ಬೆಂಗಳೂರು : ನಾಳಿನ ಪದಗ್ರಹಣ ಸಮಾರಂಭ ಯಶಸ್ವಿಯಾಗಲೆಂದು ರಾಜ್ಯದ ವಿವಿಧ ಧಾರ್ಮಿಕ ಕ್ಷೇತ್ರಗಳ ಮುಖಂಡರು ಆಶೀರ್ವದಿಸಿ ಪ್ರಸಾದ ಕಳುಹಿಸಿಕೊಟ್ಟಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅದನ್ನ ತಮ್ಮ ಸದಾಶಿವನಗರ ನಿವಾಸದಲ್ಲಿ ಇಂದು ಸ್ವೀಕರಿಸಿದ್ದಾರೆ.
ಧರ್ಮಸ್ಥಳ ಪ್ರಸಾದ : ನಾಳೆ ನಡೆಯಲಿರುವ 'ಪ್ರತಿಜ್ಞಾ ವಿಧಿ' ಕಾರ್ಯಕ್ರಮ ಯಶಸ್ವಿಯಾಗಲೆಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಕಾರ್ಯದರ್ಶಿ ಕೃಷ್ಣಾ ಸಿಂಗ್ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಇಂದು ಪ್ರಸಾದ ತಲುಪಿಸಿದ್ದಾರೆ.
ಸುತ್ತೂರು ಮಠದ ಪ್ರಸಾದ : ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿಗಳ ಪರ ಜೆಎಸ್ಎಸ್ ಆಡಳಿತಾಧಿಕಾರಿ ಮಂಜುನಾಥ್, ಇಂದು ಡಿಕೆಶಿ ಅವರನ್ನ ಭೇಟಿ ಮಾಡಿ, ಸ್ವಾಮೀಜಿಗಳ ಆಶೀರ್ವಾದ ತಿಳಿಸಿ ಪ್ರಸಾದ ತಲುಪಿಸಿದರು.
ಹೀಗೆ ವಿವಿಧ ಧಾರ್ಮಿಕ ಕ್ಷೇತ್ರಗಳ ಮುಖಂಡರು ಆಶೀರ್ವದಿಸಿ ಪ್ರಸಾದ ಕಳುಹಿಸಿಕೊಟ್ಟಿದ್ದಾರೆ. ನಾಳಿನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ರಾಜ್ಯದ ಪಾಲಿಗೆ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹ್ಮದ್ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನ 7,800 ತಾಣಗಳಲ್ಲಿ ಏಕಕಾಲಕ್ಕೆ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.