ETV Bharat / city

ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಜಾರಿ ನಿರ್ದೇಶನಾಲಯದಿಂದ ಶಾಕ್.. 6 ಕೋಟಿಗೂ ಹೆಚ್ಚು ನಗದು ಜಪ್ತಿ!

ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಜಾರಿ ನಿರ್ದೇಶನಾಲಯದ ಶಾಕ್ ನೀಡಿದೆ. ಕಂಪನಿಗಳ ಮೇಲೆ ದಾಳಿ ನಡೆಸಿದ ಇಡಿ ನಗದು ಮತ್ತು ದಾಖಲೆಗಳನ್ನು ವಶಕ್ಕೆ ಪಡೆದಿದೆ.

raid on  Micro Finance Companies in Bengaluru, ED raid on  Micro Finance Companies in Bengaluru, Directorate of Enforcement department Bengaluru, Bengaluru news, ಬೆಂಗಳೂರಿನಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಮೇಲೆ ದಾಳಿ, ಬೆಂಗಳೂರಿನಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಮೇಲೆ ಇಡಿ ದಾಳಿ, ಜಾರಿ ನಿರ್ದೇಶನಾಲಯ ಬೆಂಗಳೂರು, ಬೆಂಗಳೂರು ಸುದ್ದಿ,
ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಜಾರಿ ನಿರ್ದೇಶನಾಲಯದ ಶಾಕ್
author img

By

Published : Apr 28, 2022, 6:57 AM IST

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಸೇರಿದ 6.17ಕೋಟಿ ರೂಪಾಯಿಯನ್ನ ಜಾರಿ ನಿರ್ದೇಶನಾಲಯ ಜಪ್ತಿಗೊಳಿಸಿದೆ. ಅಕ್ರಮವಾಗಿ ವಿದೇಶಿ ವಿನಿಮಯ ವ್ಯವಹಾರ ಹೊಂದಿದ್ದ ಆರೋಪದಡಿ ಕಂಪನಿಗಳಿಗೆ ಸೇರಿದ ವಿವಿಧ ವ್ಯಕ್ತಿಗಳ ಹೆಸರಿನ ಖಾತೆಯಲ್ಲಿದ್ದ ಹಣವನ್ನ ಜಪ್ತಿ ಮಾಡಲಾಗಿದೆ.

ಕೋವಿಡ್ ತುರ್ತು ಸಂದರ್ಭದಲ್ಲಿ ತಲೆ ಎತ್ತಿದ್ದ ವಿವಿಧ ಹೆಸರಿನ ಆ್ಯಪ್ ಆಧಾರಿತ ಮೈಕ್ರೋ ಫೈನಾನ್ಸ್ ಕಂಪನಿಗಳು ಹೂಡಿಕೆ, ಲೋನ್ ವ್ಯವಹಾರ ಆರಂಭಿಸಿದ್ದವು. ಬಹುತೇಕ ಕಂಪನಿಗಳು ಚೈನಾ ಮೂಲದ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದಲ್ಲದೇ, ರಿಕವರಿ ಸಂದರ್ಭದಲ್ಲಿ ನ್ಯಾಯಯುತವಲ್ಲದ ರೀತಿ ಗ್ರಾಹಕರನ್ನ ಬೆದರಿಸುತ್ತಿರುವ ಪ್ರಕರಣಗಳು ವರದಿಯಾಗಿದ್ದವು. ಬೆಂಗಳೂರಿನ ಮಹಾಲಕ್ಷ್ಮೀಪುರಂ, ಮಾರತ್ ಹಳ್ಳಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.

ಓದಿ: ಕೆಎಎಸ್ ಅಧಿಕಾರಿ ರಂಗನಾಥ್ ಮನೆ ಮೇಲೆ ಎಸಿಬಿ ದಾಳಿ ಪ್ರಕರಣ: ಇಡಿಯಿಂದಲೂ ತನಿಖೆ ಸಾಧ್ಯತೆ

ತನಿಖೆ ಸಂದರ್ಭದಲ್ಲಿ ವಂಚಕ ಕಂಪನಿಗಳು ಅಕ್ರಮವಾಗಿ ಹಣವನ್ನ ವಿದೇಶಿ ವರ್ಗಾವಣೆ ನಡೆಸಿರುವುದು ಕಂಡು ಬಂದಿದ್ದ ಹಿನ್ನೆಲೆ ಜಾರಿ ನಿರ್ದೇಶನಾಲ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಹೀಗಾಗಿ ಮೈಕ್ರೋ ಫೈನಾನ್ಸ್​ ಕಂಪನಿಗಳ ಮೇಲೆ ದಾಳಿ ಮಾಡಿ ನಗದು ಮತ್ತು ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.