ಬೆಂಗಳೂರು : ಕೋವಿಡ್ ನಿಯಮ ಉಲ್ಲಂಘನೆ ಮಾಡುತ್ತಿದ್ದ ಹಿನ್ನೆಲೆ ಮೂಡಲಪಾಳ್ಯದಲ್ಲಿರುವ ಸಾಗರ್ ಕ್ಲಿನಿಕ್‌ನ ಮಾಲೀಕ ಡಾ. ರಾಜುರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದು, ಇದಕ್ಕೆ ವೈದ್ಯರು ಕ್ಷಮೆ ಕೋರಿದ್ದಾರೆ.
ಇದರ ಬೆನ್ನಲ್ಲೇ ಕೆಪಿಎಂಇ ಕಾಯ್ದೆಯಡಿ ಕ್ಲಿನಿಕ್ ಕೂಡ ಮುಚ್ಚುವಂತೆ ಆದೇಶಿಸಲಾಗಿತ್ತು. ಈ ಮಧ್ಯೆ ಸ್ಥಳೀಯ ಜನರು ಕ್ಲಿನಿಕ್ ಕ್ಲೋಸ್‌ಗೆ ವಿರೋಧ ವ್ಯಕ್ತಪಡಿಸಿ ದಾಂಧಲೆ ಸೃಷ್ಟಿಸಿದರು. ಇದಾದ ಬಳಿಕ ಮತ್ತೆ ರಾಜು ಕ್ಲಿನಿಕ್ ರೀ ಓಪನ್ ಆಗಿದ್ದು, ಕೋವಿಡ್ ನಿಯಮ ಪಾಲಿಸುವುದಾಗಿ ಕ್ಷಮಾಪಣಾ ಪತ್ರವನ್ನ ನೀಡಿದ್ದಾರೆ.
ಕೆಪಿಎಂಇ ಲೈಸನ್ಸ್ ಕೂಡ ನವೀಕರಣ ಮಾಡದೇ ಇರುವುದು ಕಂಡ ಬಂದ ಹಿನ್ನೆಲೆ ಇದೀಗ ಅದಕ್ಕೂ ಅರ್ಜಿ ಸಲ್ಲಿಸಿದ್ದಾರೆ. ಕೋವಿಡ್ ನಿಯಮ ಪಾಲಿಸದೇ, ಮತ್ತೆ ಕಡೆಗಣನೆ ಮಾಡಿದರೆ ಲೈಸನ್ಸ್ ರದ್ದು ಮಾಡುವ ಎಚ್ಚರಿಕೆ ನೀಡಲಾಗಿದೆ.