ETV Bharat / city

ಬುಟ್ಟಿ ಇದ್ದ ಮೇಲೆ ಹಾವು ಇದ್ದೇ ಇರುತ್ತದೆ.. ಸದ್ಯ ಅದು ಎಲ್ಲೋ ಹೊರಗಡೆ ಹೋಗಿದೆ : ಡಿ ಕೆ ಸುರೇಶ್

ಕ್ರಿಪ್ಟೋ ಕರೆನ್ಸಿ ಬಗ್ಗೆ ದೇಶದ ಯುವಕರು ಆಸಕ್ತಿಯಿಂದ ತಿಳಿದುಕೊಳ್ಳುತ್ತಿದ್ದಾರೆ. ಬಿಟ್ ಕಾಯಿನ್ ಹಗರಣ ದೇಶದ ಗಮನ ಸೆಳೆದಿದೆ. ಹೀಗಾಗಿ, ಈ ಕುರಿತು ಸಮಗ್ರ ತನಿಖೆ ಆಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಟ್ ಕಾಯಿನ್ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಯಾಕೆ ಅಂದರೆ ಈ ಹಗರಣದ ಫಲಾನುಭವಿಗಳು ಅವರೇ ಆಗಿದ್ದಾರೆ..

dk-suresh-reaction-on-r-ashok-bitcoin-statement
ಸಂಸದ ಡಿಕೆ ಸುರೇಶ್​​
author img

By

Published : Nov 15, 2021, 7:18 PM IST

ಬೆಂಗಳೂರು: ಬುಟ್ಟಿ ಇದ್ದ ಮೇಲೆ ಹಾವು ಇರುತ್ತದೆ. ಸದ್ಯ ಎಲ್ಲೋ ಹೊರಗೆ ಹೋಗಿರಬಹಯದು ಅಷ್ಟೇ.. ಎಂದು ಬಿಟ್​ ಕಾಯಿನ್​​ ವಿಚಾರದಲ್ಲಿ (Bitcoin scam) ಕಾಂಗ್ರೆಸ್​​ ಹಾವಿಲ್ಲದ ಬುಟ್ಟಿಯನ್ನು ತೋರುತ್ತಿದೆ ಎಂಬ ಸಚಿವ ಆರ್​. ಅಶೋಕ್​​ ಹೇಳಿಕೆಗೆ ಸಂಸದ ಡಿ ಕೆ ಸುರೇಶ್​ ತಿರುಗೇಟು ನೀಡಿದರು.

ಬಿಟ್​ ಕಾಯಿನ್​ ಕುರಿತು ಸಂಸದ ಡಿ ಕೆ ಸುರೇಶ್​ ಪ್ರತಿಕ್ರಿಯೆ ನೀಡಿರುವುದು..

ಇಂದು ನಗರದ ಕ್ವೀನ್ಸ್ ರಸ್ತೆಯ ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ಬಿಟ್ ಕಾಯಿನ್ ಪ್ರಕರಣದ (DK Suresh statement on Bitcoin scam) ವಿಚಾರವಾಗಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಆರ್​. ಅಶೋಕ್​ ಹೇಳಿಕೆಗೆ ಉತ್ತರಿಸಿದರು.

ಬುಟ್ಟಿ ಇದೆ ಎಂದು ಬಿಜೆಪಿ ನಾಯಕರಿಗೆ ಗೊತ್ತಾಗಿದೆಯಲ್ಲ, ಅದೇ ದೊಡ್ಡದು. ಬುಟ್ಟಿ ಇದ್ದ ಮೇಲೆ ಹಾವು ಇರುತ್ತದೆ. ಹಾವು ಎಲ್ಲೋ ಹೊರಗೆ ಹೋಗಿರಬಹಯದು ಅಷ್ಟೇ ಎಂದು ತಿರುಗೇಟು ನೀಡಿದರು.

ಹಾವಿಲ್ಲದೆ ಶ್ರೀಕಿಯನ್ನು ಬಂಧಿಸಿದ್ದರಾ..?: ಪ್ರಧಾನಿ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈವರೆಗೂ ಬಿಟ್ ಕಾಯಿನ್ ಬಗ್ಗೆ ಮಾತನಾಡಿಲ್ಲ. ಪೊಲೀಸರು ಶ್ರೀಕಿ (hacker Shreeki) ಬಂಧಸಿ, 11 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದರು.

ಬುಟ್ಟಿಯಲ್ಲಿ ಹಾವಿಲ್ಲದೆ ಪೊಲೀಸ್ ಇಲಾಖೆ ಶ್ರೀಕಿಯನ್ನು ಬಂಧಿಸಿದ್ದರಾ ಎಂದು ಬಿಜೆಪಿ ಮುಖಂಡರಿಗೆ ಪ್ರಶ್ನಿಸಿದರು. ಬಿಟ್ ಕಾಯಿನ್ ಹ್ಯಾಕ್ ಆಗಿರುವ ಬಗ್ಗೆ ಕೋರ್ಟ್​​​ ಮಾಹಿತಿಯನ್ನ ಪೊಲೀಸರು ಕೊಟ್ಟಿಲ್ವಾ? ಯಾರಾರ ಕೈವಾಡವಿದೆ ಎನ್ನುವುದನ್ನು ಬಿಜೆಪಿಯವರೇ ಹೇಳಬೇಕು. ಪೊಲೀಸರು ಸುಳ್ಳು ಹೇಳಿದ್ದಾರಾ ಬಿಜೆಪಿ ನಾಯಕರೇ ? ಎಂದು ಪ್ರಶ್ನಿಸಿದರು.

ಬಿಜೆಪಿಗರೇ ಫಲಾನುಭವಿಗಳು : ಕ್ರಿಪ್ಟೋ ಕರೆನ್ಸಿ ಬಗ್ಗೆ ದೇಶದ ಯುವಕರು ಆಸಕ್ತಿಯಿಂದ ತಿಳಿದುಕೊಳ್ಳುತ್ತಿದ್ದಾರೆ. ಬಿಟ್ ಕಾಯಿನ್ ಹಗರಣ ದೇಶದ ಗಮನ ಸೆಳೆದಿದೆ. ಹೀಗಾಗಿ, ಈ ಕುರಿತು ಸಮಗ್ರ ತನಿಖೆ ಆಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಟ್ ಕಾಯಿನ್ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಯಾಕೆ ಅಂದರೆ ಈ ಹಗರಣದ ಫಲಾನುಭವಿಗಳು ಅವರೇ ಆಗಿದ್ದಾರೆ ಎಂದು ದೂರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.