ಬೆಂಗಳೂರು : ನಗರದಲ್ಲಿ ಭಾರಿ ಮಳೆಯಿಂದಾಗಿ 66 ಕೆವಿ ಓವರ್ ಹೆಡ್ ಕಂಡಕ್ಟರ್ ಸ್ಥಗಿತಗೊಂಡು ಹಾರೋಹಳ್ಳಿ ಮತ್ತು ತಾತಗುಣಿ ಎರಡರಲ್ಲೂ ಸಿಡಬ್ಲ್ಯೂಎಸ್‌ಎಸ್ 1, 2 ಮತ್ತು 3ನೇ ಹಂತದಲ್ಲಿ ಅಡಚಣೆ ಉಂಟಾಗಿದೆ. ವಿಶ್ವ ಜಲ ದಿನದಂದೇ ಅರ್ಧಕ್ಕರ್ಧ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿದೆ. ನಿನ್ನೆಯೂ ನೀರು ಸರಬರಾಜು ಆಗಿರಲಿಲ್ಲ. ಇಂದು ಕೆಲ ಪ್ರದೇಶಗಳಿಗೆ ಸ್ಥಗಿತಗೊಂಡಿರುವುದಾಗಿ ಬೆಂಗಳೂರು ಜಲಮಂಡಳಿ ಪ್ರಕಟಣೆ ಹೊರಡಿಸಿದೆ.
ಯಾವ ಏರಿಯಾದಲ್ಲಿ ನೀರು ಬರುವುದಿಲ್ಲ: ಹೊಸ ಬಿನ್ನಿಲೇಔಟ್, ವಿದ್ಯಾಪೀಠ, ಗುರುರಾಜಲೇಔಟ್, ವಿವೇಕಾನಂದನಗರ, ಕತ್ರಿಗುಪ್ಪೆ, ತ್ಯಾಗರಾಜ ನಗರ, ಬಸವನಗುಡಿ, ಮೌಂಟ್ ಜಾಯ್ ಎಕ್ಸ್‌ಟೆನ್ಶನ್, ಕುಮಾರಸ್ವಾಮಿಲೇಔಟ್, ಇಸ್ರೋಲೇಔಟ್, ದೊಮ್ಮಲೂರು ಲೇಔಟ್, ಅಮರಜ್ಯೋತಿ ಲೇಔಟ್, ಆಡುಗೋಡಿ, ಕೋರಮಂಗಲ, ಕೆಹೆಚ್‌ಬಿ ಹೊಸ ಗುಡ್ಡದಹಳ್ಳಿ, ಬಾಪೂಜಿನಗರ, ಕಲಾಸಿಪಾಳ್ಯ, ಬಾದಾಮಾಖಾನ್, ಸುಧಾಮನಗರ, ಕೆಜಿನಗರ, ಆಜಾದ್‌ನಗರ, ಪಾದರಾಯನಪುರ, ಜೆಜೆಆರ್‌ನಗರ, ರಂಗನಾಥ ಕಾಲೋನಿ, ಸಿದ್ದಾರ್ಥನಗರ, ದೇವಗಿರಿ, ಯಡಿಯೂರು, ಕರಿಸಂದ್ರ, ಬನಗಿರಿನಗರ, ಕಾಮಕ್ಯಲೇಔಟ್, ಇಟ್ಟಮಡು, ಪದ್ಮನಗರ, ಉತ್ತರನಗರ, ಹೊಸಕೆರೆಹಳ್ಳಿ, ಚಿಕ್ಕಲ್ಲಸಂದ್ರ, ರಾಮಾಂಜನೇಯನಗರ, ಪಿಪಿ ಲೇಔಟ್ ಹಾಗೂ ಶಾಂತಿನಗರ ಭಾಗಕ್ಕೆ ಬಂದರೆ ಬೈರಸಂದ್ರ, ಆರ್‌ಬಿಐ ಕಾಲೋನಿ, ಹೊಂಬೇಗೌಡ ನಗರ, ಸಿದ್ದಾಪುರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಜೆಪಿನಗರ, ಗಾಂಧಿನಗರ, ವಸಂತನಗರ, ಹೈಗ್ರೌಂಡ್ಸ್, ಸಂಪಂಗಿರಾಮನಗರ, ಟೌನ್ಹಾಲ್, ಲಾಲ್‌ಬಾಗ್ ರಸ್ತೆ ತನಕ ನೀರು ಬರುವುದಿಲ್ಲ.
ಹಾಗೇ ಕುಂಬಾರಪೇಟೆ, ಕಾಟನ್‌ಪೇಟೆ, ಚಿಕ್ಕಪೇಟೆ, ಭಾರತೀನಗರ, ಸೇಂಟ್ ಜಾನ್ಸ್ ರಸ್ತೆ, ಇನ್‌ಫೆಂಟ್ರಿ ರಸ್ತೆ, ಶಿವಾಜಿನಗರ, ಫ್ರೇಜರ್ ಟೌನ್, ಬ್ಯಾಡರಹಳ್ಳಿ, ನೇತಾಜಿರಸ್ತೆ, ಕೋಲ್ಸ್ ರಸ್ತೆ, ಕಾಕ್ಸ್‌ಟೌನ್ ಸೇರಿದಂತೆ ವಿವೇಕಾನಂದನಗರ, ಮಾರುತಿಸೇವಾನಗರ, ಪಿ&ಟಿ ಕಾಲೋನಿ, ಡಿಜೆಹಳ್ಳಿ, ನಾಗವಾರ ಭಾಗದಲ್ಲೂ ನೀರು ಬರುವುದಿಲ್ಲ.
ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ.. ರಾಜ್ಯದಲ್ಲಿ ಮೂರು ದಿನ ಮಳೆ ಮುಂದುವರಿಕೆ
ಪಿಳ್ಳಣ್ಣ ಗಾರ್ಡನ್-1ನೇ, 2ನೇ 3ನೇ ಹಂತ, ಲಿಂಗರಾಜಪುರ, ಚಾಮರಾಜಪೇಟೆ, ಬ್ಯಾಂಕ್ ಕಾಲೋನಿ. ಗವಿಪುರಂ, ಹನುಮಂತನಗರ, ಗಿರಿನಗರ, ಬೈಟರಾಯನಪುರ, ನೀಲಸಂದ್ರ, ಶ್ರೀನಗರ, ಬನಶಂಕರಿ, ಯಶವಂತಪುರ, ಮಲ್ಲೇಶ್ವರಂ, ಕುಮಾರಪಾರ್ಕ್, ಜಯಮಹಲ್, ಶೇಷಾದ್ರಿಪುರಂ, ಸದಾಶಿವನಗರ, ಪ್ಯಾಲೇಸ್ ಗುಟ್ಟಹಳ್ಳಿ, ಸಂಜಯನಗರ, ಡಾಲರ್ಸ್ ಕಾಲೋನಿ, ಗೆದ್ದಲಹಳ್ಳಿ, ಬೂಪಸಂದ್ರ, ಕಾವಲ್ಬ್ಯಸಂದ್ರ, ಎಂ.ಜಿ.ರಸ್ತೆ, ಎಚ್ಎಎಲ್ 2ನೇ ಹಂತ, ಇಂದಿರಾನಗರ ಜೀವನಭೀಮಾನಗರ, ಹಲಸೂರು, ಜೋಗುಪಾಳ್ಯ, ದೀನಬಂಧುನಗರ, ಎಸ್.ಪಿ.ರಸ್ತೆ, ಎಸ್.ಜೆ.ಪಿ ರಸ್ತೆ, ಒಟಿ ಪೇಟೆ, ಜಾಲಿ ಮೊಹಲ್ಲಾ, ಪಿವಿಆರ್ ರಸ್ತೆ, ಕೆ.ಜಿ. ಹಳ್ಳಿ, ಬಿಟಿ ಲೇಔಟ್, ಮಡಿವಾಳ, ಡೈರಿ ಸರ್ಕಲ್, ಮಾರುತಿ ನಗರ, ನೇತಾಜಿ ನಗರ, ನಿಮ್ಹಾನ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಥಗಿತವಾಗಲಿದೆ.