ಬೆಂಗಳೂರು : ದೇಶದಲ್ಲಿ ಕೊರೊನಾ ಅಲೆ ಆರಂಭವಾದಾಗಿನಿಂದ ಎಲ್ಲಾ ವೈದ್ಯರು ಕೊರೊನಾ ರೋಗಿಗಳನ್ನ ಅದಷ್ಟು ಬೇಗ ಗುಣಮುಖರಾಗಲೆಂದು ಹಗಲು ರಾತ್ರಿ ದುಡಿಯುತ್ತಿದ್ದಾರೆ. ಜೊತೆಗೆ ಕೊರೊನಾ ಸೋಂಕಿತರಿಗೆ ಎಲ್ಲಾ ರೀತಿಯಲ್ಲಿ ಆತ್ಮಸ್ಥೈರ್ಯ, ಧೈರ್ಯ ತುಂಬುತ್ತಿದ್ದಾರೆ.
ಆದರೂ ಅದೆಷ್ಟೋ ರೋಗಿಗಳು ಕೊರೊನಾ ಬಂತು ಅನ್ನೊ ಭಯಕ್ಕೆ ಸಾವನ್ನಪ್ಪುತ್ತಿದ್ದಾರೆ ಅಥವಾ ಬೇಗ ಗುಣಮುಖರಾಗುತ್ತಿಲ್ಲ. ಹೀಗಾಗಿ ಕೊರೊನಾ ರೋಗಿಗಳಲ್ಲಿ ಧೈರ್ಯ ತುಂಬಲು ವೈದ್ಯರು ಹೊಸ ಪ್ಲಾನ್ ಮಾಡಿದ್ದಾರೆ.
ಇದನ್ನೂ ಓದಿ: ಸಂಕಷ್ಟದಲ್ಲಿದ್ದ ಕರ್ನಾಟಕ ಕಬ್ಬಡ್ಡಿ ಆಟಗಾರ್ತಿ ತೇಜಸ್ವಿನಿಗೆ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಕೊರೊನಾ ರೋಗಿಗಳೇ ತುಂಬಿರುವ ಕೋವಿಡ್ ವಾರ್ಡ್ನಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕುಣಿದ್ದಿದ್ದಾರೆ. ಡಾ.ಚಂದ್ರಮ್ಮ ಎಂಬುವವರು ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಈ ರೀತಿಯ ವಿನೂತನ ಪ್ರಯತ್ನ ಮಾಡಿದ್ದಾರೆ. ರೋಗಿಗಳಲ್ಲಿ ಭಯ ಓಡಿಸಿ ಜೀವನೋತ್ಸಾಹ ಹೆಚ್ಚಿಸಲು ಪಿಪಿಇ ಕಿಟ್ನಲ್ಲೇ ಕನ್ನಡದ ಹಾಡಿಗೆ ವೈದ್ಯರು ಕುಣಿದು ಸೋಂಕಿತರನ್ನು ಮನರಂಜಿಸಿದ್ದಾರೆ.