸಮಿತಿಗೆ ಹೊಸ ಅಧ್ಯಕ್ಷರನ್ನ ನೇಮಕ ಮಾಡಲಾಗಿದೆ. ರಾಮಲಿಂಗಾರೆಡ್ಡಿ ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.

ಬಿಎಸ್​ವೈ ನಂತರ ಮುಂದಿನ ಲಿಂಗಾಯತ ನಾಯಕ ಯಾರು? ಎಂಬಿಪಿ ನಾ ಈಶ್ವರ್ ಖಂಡ್ರೆ ನಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಂ.ಬಿ.ಪಾಟೀಲರು ನನ್ನ ಸಹೋದರರು. ನಮ್ಮ ಕ್ಷೇತ್ರದಲ್ಲಿ ಸಾರ್ವಜನಿಕ ಸೇವೆ ಮಾಡ್ತಿದ್ದೇವೆ. ಲಿಂಗಾಯತರಷ್ಟೇ ಅಲ್ಲ ಎಲ್ಲರನ್ನೂ ಜೊತೆಗೆ ಕೊಂಡೊಯ್ಯಬೇಕು. ಆ ನಿಟ್ಟಿನಲ್ಲಿ ನಾನು ನನ್ನ ಸೇವೆ ಮಾಡ್ತಿದ್ದೇನೆ. ಸಮುದಾಯದ ಮುಖಂಡರು ಜವಾಬ್ದಾರಿ ಕೊಡಲಿ. ಕೊಟ್ಟರೆ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ನಮ್ಮಲ್ಲೂ ಅನೇಕರು ಸಮರ್ಥರಿದ್ದಾರೆ. ಸಮುದಾಯ ಸಮರ್ಥರನ್ನ ಗುರ್ತಿಸಲಿ ಎಂದರು.

ಬಸವಕಲ್ಯಾಣದಲ್ಲೂ ಗೆಲ್ತೇವೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಹೇಳೋದು ಮಾಡೋದು ಬೇರೆ. ಎಲ್ಲಾ ಕಡೆ ಅದನ್ನೇ ಮಾಡ್ತೇವೆ ಅಂತ ಅಂದ್ರೆ ಆಗಲ್ಲ. ಅದು ಬಸವಣ್ಣನ ನಾಡು. ಸಾಮಾಜಿಕ ನ್ಯಾಯವನ್ನ ಸಾರುವ ಬೀಡು. ಬಸವತತ್ವದ ಮೇಲೆ ಅಲ್ಲಿನ ಜನ ನಿಂತಿದ್ದಾರೆ. ಲಿಂಗಾಯತರಷ್ಟೇ ಅಲ್ಲ ಎಲ್ಲರನ್ನೂ ಕರೆದೊಯ್ಯಬೇಕು. ಯಾವ ಪಕ್ಷ ಎಲ್ಲರನ್ನ ಕರೆದೊಯ್ಯುತ್ತೆ, ಅದಕ್ಕೆ ಮಾನ್ಯತೆ ಸಿಗುತ್ತೆ. ನಾನು ನನ್ನ ಸಂಪೂರ್ಣ ಶಕ್ತಿಯನ್ನ ಅಲ್ಲಿ ಹಾಕ್ತೇನೆ. ನಮ್ಮ ಪಕ್ಷದ ನಾಯಕರು, ಎಲ್ಲರೂ ಕೆಲಸ ಮಾಡ್ತೇವೆ ಎಂದರು.

ಎರಡು ಉಪಚುನಾವಣೆಯಲ್ಲಿ ಕಾಂಗ್ರೆಸ್​ಗೆ ಸೋಲು ಕುರಿತು ಮಾತನಾಡಿ, ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬರಲಿಲ್ಲ. ಬೈ ಎಲೆಕ್ಷನ್ ಸಾರ್ವತ್ರಿಕ ಚುನಾವಣೆಗೆ ಮಾನದಂಡವಲ್ಲ. ಬಹಳಷ್ಟು ಹಣದ ಚಲಾವಣೆಯಾಗಿದೆ. ಹಣ ಬಲ ತೋಳ್ಬಲ ಬಳಕೆಯಾಗಿದೆ. ಆದರೆ ಜನರ ತೀರ್ಪಿಗೆ ನಾವು ತಲೆಬಾಗುತ್ತೇವೆ. ಬಳ್ಳಾರಿಯಲ್ಲಿ ಎರಡು ಲಕ್ಷ ಮತಗಳಿಂದ ಗೆದ್ದು ಬಂದಿದ್ದೆವು. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಬೇಕಾಯ್ತು ಎಂದರು.

ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡ 2000 ಮತಗಳಿಂದ ಗೆದ್ದಿದ್ರು. ಬೈ ಎಲೆಕ್ಷನ್​ನಲ್ಲಿ ಆನಂದ್ ದೊಡ್ಡ ಅಂತರದಿಂದ ಗೆದ್ದಿದ್ದಾರೆ. ಅದಕ್ಕೆ ಉಪಚುನಾವಣೆಗಳು ಮಾನದಂಡವಲ್ಲ. ಸರ್ಕಾರದ ಅವ್ಯವಹಾರ ಬಯಲು ಮಾಡ್ತೇವೆ. ಪ್ರವಾಹದಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿಯವರೆಗೆ ನಯಾಪೈಸೆ ಜನರಿಗೆ ಕೊಟ್ಟಿಲ್ಲ. ತಳಮಟ್ಟದಲ್ಲಿ ನಾವು ಪಕ್ಷ ಸಂಘಟಿಸುತ್ತೇವೆ. ಮುಂದೆ ನಾವೇ ಅಧಿಕಾರಕ್ಕೆ ಬರ್ತೇವೆ ಎಂದು ಭವಿಷ್ಯ ನುಡಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.