ಬೆಂಗಳೂರು: ನೂತನವಾಗಿ ನವೀಕರಣಗೊಂಡಿದ್ದ ಇಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಶನಿವಾರ ಉದ್ಘಾಟನೆ ಮಾಡಿದರು.
ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿ ಹಳೆಯದಾಗಿದ್ದ ಸಂಚಾರ ಪೊಲೀಸ್ ಠಾಣೆಗೆ 35 ಲಕ್ಷ ರೂ.ಗಳ ವೆಚ್ಚದಲ್ಲಿ ಹೊಸ ರೂಪವನ್ನು ಕೊಡಲಾಗಿದೆ. ಟೈಟಾನ್ ಕಂಪನಿಯ ಸಹಭಾಗಿತ್ವದಲ್ಲಿ ಕಾರ್ಪೋರೇಟ್ ಫಂಡ್ನಿಂದ ಅನುಮತಿ ಪಡೆದು ಕಳೆದ ಎರಡು ತಿಂಗಳಿನಿಂದ ಕೆಲಸ ಮಾಡಿ ಠಾಣೆಯ ನಿರ್ಮಾಣ ಮಾಡಲಾಗಿದೆ.
ಈ ವೇಳೆ ಮಾತನಾಡಿದ ಭಾಸ್ಕರ್ ರಾವ್, ರವಿಕಾಂತೇಗೌಡರ ನೇತೃತ್ವದಲ್ಲಿ ಬಹಳ ಚೆನ್ನಾಗಿ ಕಟ್ಟಡದ ನವೀಕರಣ ಮಾಡಲಾಗಿದೆ. ಹೆದ್ದಾರಿಯಲ್ಲಿ ಅಪಘಾತಗಳು ನಡೆದ ಸಂಧರ್ಭದಲ್ಲಿ ಪೊಲೀಸ್ ಠಾಣೆ ಎಲ್ಲಿದೆ ಅನ್ನೋದು ಗೊತ್ತಾಗಬೇಕು. ಆ ದೃಷ್ಟಿಯಿಂದ ಠಾಣೆಯನ್ನು ನವೀಕರಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆದ್ದಾರಿ ಪಕ್ಕದಲ್ಲಿಯೇ ಜಾಗವನ್ನು ನೋಡಿ ಅಲ್ಲಿ ಠಾಣೆಯನ್ನು ಮಾಡಿದರೆ ವಾಹನ ಸವಾರರಿಗೆ ಅನುಕೂಲವಾಗುತ್ತದೆ ಎಂದರು.