ನವದೆಹಲಿ: ಇಡಿ ಅಧಿಕಾರಿಗಳ ವಿಚಾರಣೆಗೆ ಡಿಕೆಶಿ ಪುತ್ರಿ ಐಶ್ವರ್ಯ ಹಾಜರಾದರು. ಮಾಜಿ ಸಚಿವ ಡಿಕೆಶಿ ಪುತ್ರಿ ಐಶ್ವರ್ಯಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ವಕೀಲರೊಂದಿಗೆ ಚರ್ಚಿಸಿ, ಧೈರ್ಯದಿಂದಲೇ ಇಡಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲು ಸನ್ನದ್ಧರಾಗಿ ಇಡಿ ಕಚೇರಿಗೆ ಐಶ್ವರ್ಯ ಆಗಮಿಸಿ ವಿಚಾರಣೆಗೆ ಹಾಜರಾದರು. ವಿಚಾರಣೆಗೆ ಹಾಜರಾದ ಐಶ್ವರ್ಯಗೆ ಇಡಿ ಪ್ರಶ್ನೆಗಳ ಸುರಿ ಮಳೆಯನ್ನೇ ಹರಿಸುತ್ತಿದೆ ಎನ್ನಲಾಗಿದೆ
ಇದ್ದಕ್ಕಿದ್ದಂತೆ ನಿಮ್ಮ ಆಸ್ತಿಯಲ್ಲಿ ಭಾರಿ ಏರಿಕೆ ಆಗಿದ್ದು ಹೇಗೆ ಎಂದು ಅಧಿಕಾರಿಗಳು ಐಶ್ವರ್ಯಳನ್ನು ಪ್ರಶ್ನಿಸುತ್ತಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. .ಮಂಗಳವಾರ ಜಾರಿ ನಿರ್ದೇಶನಾಲಯ ಡಿಕೆಶಿ ಪುತ್ರಿಗೆ ಸಮನ್ಸ್ ನೀಡಿತ್ತು. ಐಶ್ವರ್ಯ, ತಾಯಿ ಸುಮಾ ಹಾಗೂ ಕುಣಿಗಲ್ ಶಾಸಕ ರಂಗನಾಥ್ ಜೊತೆ ದೆಹಲಿಗೆ ಬಂದಿದ್ದರು. ಇಂದು ಬೆಳಗ್ಗೆ 11 ಗಂಟೆಗೆ ಲೋಕನಾಯಕ ಭವನದಲ್ಲಿರುವ ಇಡಿ ಪ್ರಧಾನ ಕಚೇರಿಯಲ್ಲಿ ಐಶ್ವರ್ಯ ವಿಚಾರಣೆ ಹಾಜರಾದರು.
ಹಗರಿಬೊಮ್ಮನಹಳ್ಳಿಯ ಸೋಲಾರ್ ಪ್ಲಾಂಟ್ ಸೋಲ್ಸ್ ಆ್ಯಂಡ್ ಸೇಲ್ಸ್, ಸೋಲ್ ಅರೆನಾ ಮಾಲ್‍ನಲ್ಲಿ ಪಾಲುದಾರಿಕೆ, ಉತ್ತರಹಳ್ಳಿಯಲ್ಲಿ ಅಜ್ಜಿಯಿಂದ 3 ಎಕರೆ ಗಿಫ್ಟ್ ಡೀಡ್, ಆರ್.ಆರ್ ನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ, ನ್ಯಾಷನಲ್ ಹಿಲ್ ವ್ಯೂ ಸ್ಕೂಲ್‍ನಲ್ಲಿ ಪಾತ್ರ ಹಾಗೂ ಶ್ರೀರಾಮ್ ಫೈನಾನ್ಸಿನಲ್ಲಿ ಇರುವ ಪಾಲುದಾರಿಕೆ ಬಗ್ಗೆ ಐಶ್ವರ್ಯಗೆ ಇಡಿ ಪ್ರಶ್ನೆಗಳನ್ನು ಕೇಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.