ಬೆಂಗಳೂರು: ವೆವ್ರ ಸಂಸ್ಥೆ ಮತ್ತು ಪೋರ್ಚುಗೀಸ್ನ ಇನೋವೇವ್ ಗ್ರೂಪ್ ಸಹಯೋಗದಲ್ಲಿ ಆರಂಭಿಸಿರುವ ಹೆಲ್ತ್ಕೇರ್ ಪಾಡ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದ್ದಾರೆ.
ನಂತರ ಮಾತನಾಡಿದ ಸಚಿವರು, ಈ ಪಾಡ್ಗಳು ಚಲಿಸುವ ಆಸ್ಪತ್ರೆಯಂತಿದ್ದು, ಎಲ್ಲಿ ಬೇಕಾದರೂ ಅಳವಡಿಸಬಹುದಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಒಳಗೊಂಡಿರುವ ಈ ವ್ಯವಸ್ಥೆಯಿಂದ ರೋಗ ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆಯನ್ನೇ ತರಬಹುದು. ತಂತ್ರಜ್ಞಾನ ಕ್ಷೇತ್ರದ ನವೋದ್ಯಮಗಳು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಜನರಿಗೆ ಸೌಲಭ್ಯಗಳನ್ನು ಮಾಡಿಕೊಡುವ ಪ್ರಯತ್ನ ಮಾಡಬೇಕು ಎಂದರು.
ಒಂದು ಪಾಡ್ನಲ್ಲಿ 4 ರಿಂದ 9 ಹಾಸಿಗೆಗಳಿರುತ್ತವೆ. ಈ ಪಾಡ್ಗಳನ್ನು ಅಳವಡಿಸಲು 500 ಚದರ ಅಡಿ ಜಾಗ ಬೇಕಾಗುತ್ತದೆ. ಇವುಗಳನ್ನು ಆಸ್ಪತ್ರೆ, ಪಾರ್ಕಿಂಗ್ ಅಥವಾ ಯಾವುದೇ ಸುರಕ್ಷಿತವಾದ ಜಾಗದಲ್ಲಿ ಅಳವಡಿಸಬಹುದಾಗಿದೆ.