ETV Bharat / city

ರಾಜಾಜಿನಗರ ಇಎಸ್​​ಐ ಆಸ್ಪತ್ರೆ ಆಡಳಿತ ಮಂಡಳಿಯ ಎಡವಟ್ಟು: ವೈದ್ಯರಿಂದ ಪ್ರತಿಭಟನೆ

author img

By

Published : Jun 25, 2020, 3:54 PM IST

ಇಲ್ಲಿಯವರೆಗೆ ರಾಜಾಜಿನಗರ ಇಎಸ್​​ಐ ಆಸ್ಪತ್ರೆಯ 8 ಮಂದಿಗೆ ಕೊರೊನಾ ಸೋಂಕು‌ ದೃಢಪಟ್ಟಿದೆ. ಆದರೆ ಸೋಂಕಿತರ ಸಂಪರ್ಕದಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡದೆ ಕೆಲಸಕ್ಕೆ ಬರುವಂತೆ ಸೂಚಿಸಿರುವ ಆಡಳಿತ ಮಂಡಳಿಯ ವಿರುದ್ಧ ವೈದ್ಯರು ಹಾಗೂ ನರ್ಸ್​ಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

Rajajinagar ESI hospital
ರಾಜಾಜಿನಗರ ಇಎಸ್​​ಐ ಆಸ್ಪತ್ರೆ

ಬೆಂಗಳೂರು: ರಾಜಾಜಿನಗರ ಇಎಸ್​​ಐ ಆಸ್ಪತ್ರೆಯ ಆಡಳಿತಾಧಿಕಾರಿಗಳ ಕಚೇರಿ ಮುಂದೆ ವೈದ್ಯರು ಹಾಗೂ ನರ್ಸ್​ಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜಾಜಿನಗರ ಇಎಸ್​​ಐ ಆಸ್ಪತ್ರೆಯ ಆಡಳಿತಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ

ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡದೆ ಕೆಲಸಕ್ಕೆ ಬರುವಂತೆ ಸೂಚಿಸಿರುವ ಆಡಳಿತ ಮಂಡಳಿಯ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಪ್ರಸೂತಿ ವಿಭಾಗದಲ್ಲಿ ಇಬ್ಬರಿಗೆ, ಇಬ್ಬರು ಮುಖ್ಯ ವೈದ್ಯರಿಗೆ, ಇಬ್ಬರು ಹಿರಿಯ ವೈದ್ಯರಿಗೆ, ಒಬ್ಬ ಪಿಜಿ ವೈದ್ಯ ವಿದ್ಯಾರ್ಥಿ ಸೇರಿ ಇಲ್ಲಿಯವರೆಗೆ ಇಎಸ್​​ಐನ ಒಟ್ಟು 8 ಮಂದಿಗೆ ಸೋಂಕು‌ ದೃಢಪಟ್ಟಿದೆ. ಆದರೆ ಇವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್​ಗೆ ಒಳಪಡಿಸದೆ ಕೆಲಸಕ್ಕೆ ಕರೆಯಿಸಿಕೊಳ್ಳಲಾಗಿದೆ ಎಂಬುದು ಪ್ರತಿಭಟನಾನಿರತ ಸಿಬ್ಬಂದಿಯ ಆರೋಪವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.