ETV Bharat / city

ವೆಂಟಿಲೇಟರ್‌ಗಳ ಬಳಕೆ ಬಗ್ಗೆ ತರಬೇತಿ ಕಾರ್ಯಕ್ರಮ ಹೆಚ್ಚಿಸಿ : ಸಚಿವ ಜಗದೀಶ್‌ ಶೆಟ್ಟರ್‌ - Minister Jagadish Shetter,

ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ವೆಂಟಿಲೇಟರ್‌ಗಳನ್ನು ಉಪಯೋಗಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾಯೋಗಿಕ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು..

 Enhance training program on the use of ventilators: Jagdish Shetter

author img

By

Published : May 25, 2021, 4:36 PM IST

ಬೆಂಗಳೂರು : ಕೋವಿಡ್‌ ರೋಗಿಗಳಲ್ಲಿ ವೆಂಟಿಲೇಟರ್​​ಗಳ ಬಳಕೆಯ ಬಗ್ಗೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಪ್ರಾಯೋಗಿಕ ಕ್ರಮಗಳ ಬಗ್ಗೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹೆಚ್ಚಿಸಬೇಕು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅಭಿಪ್ರಾಯಪಟ್ಟರು.

ಹುಬ್ಬಳ್ಳಿಯ ಕರ್ನಾಟಕ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌, ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿಗಳ ಸಂಘ ಮತ್ತು ಇಂಡಿಯನ್‌ ಸೊಸೈಟಿ ಆಫ್‌ ಅನಸ್ತೇಸಿಯಾಲಜಿಸ್ಟ್‌ ಜಂಟಿಯಾಗಿ ಕೋವಿಡ್‌ ರೋಗಿಗಳಲ್ಲಿ ವೆಂಟಿಲೇಟರ್‌ ಬಳಕೆಯ ಬಗ್ಗೆ ಪ್ರಾಯೋಗಿಕ ಕ್ರಮಗಳ ಬಗ್ಗೆ ಆಯೋಜಿಸಿದ್ದ ವೆಬಿನಾರ್​​​ನಲ್ಲಿ ಜಗದೀಶ್ ಶೆಟ್ಟರ್ ಪಾಲ್ಗೊಂಡು ಮಾತನಾಡಿದರು.

ದೇಶದ ಗ್ರಾಮೀಣ ಭಾಗದಲ್ಲೂ ಅತ್ಯಾಧುನಿಕ ಚಿಕಿತ್ಸೆಗೆ ಅನುಕೂಲವಾಗಲು ಪ್ರಧಾನಮಂತ್ರಿಗಳ ಅನುದಾನದ ಅಡಿ ಪ್ರತಿ ತಾಲೂಕಿಗೂ 6 ವೆಂಟಿಲೇಟರ್‌ಗಳನ್ನು ನೀಡಲಾಗಿತ್ತು. ಆದರೆ, ಅವುಗಳನ್ನು ಬಳಸುವ ತಜ್ಞ ವೈದ್ಯರು ಇಲ್ಲದೇ ಬಹುತೇಕ ವೆಂಟಿಲೇಟರ್​​​ಗಳು ಉಪಯೋಗ ಆಗುತ್ತಿಲ್ಲ ಎಂದರು.

ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ವೆಂಟಿಲೇಟರ್​​ಗಳನ್ನು ಉಪಯೋಗಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾಯೋಗಿಕ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು. ಇದರಿಂದ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದು ಸೂಚಿಸಿದರು.

ಕೋವಿಡ್‌ 2 ನೇ ಅಲೆಯಲ್ಲಿ ಆಮ್ಲಜನಕ ಹಾಗೂ ವೆಂಟಿಲೇಟರ್ ಬೆಡ್‌ ಗಳ ಬೇಡಿಕೆ ಹೆಚ್ಚಾಗಿದೆ. ಆದರೆ, ಸೂಕ್ತ ತರಬೇತಿ ಇಲ್ಲದೇ ವೆಂಟಿಲೇಟರ್​​​ಗಳ ಉಪಯೋಗದಿಂದ ಆಗುವ ಹಾನಿಯೇ ಹೆಚ್ಚು. ಈ ನಿಟ್ಟಿನಲ್ಲಿ ತಜ್ಞ ವೈದ್ಯರು ಇಲ್ಲದ ಕಡೆಯಲ್ಲಿ ವೆಂಟಿಲೇಟರ್‌ಗಳನ್ನು ಪರಿಣಾಮಕಾರಿಯಾಗಿ ಬಳಸುವುದರ ಬಗ್ಗೆ ವೈದ್ಯಕೀಯ ಸಿಬ್ಬಂದಿಯಲ್ಲಿ ತರಬೇತಿ ನೀಡಬೇಕು ಎಂದು ಹೇಳಿದರು.

ಅಲ್ಲದೇ, ವೈದ್ಯಕೀಯ ಸಿಬ್ಬಂದಿ ಆಮ್ಲಜನಕ ಮಿತವಾಗಿ ಬಳಸುವಂತೆ ಹಾಗೂ ವೆಂಟಿಲೇಟರ್‌ಗಳನ್ನು ಬಳಸಲು ಸೂಕ್ತ ತರಬೇತಿ ಪಡೆದುಕೊಳ್ಳುವಂತೆ ಈ ವೆಬಿನಾರ್‌ ಮೂಲಕ ವೈದ್ಯಕೀಯ ಸಿಬ್ಬಂದಿಗೆ ತಿಳಿವಳಿಕೆ ಮೂಡಿಸುವಂತೆ ಹೇಳಿದರು.

ವೆಬಿನಾರ್‌ ನಲ್ಲಿ ಕೋವಿಡ್‌ ತಜ್ಞ ಸಮಿತಿಯ ಸದಸ್ಯರು ಹಾಗೂ ವೆಬಿನಾರ್​​ನ ಅಧ್ಯಕ್ಷರಾದ ಡಾ. ಜಿ.ಬಿ ಸುತ್ತೂರ್‌, ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ ಸಚ್ಚಿದಾನಂದ, ಡಾ ರಾಜೇಶ್‌ ಫಾಟ್ಕೆ, ಡಾ. ಬಸವಾರಾಜ್‌ ಕೊಲ್ಲಾಪುರ್‌, ಡಾ ಇಮ್ರಾನ್‌ ಶೋಹ್ಲಾಪುರ್‌ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.