ETV Bharat / international

ಬೈರುತ್​ ಮೇಲಿನ ಇಸ್ರೇಲ್ ದಾಳಿಯಲ್ಲಿ ಮೃತರ ಸಂಖ್ಯೆ 45ಕ್ಕೆ ಏರಿಕೆ - Israeli airstrike on Beirut - ISRAELI AIRSTRIKE ON BEIRUT

ಬೈರುತ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ.

ಬೈರುತ್ ನಲ್ಲಿ ದಾಳಿ ನಡೆದ ಸ್ಥಳದ ದೃಶ್ಯ
ಬೈರುತ್ ನಲ್ಲಿ ದಾಳಿ ನಡೆದ ಸ್ಥಳದ ದೃಶ್ಯ (IANS)
author img

By ETV Bharat Karnataka Team

Published : Sep 22, 2024, 7:44 PM IST

ಬೈರುತ್: ಬೈರುತ್ ನ ದಕ್ಷಿಣ ಉಪನಗರದಲ್ಲಿರುವ ಕಟ್ಟಡವೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ರವಿವಾರ ತಿಳಿಸಿದೆ.

ಹಿಜ್ಬುಲ್ಲಾ ಸಂಘಟನೆಯ ಪ್ರಮುಖ ಘಟಕವಾಗಿರುವ ರಾಡ್ವಾನ್ ಫೋರ್ಸ್​ನ ಹಂಗಾಮಿ ಕಮಾಂಡರ್ ಇಬ್ರಾಹಿಂ ಅಕಿಲ್ ಮತ್ತು ಇತರ 14 ಕಮಾಂಡರ್​ಗಳು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಸದ್ಯ ದಾಳಿಗೊಳಗಾದ ಕಟ್ಟಡದ ಅವಶೇಷಗಳಡಿ ಸಿಲುಕಿ ಬದುಕುಳಿದವರು ಅಥವಾ ಶವಗಳನ್ನು ಪತ್ತೆ ಮಾಡಲು ಮೂರನೇ ದಿನವೂ ಪ್ರಯತ್ನಗಳು ನಡೆಯುತ್ತಿವೆ ಎಂದು ಸಚಿವಾಲಯವನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ ವಾರ ಲೆಬನಾನ್​ನಲ್ಲಿ ಸಂಭವಿಸಿದ ಪೇಜರ್​ ಹಾಗೂ ವಾಕಿಟಾಕಿಗಳ ಸ್ಫೋಟದ ಘಟನೆಗಳಲ್ಲಿ 37 ಜನ ಬಲಿಯಾಗಿ 2,931 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯ ನಂತರ ಇಸ್ರೇಲ್-ಲೆಬನಾನ್ ಗಡಿಯಲ್ಲಿ ಉದ್ವಿಗ್ನತೆ ತೀವ್ರವಾಗಿ ಹೆಚ್ಚಾಗಿದೆ.

ಹಿಜ್ಬುಲ್ಲಾದಿಂದ ಸರಣಿ ರಾಕೆಟ್ ದಾಳಿ: ಹಿಜ್ಬುಲ್ಲಾ ಶನಿವಾರ ಲೆಬನಾನ್​ನಿಂದ ಉತ್ತರ ಇಸ್ರೇಲ್ ಕಡೆಗೆ ಸರಣಿ ರಾಕೆಟ್ ದಾಳಿಗಳನ್ನು ನಡೆಸಿದೆ. ಇದು ಅಕ್ಟೋಬರ್ ನಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಗಡಿಯಾಚೆಗಿನ ಅತ್ಯಂತ ತೀವ್ರವಾದ ಮುಖಾಮುಖಿಗಳಲ್ಲಿ ಒಂದಾಗಿದೆ.

ಶನಿವಾರ ರಾತ್ರಿ, ಹಿಜ್ಬುಲ್ಲಾ ಇಸ್ರೇಲ್​ನ ಜೆಜ್ರೀಲ್ ಕಣಿವೆಯ ಉತ್ತರದ ಪಟ್ಟಣಗಳು ಮತ್ತು ನಗರಗಳ ಮೇಲೆ ಕನಿಷ್ಠ 10 ಕ್ಷಿಪಣಿಗಳನ್ನು ಹಾರಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಅಕ್ಟೋಬರ್ ಆರಂಭದಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ಇಸ್ರೇಲ್ ಭೂಪ್ರದೇಶಕ್ಕೆ ಹಿಜ್ಬುಲ್ಲಾ ರಾಕೆಟ್​ಗಳು ನಡೆಸಿದ ತೀವ್ರ ಆಕ್ರಮಣ ಇದಾಗಿದೆ. ಬಹುತೇಕ ಕ್ಷಿಪಣಿಗಳನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಆಕಾಶದಲ್ಲಿಯೇ ಹೊಡೆದುರುಳಿಸಿವೆ.

ಇಸ್ರೇಲ್​ನಿಂದಲೂ ಮತ್ತೆ ದಾಳಿ: ಇದಕ್ಕೆ ಪ್ರತಿಕ್ರಿಯೆಯಾಗಿ, ಇಸ್ರೇಲಿ ಜೆಟ್​ಗಳು ದಕ್ಷಿಣ ಲೆಬನಾನ್​ನಾದ್ಯಂತ ಸರಣಿ ಪ್ರತೀಕಾರದ ದಾಳಿಗಳನ್ನು ನಡೆಸಿದವು. ಹಿಜ್ಬುಲ್ಲಾದ ರಾಕೆಟ್ ಲಾಂಚರ್​ಗಳು ಮತ್ತು ಮಿಲಿಟರಿ ನೆಲೆಗಳು ಸೇರಿದಂತೆ ಕನಿಷ್ಠ 110 ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಐಡಿಎಫ್ ವರದಿ ಮಾಡಿದೆ. ಈ ಮೂಲಕ ಹಿಜ್ಬುಲ್ಲಾ ತನ್ನ ಕಡೆಗೆ ಮತ್ತಷ್ಟು ರಾಕೆಟ್​ಗಳನ್ನು ಹಾರಿಸಲಾಗದಂತೆ ಯಶಸ್ವಿಯಾಗಿ ತಡೆಯಲಾಗಿದೆ ಎಂದು ಐಡಿಎಫ್ ಹೇಳಿಕೊಂಡಿದೆ. ಹಿಜ್ಬುಲ್ಲಾದ ರಾಕೆಟ್-ಫೈರಿಂಗ್ ಸಾಮರ್ಥ್ಯಗಳನ್ನು ನಾಶಪಡಿಸುವ ಕಾರ್ಯತಂತ್ರದ ಭಾಗವಾಗಿ ಶನಿವಾರ ಮಧ್ಯಾಹ್ನ ಸಾವಿರಾರು ರಾಕೆಟ್ ಲಾಂಚರ್ ಬ್ಯಾರೆಲ್​ಗಳು ಸೇರಿದಂತೆ ಸುಮಾರು 290 ಹಿಜ್ಬುಲ್ಲಾ ತಾಣಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಐಡಿಎಫ್ ಹೇಳಿದೆ.

ಇದನ್ನೂ ಓದಿ : ಬೈಡನ್​ಗೆ ಪ್ರಾಚೀನ ಶೈಲಿಯ ಬೆಳ್ಳಿಯ ರೈಲಿನ ಮಾದರಿ ಉಡುಗೊರೆ ನೀಡಿದ ಪ್ರಧಾನಿ ಮೋದಿ - PM Modi in US

ETV Bharat Logo

Copyright © 2025 Ushodaya Enterprises Pvt. Ltd., All Rights Reserved.