ETV Bharat / city

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಝಳಪಿಸಿದ ಮಾರಕಾಸ್ತ್ರ.. ಇಬ್ಬರ ಬರ್ಬರ ಹತ್ಯೆ - ಇಬ್ಬರ ಬರ್ಬರ ಹತ್ಯೆ

ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ಆಟ್ಟಹಾಸ ಮಿತಿಮೀರಿದೆ. ಜೆಪಿನಗರದ 24ನೇ ಮುಖ್ಯ ನಡು ರಸ್ತೆಯಲ್ಲಿಯೇ ರೌಡಿಶೀಟರ್ ಸೇರಿ ಇಬ್ಬರನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಬರ್ಬರ ಹತ್ಯೆ
author img

By

Published : Aug 26, 2019, 8:21 AM IST

Updated : Aug 26, 2019, 9:21 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ಆಟ್ಟಹಾಸ ಮಿತಿಮೀರಿದೆ. ನಡು ರಸ್ತೆಯಲ್ಲಿಯೇ ಸಿನಿಮೀಯ ಶೈಲಿಯಲ್ಲಿ ಅಟ್ಟಾಡಿಸಿಕೊಂಡು ರೌಡಿಶೀಟರ್ ಸೇರಿ ಇಬ್ಬರನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮಂಜ ಮತ್ತು ನವೀನ್ ಎಂಬುವರು ಕೊಲೆಯಾದವರು. ಜೆಪಿನಗರದ 24ನೇ ಮುಖ್ಯ ರಸ್ತೆಯಲ್ಲಿ ಇಬ್ಬರು ರಾತ್ರಿ ವೇಳೆ ಬೈಕ್​ನಲ್ಲಿ ಸಂಚರಿಸುತ್ತಿರುವಾಗ ಹಿಂದಿನಿಂದ ಐ ಟ್ವೆಂಟಿ ವಾಹನದಲ್ಲಿ ಬಂದ 10 ಮಂದಿ ಇಬ್ಬರನ್ನೂ‌ ನಡು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಘಟನೆ ಹೇಗೆ ನಡೆಯಿತು?:

ಕೊಲೆಯಾದ ನವೀನ್, ಬಿಲ್ಡರ್ ಒಬ್ಬರ ಮಗ. ಸ್ನೇಹಿತ ಮಂಜನ ಜೊತೆ‌ ನಿನ್ನೆ ರಾತ್ರಿ ಜೆಪಿನಗರದ ತಂದೂರಿ ಹೋಟೆಲ್​ಗೆ ಊಟಕ್ಕೆ ಹೋಗಿದ್ದ. ಇದನ್ನ ಗಮನಿಸಿದ ಇವರ ವಿರೋಧಿಗಳ ತಂಡ ಐ ಟ್ವೆಂಟಿ ವಾಹನದಲ್ಲಿ ಸಜ್ಜಾಗಿ ಬಂದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ನಂತರ ಕುಡಿದ ಮತ್ತಿನಲ್ಲಿ ಅವರು ಸನಿಹದಲ್ಲಿದ್ದ ಕಂಬಕ್ಕೆ ತಮ್ಮ ಕಾರನ್ನು ಗುದ್ದಿಸಿದ್ದಾರೆ. ಪರಿಣಾಮ ಕಾರನ್ನು ಅಲ್ಲೇ ಬಿಟ್ಟು ಕೊಲೆಗಾರರು ಪರಾರಿಯಾಗಿದ್ದಾರೆ. ಪೊಲೀಸರು ಕಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದು ವೀರಭದ್ರಸ್ವಾಮಿ ಎಂಬುವರ ವಾಹನ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಇಬ್ಬರ ಬರ್ಬರ ಹತ್ಯೆ

ಕೊಲೆಯಾದ ಮಂಜನ ತಲಘಟ್ಟಪುರ ಮತ್ತು ಕುಮಾರಸ್ವಾಮಿ ಲೇಔಟ್ ಠಾಣೆಯ ರೌಡಿಶೀಟರ್​ ಪಟ್ಟಿಯಲ್ಲಿದ್ದಾನೆ. ಕಳೆದ ಕೆಲ ವರ್ಷದ ಹಿಂದೆ ದಕ್ಷಿಣ ವಿಭಾಗದ ರೌಡಿ ಟ್ಯಾಬ್ಲೆಟ್ ರಘು ಎಂಬುವನ ಹತ್ಯೆ ಪ್ರಕರಣದಲ್ಲಿ ಮಂಜ ಭಾಗಿಯಾಗಿದ್ದ. ಸದ್ಯ ಇದೇ ದ್ವೇಷದಲ್ಲಿ ಟ್ಯಾಬ್ಲೆಟ್ ರಘು ಕಡೆಯವರಿಂದ ಈ ಕೃತ್ಯ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಜೆಪಿನಗರ ಮತ್ತು ಪುಟ್ಟೇನಹಳ್ಳಿ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಘಟನೆ ನಡೆದ ತಕ್ಷಣ ರಾತ್ರಿಯೇ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್, ಡಿಸಿಪಿ ರೋಹಿಣಿ ಸೆಪೆಟ್ ಮತ್ತು ಡಿಸಿಪಿ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ಸಿಲಿಕಾನ್ ಸಿಟಿಯಲ್ಲಿ ಮಿತಿಮೀರಿದ ರೌಡಿಗಳ ಆರ್ಭಟ
ರೌಡಿಗಳ ಅಟ್ಟಹಾಸಕ್ಕೆ ನಡೆದೋಯ್ತು ಡಬಲ್ ಮರ್ಡರ್

ಒಬ್ಬ ರೌಡಿ ಮಂಜ ಪೋಟೊ ಇದೆ ಇನ್ನೋಬ್ರದ್ದು ಸಿಕ್ಕಗ ಕಳಿಸುವೆ

ಸಿಲಿಕಾನ್ ಸಿಟಿಯಲ್ಲಿ ಮಿತಿಮೀರಿದ ರೌಡಿಗಳ ಆರ್ಭಟ ನಡೆದು ಮತ್ತೆ ನೆತ್ತರು ಹರಿದಿದೆ. ನಟ್ಟ ನಡು ರಸ್ತೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಅಟ್ಟಾಡಿಸಿ ರೌಡಿ ಶೀಟರ್ ಸೇರಿ ಇಬ್ಬರ ಹತ್ಯೆ ಮಾಡಲಾಗಿದೆ.ರೌಡಿ ಶೀಟರ್ ತಮ್ಮ ಮಂಜ ಮತ್ತು ನವೀನ್ ಹತ್ಯೆಗೊಳಗಾದವರು ..

ಜೆಪಿ ನಗರದ 24 ನೇ ಮುಖ್ಯ ರಸ್ತೆಯಲ್ಲಿ ಆಕ್ಟೀವಾದಲ್ಲಿ ಇಬ್ಬರು ರಾತ್ರಿ ಹೋಗುವಾಗ ಹಿಂದಿನಿಂದ ಐ ಟ್ವೆಂಟಿ ವಾಹನದಲ್ಲಿ 10ಮಂದಿ ಫಾಲೋ‌ಮಾಡಿ ಅಟ್ಟಾಡಿಸಿ 200 ಮೀಟರ್ ಅಂತರದಲ್ಲಿ ಇಬ್ಬರನ್ನು‌ ಬೇರೆ ಬೇರೆ ಕಡೆಯ ನಡು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಕೊಲೆಯಾದ ಪೈಕಿ ನವೀನ್ ಬಿಲ್ಡರ್ ಒಬ್ಬರ ಮಗನಾಗಿದ್ದು, ಮಂಜನ ಜೊತೆ‌ ನಿನ್ನೆ ರಾತ್ರಿ ಜೆ.ಪಿ ನಗರದ ತಂದೂರಿ ಹೋಟೆಲ್ ಗೆ ಊಟಕ್ಕೆ ಹೋಗಿದ್ರು .ಇದನ್ನ ಗಮನಿಸಿದ ಪುಡಾರಿಗಳ ತಂಡ ಐ ಟ್ವೆಂಟಿ ವಾಹನದಲ್ಲಿ ಕುಡಿದು ಸಜ್ಜಾಗಿ ಅಟ್ಟಾಡಿಸಿ ಕೊಲೆ ಮಾಡಿದ್ದಾರೆ. ನಂತ್ರ ಹತ್ಯೆ ಬಳಿಕ ಓಡುವ ರಭಸಕ್ಕೆ ಲೈಟ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ಆಕ್ಸಿಡೆಂಟ್ ಆದ ಕಾರಣ ಕಾರ್ ಅಲ್ಲೆ ಬಿಟ್ಟು ಓಡಿದ್ದಾರೆ. ಸದ್ಯ ಪೊಲೀಸರು ಕಾರು ವಶಕ್ಕೆ ಪಡೆದು ಪರಿಶೀಲನೆ ಮಾಡಿದಾಗ ಕಾರು ವೀರಭಧ್ರಸ್ವಾಮಿ ಎಂಬುವವರ ಹೆಸರಿನಲ್ಲಿದ್ದು ಕೃತ್ಯಕ್ಕೆ ಬಳಸಿದ್ದಾರೆ ಅನ್ನೋದು ಗೊತ್ತಾಗಿದೆ ..

ಇನ್ನು ಘಟನೆ ನಡೆದ ಜಾಗದಲ್ಲಿ ಒಂದು ಪೀಠೋಪಕರಣ ಮಳಿಗೆ ಇದ್ದು, ಸಿಸಿ ಕ್ಯಾಮೆರಾ ಇದ್ದು, ವರ್ಕ್ ಆಗ್ತಿಲ್ಲ ಹೀಗಾಗಿ ತನಿಖೆಗೆ ಕೊಂಚ ಹಿನ್ನೆಡೆಯಾಗಿದ್ದು ಪ್ರಕರಣದ ಸಂಬಂಧ ಸದ್ಯ ಜೆಪಿನಗರ ಮತ್ತು ಪುಟ್ಟೇನಹಳ್ಳಿ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಹಾಗೆ ಘಟನೆ ನಡೆದ ತಕ್ಷಣ ರಾತ್ರಿ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್, ಡಿಸಿಪಿ ರೋಹಿಣಿ ಸೆಪೆಟ್ ಮತ್ತು ಡಿಸಿಪಿ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಕೊಲೆಯಾದ ತಮ್ಮ ಮಂಜನ ಮೇಲೆ ತಲಘಟ್ಟಪುರ ಮತ್ತು ಕುಮಾರಸ್ವಾಮಿ ಲೇಔಟ್ ಠಾಣೆಯ ಎರಡು ಕಡೆ ರೌಡಿ ಶೀಟ್ ಪಟ್ಟಿ ಇದೆ. ಕಳೆದ ಕೆಲ ವರ್ಷ ಹಿಂದೆ ದಕ್ಷಿಣಾ ವಿಭಾಗದ ರೌಡಿ
ಟ್ಯಾಬ್ಲೆಟ್ ರಘು ಎಂಬ ರೌಡಿ ಹತ್ಯೆ ಪ್ರಕರಣದಲ್ಲಿ ಕೊಲೆಯಾದ ಮಂಜ ಭಾಗಿಯಾಗಿದ್ದ .ಸದ್ಯ ಇದೇ ದ್ವೇಷ ದಲ್ಲಿ ಟ್ಯಾಬ್ಲೆಟ್ ರಘು ಕಡೆಯವರಿಂದಲೇ ಈ ಕೃತ್ಯ ನಡೆದಿರುವ ಶಂಕೆ ವ್ತಕ್ತವಾಗಿದೆ.
ಅದೇನೆ ಇರಲಿ ದಕ್ಷಿಣಾ ವಿಭಾಗದಲ್ಲಿ ಕಳೆದೆರೆಡು ದಿನದಲ್ಲಿ ರೌಡಿಗಳ ಅಟ್ಟಹಾಸ ಮಿತಿಮೀರಿದ್ದು ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ

Body:KN_BNG_01_DUBAL_MURDER_7204498Conclusion:KN_BNG_01_DUBAL_MURDER_7204498
Last Updated : Aug 26, 2019, 9:21 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.