ETV Bharat / city

ಬೆಂಗಳೂರಿನ 4 ಕ್ಷೇತ್ರಗಳಲ್ಲಿ ಇಂದಿನಿಂದ ನೀತಿ ಸಂಹಿತೆ ಜಾರಿ - ಅನರ್ಹ ಶಾಸಕರ ಕ್ಷೇತ್ರಗಳು

ಬೆಂಗಳೂರು ನಗರದ ಕೆ.ಆರ್ ಪುರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಶಿವಾಜಿನಗರಗಳಿಗೆ ಡಿಸೆಂಬರ್ ಐದರಂದು ಮತದಾನ ನಡೆಯಲಿದ್ದು, ಇಂದಿನಿಂದ ನೀತಿ ಸಂಹಿತೆ ಜಾರಿಯಾಗಿದೆ.

ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಸುದ್ದಿಗೋಷ್ಠಿ
author img

By

Published : Nov 11, 2019, 6:20 PM IST

ಬೆಂಗಳೂರು: ಉಪ ಚುನಾವಣೆ ನಡೆಯಲಿರುವ ಬೆಂಗಳೂರಿನ 4 ಕ್ಷೇತ್ರಗಳಲ್ಲಿ ಚುನಾವಣಾ ಸಿದ್ಧತೆ ಆರಂಭಗೊಂಡಿದ್ದು, ಇಂದಿನಿಂದ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಈ ಬಗ್ಗೆ ಬೆಂಗಳೂರು ಜಿಲ್ಲಾ‌‌‌ ಚುನಾವಣಾಧಿಕಾರಿಯಾಗಿರುವ, ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಸುದ್ದಿಗೋಷ್ಠಿ ನಡೆಸಿದರು.

ಚುನಾವಣಾಧಿಕಾರಿ ಬಿ.ಹೆಚ್ ಅನಿಲ್ ಕುಮಾರ್ ಸುದ್ದಿಗೋಷ್ಠಿ

ಈ ಬಾರಿಯೂ ಉಪ ಚುನಾವಣೆಯಲ್ಲಿ ಇವಿಎಂ ಜೊತೆ ವಿವಿ ಪ್ಯಾಟ್ ಕಡ್ಡಾಯವಾಗಿದ್ದು, ಬೆಂಗಳೂರಿನ ಆಯಾ ವಿಧಾನಸಭಾ ಕ್ಷೇತ್ರಗಳ ಭದ್ರತಾ‌ ಕೊಠಡಿಯಲ್ಲೇ ಇವಿಎಂ ಇಡಲಾಗಿದೆ. ಮಾದರಿ ನೀತಿ ಸಂಹಿತೆ ಇಂದಿನಿಂದ ಡಿ 11ರವರೆಗೆ ಜಾರಿಯಿರಲಿದೆ. ಪ್ರತಿ ಮತಗಟ್ಟೆಗೆ 1 ಅಧ್ಯಕ್ಷಾಧಿಕಾರಿ, 3 ಜನ ಮತಗಟ್ಟೆ ಅಧಿಕಾರಿ ನೇಮಕವಾಗಿದ್ದು, 4 ಕ್ಷೇತ್ರಗಳಿಗೆ ಒಟ್ಟು 5988 ಚುನಾವಣಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೈಕ್ರೋ ಅಬ್ಸವರ್​ಗಳನ್ನೂ ಮತದಾನ ಪ್ರಕ್ರಿಯೆಗೆ ನಿಯೋಜನೆ ಮಾಡಲಾಗಿದ್ದು, ಚುನಾವಣಾ ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್ಸ್ ಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು.

ಉಪಚುನಾವಣೆ ದೂರುಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ಕೊಠಡಿ ಸ್ಥಾಪನೆ ಮಾಡಲಾಗಿದ್ದು, ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ರೂ 08022975561 / 8884118033 ಈ ನಂಬರ್ ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ. ಇನ್ನು ಚುನಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಸಿಬ್ಬಂದಿ ಜೊತೆಯೂ ಸಭೆಯೂ ನಡೆಸಲಾಗುವುದು ಎಂದರು.

ಪ್ರಮುಖ ದಿನಗಳು

ಇಂದಿನಿಂದ ನಾಮಪತ್ರ ಸಲ್ಲಿಸಲು ಅವಕಾಶ.
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 18.
ನವೆಂಬರ್ 19 ರಂದು ನಾಮಪತ್ರ ಪರಿಶೀಲನೆ.
ನವೆಂಬರ್ 21 ನಾಮಪತ್ರ ಹಿಂಪಡೆಯಲು ಕೊನೆ ದಿನ.
ಡಿ.5 ರಂದು ಉಪಚುನಾವಣೆ.
ಡಿಸೆಂಬರ್ 9 ರಂದು ಫಲಿತಾಂಶ, 8 ಗಂಟೆಯಿಂದ ಮತ ಎಣಿಕೆ ಆರಂಭ.
ಡಿಸೆಂಬರ್ 11ಕ್ಕೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

ನಾಲ್ಕು ಕ್ಷೇತ್ರಗಳಿಂದ ಈಗಾಗಲೇ 6 ನಾಮಪತ್ರ ಸಲ್ಲಿಕೆಯಾಗಿದೆ. ಕೆ.ಆರ್ ಪುರ ಕ್ಷೇತ್ರದಲ್ಲಿ 437 ಮತಗಟ್ಟೆಗಳ‌ ನಿರ್ಮಾಣ ಮಾಡಲಾಗಿದೆ. ಯಶವಂತಪುರ ಕ್ಷೇತ್ರದಲ್ಲಿ 461 ಮತಗಟ್ಟೆಗಳು, ಮಹಾಲಕ್ಷ್ಮಿ ಲೇಔಟ್ 270 ಮತಗಟ್ಟೆಗಳು, ಶಿವಾಜಿನಗರದಲ್ಲಿ 193 ಮತಗಟ್ಟೆಗಳು, 4 ಕ್ಷೇತ್ರದಲ್ಲಿ ಒಟ್ಟು 1361 ಮತಗಟ್ಟೆಗಳ ನಿರ್ಮಾಣ ಮಾಡಲಾಗಿದೆ.

ಕೆಆರ್ ಪುರ ಕ್ಷೇತ್ರದಲ್ಲಿ ಒಟ್ಟು 481132 ಮತದಾರರಿದ್ದು, ಯಶವಂತಪುರ ಕ್ಷೇತ್ರದಲ್ಲಿ ಒಟ್ಟು 475759 ಮತದಾರರು, ಮಹಾಲಕ್ಷ್ಮಿ ಲೇಔಟ್ ನಲ್ಲಿ ಒಟ್ಟು 283885 ಮತದಾರರು ಹಾಗೂ ಶಿವಾಜಿನಗರ ಕ್ಷೇತ್ರದಲ್ಲಿ ಒಟ್ಟು 191618 ಮತದಾರರು ಇದ್ದಾರೆ ಎಂದು ಚುನಾವಣಾ ಆಯುಕ್ತರು ಮಾಹಿತಿ ನೀಡಿದರು.

Intro:ಬೆಂಗಳೂರಿನ 4 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ- ಇಂದಿನಿಂದ ನೀತಿ ಸಂಹಿತೆ ಜಾರಿ

ಬೆಂಗಳೂರು- ನಗರದ ಕೆ.ಆರ್ ಪುರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಶಿವಾಜಿನಗರಗಳಿಗೆ ಡಿಸೆಂಬರ್ ಐದರಂದು ಮತದಾನ ನಡೆಯಲಿದ್ದು , ಚುನಾವಣಾ ಸಿದ್ಧತೆ ಆರಂಭಗೊಂಡಿದೆ.
ಬೆಂಗಳೂರು ಜಿಲ್ಲಾ‌‌‌ ಚುನಾವಣಾಧಿಕಾರಿಯಾಗಿರುವ, ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಸುದ್ದಿಗೋಷ್ಠಿ ನಡೆಸಿದರು.

ಬೆಂಗಳೂರಿನ 4 ವಿಧಾನಸಭಾ ಕ್ಷೇತ್ರಗಳಾದ ಕೆ.ಆರ್ ಪುರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಶಿವಾಜಿನಗರಕ್ಕೆ ಉಪಚುನಾವಣೆ ನಡೆಯಲಿದೆ.

ಪ್ರಮುಖ ಅಂಶಗಳು
-ಇಂದಿನಿಂದ ನಾಮಪತ್ರ ಸಲ್ಲಿಸಲು ಅವಕಾಶ
-ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 18
-ನವೆಂಬರ್ 19 ರಂದು ನಾಮಪತ್ರ ಪರಿಶೀಲನೆ
-ನವೆಂಬರ್ 21 ನಾಮಪತ್ರ ಹಿಂಪಡೆಯಲು ಕೊನೆ ದಿನ
-ಡಿ.5 ರಂದು ಉಪಚುನಾವಣೆ
-ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ
-ಡಿಸೆಂಬರ್ 9 ರಂದು ಫಲಿತಾಂಶ
-9ರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭ
-ಡಿಸೆಂಬರ್ 11ಕ್ಕೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
-4 ಕ್ಷೇತ್ರಗಳಿಂದ ಈಗಾಗಲೇ 6 ನಾಮಪತ್ರ ಸಲ್ಲಿಕೆ
-ಕೆ.ಆರ್ ಪುರ ಕ್ಷೇತ್ರದಲ್ಲಿ 437 ಮತಗಟ್ಟೆಗಳ‌ ನಿರ್ಮಾಣ
-ಯಶವಂತಪುರ ಕ್ಷೇತ್ರದಲ್ಲಿ 461 ಮತಗಟ್ಟೆಗಳು
-ಮಹಾಲಕ್ಷ್ಮಿ ಲೇಔಟ್ 270 ಮತಗಟ್ಟೆಗಳು
-ಶಿವಾಜಿನಗರ 193 ಮತಗಟ್ಟೆಗಳು
-4 ಕ್ಷೇತ್ರದಲ್ಲಿ ಒಟ್ಟು 1361 ಮತಗಟ್ಟೆಗಳ ನಿರ್ಮಾಣ
-ಕೆಆರ್ ಪುರ ಕ್ಷೇತ್ರದಲ್ಲಿ ಒಟ್ಟು ಮತದಾರರು 481132
-ಯಶವಂತಪುರ ಕ್ಷೇತ್ರದಲ್ಲಿ ಒಟ್ಟು 475759 ಮತದಾರರು
-ಮಹಾಲಕ್ಷ್ಮಿ ಲೇಔಟ್ ನಲ್ಲಿ ಒಟ್ಟು 283885 ಮತದಾರರು
-ಶಿವಾಜಿನಗರ ಕ್ಷೇತ್ರದಲ್ಲಿ ಒಟ್ಟು 191618 ಮತದಾರರು

ಅಲ್ಲದೆ ಈ ಬಾರಿಯೂ ಉಪ ಚುನಾವಣೆಯಲ್ಲಿ ಇವಿಎಂ ಜೊತೆ ವಿವಿ ಪ್ಯಾಟ್ ಕಡ್ಡಾಯವಾಗಿದ್ದು, ಬೆಂಗಳೂರಿನ ಆಯಾ ವಿಧಾನಸಭಾ ಕ್ಷೇತ್ರಗಳ ಭದ್ರತಾ‌ಕೊಠಡಿಯಲ್ಲೇ ಇವಿಎಂ ಶೇಖರಿಸಿಡಲಾಗಿದೆ.ಮಾದರಿ ನೀತಿ ಸಂಹಿತೆ ಇಂದಿನಿಂದ ಡಿ 11ರವರೆಗೆ ಜಾರಿಯಿರಲಿದೆ. ಪ್ರತಿ ಮತಗಟ್ಟೆಗೆ 1 ಅಧ್ಯಕ್ಷಾಧಿಕಾರಿ, 3 ಜನ ಮತಗಟ್ಟೆ ಅಧಿಕಾರಿ ನೇಮಕವಾಗಿದ್ದು, 4 ಕ್ಷೇತ್ರಗಳಿಗೆ ಒಟ್ಟು 5988 ಚುನಾವಣಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೈಕ್ರೋ ಅಬ್ಸರ್ವರ್ಸ್ ಗಳನ್ನೂ ಮತದಾನ ಪ್ರಕ್ರಿಯೆಗೆ ನಿಯೋಜನೆ ಮಾಡಲಾಗಿದ್ದು, ಚುನಾವಣಾ ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್ಸ್ ಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು.

ಉಪಚುನಾವಣೆ ದೂರುಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ಕೊಠಡಿ ಸ್ಥಾಪನೆ ಮಾಡಲಾಗಿದ್ದು, ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ರೂ 08022975561 / 8884118033 ಈ ನಂಬರ್ ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ..

ಇನ್ನು ಚುನಾವಣಾ ಸಂಧರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಮಡೆಯದಂತೆ ಪೊಲೀಸ್ ಸಿಬ್ಬಂದಿಗಳ ಜೊತೆಯೂ ಸಭೆಯೂ ನಡೆಸಲಾಗುವುದು ಎಂದರು.

ಸೌಮ್ಯಶ್ರೀ
Kn_bng_02_election_PC_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.