ETV Bharat / city

ಜೋಡಿ ಕೊಲೆ ಪ್ರಕರಣ: ಬಾಲಾಪರಾಧಿಗೆ ಜಾಮೀನು ನೀಡಿದ ಹೈಕೋರ್ಟ್

author img

By

Published : Apr 16, 2022, 7:50 AM IST

ಜೋಡಿ ಕೊಲೆ ಪ್ರಕರಣದಲ್ಲಿ ಅರ್ಜಿದಾರ ಎರಡೂವರೆ ವರ್ಷದಿಂದ ಸೆರೆವಾಸದಲ್ಲಿದ್ದಾನೆ. ಪ್ರಕರಣದ ಮೊದಲ ಅಪರಾಧಿ ಸೇರಿದಂತೆ ಎಲ್ಲರಿಗೂ ಈಗಾಗಲೇ ಜಾಮೀನು ಸಿಕ್ಕಿದೆ. ಹೀಗಾಗಿ, ಅರ್ಜಿದಾರನಿಗೆ ಷರತ್ತುಬದ್ಧ ಜಾಮೀನು ಅನ್ನು ಹೈಕೋರ್ಟ್​ ನೀಡಿದೆ.

Karnataka High Court
ಹೈಕೋರ್ಟ್

ಬೆಂಗಳೂರು: ಜೋಡಿ ಕೊಲೆ ಪ್ರಕರಣದರಲ್ಲಿ ಬಂಧಿತನಾಗಿದ್ದ 17 ವರ್ಷದ ಬಾಲಾಪರಾಧಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ. ಪ್ರಕರಣದಲ್ಲಿ ಎರಡೂವರೆ ವರ್ಷಗಳಿಂದ ಜೈಲಿನಲ್ಲಿದ್ದ ಬಾಲಕ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ ಸಂದೇಶ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಅಪ್ರಾಪ್ತರು ತಪ್ಪಿತಸ್ಥರೆಂದು ಸಾಬೀತಾದರೂ ಗರಿಷ್ಠ 3 ವರ್ಷ ಶಿಕ್ಷೆ ವಿಧಿಸಬಹುದು. ಈ ಪ್ರಕರಣದಲ್ಲಿ ಅರ್ಜಿದಾರ ಕೊಲೆ ಆರೋಪದಡಿ ಎರಡೂವರೆ ವರ್ಷದಿಂದ ಸೆರೆವಾಸದಲ್ಲಿದ್ದಾನೆ. ಪ್ರಕರಣದ ಮೊದಲ ಅಪರಾಧಿ ಸೇರಿದಂತೆ ಎಲ್ಲ ಅಪರಾಧಿಗಳಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಹೀಗಾಗಿ, ಅರ್ಜಿದಾರನಿಗೆ ಷರತ್ತುಬದ್ಧ ಜಾಮೀನು ನೀಡಬಹುದು ಎಂದು ಅಭಿಪ್ರಾಯಪಟ್ಟಿದೆ.

ಹಾಗೆಯೇ, ಬಾಲಕ 2 ಲಕ್ಷ ರೂಪಾಯಿ ಮೊತ್ತಕ್ಕೆ ವೈಯಕ್ತಿಕ ಬಾಂಡ್‌ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯ ನಾಶಪಡಿಸಬಾರದು, ಬಾಲ ನ್ಯಾಯ ಮಂಡಳಿ ಪೂರ್ವಾನುಮತಿ ಇಲ್ಲದೆ ಅದರ ವ್ಯಾಪ್ತಿ ಬಿಟ್ಟು ಹೋಗಬಾರದು. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂಬ ಷರತ್ತು ವಿಧಿಸಿ ಜಾಮೀನು ನೀಡಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಬಾಲಾಪರಾಧಿ ಸೇರಿದಂತೆ 21 ಮಂದಿ ವಿರುದ್ಧ ಜೆಪಿ ನಗರ ಠಾಣೆ ಪೊಲೀಸರು ಜೋಡಿ ಕೊಲೆ ಪ್ರಕರಣ ದಾಖಲಿಸಿದ್ದರು. ಅಪರಾಧ ನಡೆದ ದಿನ ಅರ್ಜಿದಾರನಿಗೆ 17 ವರ್ಷ ವಯಸ್ಸಾಗಿತ್ತು. ಪೊಲೀಸರ ಬಂಧನದ ಬಳಿಕ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಲ ನ್ಯಾಯ ಮಂಡಳಿ 2019ರ ಜನವರಿ 4ರಂದು ವಜಾಗೊಳಿಸಿತ್ತು. ನಂತರ 2020ರ ಜನವರಿ 31ರಂದು ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಕೂಡ ಜಾಮೀನು ತಿರಸ್ಕರಿಸಿತ್ತು. ಈ ಹಿನ್ನೆಲೆ, ಬಾಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

ಇದನ್ನೂ ಓದಿ: 'ದಂಪತಿ ಕಲಹದಲ್ಲಿ ಅತ್ತೆ-ಮಾವನ ಎಳೆದು ತರಬೇಡಿ': ಸೊಸೆಯ ಅರ್ಜಿ ರದ್ದುಗೊಳಿಸಿದ ಕೋರ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.