ETV Bharat / city

ಬ್ರೇಕ್​​ಫಾಸ್ಟ್ ಮೀಟ್​​ನಲ್ಲಿ ಸರ್ಕಾರದ ವಿರುದ್ಧ ಹೋರಾಟ, ಸಿದ್ದರಾಮಯ್ಯ ಹುಟ್ಟುಹಬ್ಬದ ಬಗ್ಗೆ ಚರ್ಚೆ: ಡಿಕೆಶಿ

ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ. ಅದರ ವಿರುದ್ಧ ಹೋರಾಟ ಮಾಡಬೇಕಿದೆ. ಆ ಬಗ್ಗೆಯೂ ಬಗ್ಗೆ ಚರ್ಚೆ ಮಾಡಿದ್ದೇವೆ. ಜೊತೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಹಾಗೂ ಸಿದ್ದರಾಮಯ್ಯ ಹಿತೈಷಿಗಳು ಅವರ ಹುಟ್ಟುಹಬ್ಬದ ಆಚರಿಸುವ ಬಗ್ಗೆ ಬ್ರೇಕ್ ಫಾಸ್ಟ್ ಮೀಟ್​​ನಲ್ಲಿ ಚರ್ಚೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತಿಳಿಸಿದರು.

KPCC President DK Shivakumar
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್
author img

By

Published : Jul 8, 2022, 4:37 PM IST

ಬೆಂಗಳೂರು: ಜನರ ಭಾವನೆಯೊಂದಿಗೆ ಪಕ್ಷ ಕೆಲಸ ಮಾಡಬೇಕು. ಅದೇ ಕಾಂಗ್ರೆಸ್​​ನ ಸಿದ್ಧಾಂತ. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿರುವ ಬಗ್ಗೆ ಹಾಗೂ ಸಿದ್ದರಾಮಯ್ಯ ಹುಟ್ಟುಹಬ್ಬದ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಹೇಳಿದರು.

ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟ್ ಬಳಿಕ ಮಾತನಾಡಿದ ಅವರು, ಜು.18ರಂದು ಶಾಸಕರ ಸಭೆ ಇದೆ. ಎಐಸಿಸಿ ಕೆಲವು ಕಾರ್ಯಕ್ರಮ ಕೊಟ್ಟಿದ್ದಾರೆ. ನಿನ್ನೆ ಪದಾಧಿಕಾರಿಗಳು ಬಂದಿದ್ದರು. ಮುಂದೆ ಸಂಘಟನೆ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಸಹ ಕೆಲವು ಸಲಹೆ ನೀಡಿದ್ದಾರೆ. ನಿನ್ನೆ ಸಭೆಯ ಕೆಲ ಮಾಹಿತಿಯನ್ನು ಸಿದ್ದರಾಮಯ್ಯ ಅವರಿಗೆ ತಿಳಿಸಬೇಕಿತ್ತು. ಬೆಳಗ್ಗೆ ಮನೆಗೆ ತಿಂಡಿಗೆ ಬರಲು ಹೇಳಿದ್ದರು. ಅದಕ್ಕೆ ಬಂದು ಒಂದು ಗಂಟೆ ಚರ್ಚೆ ಮಾಡಿದ್ದೇನೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್

ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ. ಅದರ ವಿರುದ್ಧ ಹೋರಾಟ ಮಾಡಬೇಕಿದೆ. ಜೊತೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಹಾಗೂ ಸಿದ್ದರಾಮಯ್ಯ ಹಿತೈಷಿಗಳು ಅವರ ಹುಟ್ಟುಹಬ್ಬದ ಆಚರಿಸುವ ಬಗ್ಗೆ ಬ್ರೇಕ್ ಫಾಸ್ಟ್ ಮೀಟ್​​ನಲ್ಲಿ ಚರ್ಚೆಯಾಗಿದೆ ಎಂದು ತಿಳಿಸಿದರು.

ಭಿಕ್ಷೆ ಬೇಡಿ ಮಕ್ಕಳಿಗೆ ಬಟ್ಟೆ ಕೊಡ್ತೇವೆ: ಶಾಲಾ ವಿದ್ಯಾರ್ಥಿಗಳಿಗೆ ಶೂ, ಶಾಕ್ಸ್ , ಬಟ್ಟೆ ಕೊಡುವುದು ಅಗತ್ಯ ಇಲ್ಲ ಎಂಬ ಶಿಕ್ಷಣ ಸಚಿವರ ಹೇಳಿಕೆ ಸರಿಯಲ್ಲ. ಇದು ಅಗೌರವದ ಹೇಳಿಕೆ. ಮಾನವೀಯತೆಗೆ ಮಾಡಿದ ಅವಮಾನ. ಸಿಎಂ ಬೊಮ್ಮಾಯಿ ಅವರೇ.‌‌. ನಿಮ್ಮ ಬಳಿ ಬಟ್ಟೆ, ಶೂ ಕೊಡಲು ಸಾಧ್ಯವಾಗದೇ ಇದ್ದರೆ ಹೇಳಿ. ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಎಲ್ಲ ಕಡೆ ಭಿಕ್ಷೆ ಬೇಡಿ ಬಟ್ಟೆ ಕೊಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಳ್ಳಿ ಶಾಲೆಯಲ್ಲಿ ಓದಿದವರು ದೊಡ್ಡ ಸ್ಥಾನಕ್ಕೆ ಹೋಗಿದ್ದಾರೆ. ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಬಟ್ಟೆಗಳನ್ನು ಕೊಡಿಸಲು, ಒಳ್ಳೆಯ ಶಾಲೆಯಲ್ಲಿ ಓದಿಸಲು ದುಡಿಯುತ್ತಾರೆ. ಅದಕ್ಕೆ ಸರ್ಕಾರ ಸಹ ಶೂ, ಬಟ್ಟೆಗಳನ್ನು ಕೊಡುವ ಕಾರ್ಯಕ್ರಮ ಮಾಡಿದೆ. ಆದರೆ, ಶಿಕ್ಷಣ ಸಚಿವರು ಇದಕ್ಕೆ ವಿರುದ್ಧ ಹೇಳಿಕೆ ನೀಡಿದ್ದಾರೆ. ಇವರು ಏಕೆ ಬಟ್ಟೆಗಳನ್ನು ಹಾಕ್ತಾರೆ?. ಇವರು ಬನಿಯನ್, ಚಡ್ಡಿ ಹಾಕಿಕೊಂಡು ವಿಧಾನಸೌಧಕ್ಕೆ ಬರಲಿ ಎಂದು ಕಿಡಿ ಕಾರಿದರು.

ಇದು ರಾಜ್ಯದ ಎಲ್ಲ ಮಕ್ಕಳ ಸ್ವಾಭಿಮಾನದ ವಿಚಾರ. ನಮ್ಮ‌ಮಕ್ಕಳ ಬದುಕಿನ ವಿಚಾರ. ನೀವು ಮಕ್ಕಳನ್ನು ಅಗೌರವದಿಂದ ಕಾಣುತ್ತಿದ್ದೀರಿ. ಸರ್ಕಾರ ಮೊದಲಿನಿಂದಲೂ ಶಾಲಾ ಮಕ್ಕಳಿಗೆ ಬಟ್ಟೆ, ಶೂ, ಶಾಕ್ಸ್ ಕೊಡ್ತಾ ಬಂದಿದ್ದೇವೆ. ಕಾಂಗ್ರೆಸ್​​ನಿಂದ ಒಂದು ಕಾರ್ಯಕ್ರಮ ಹಾಕಿಕೊಳ್ಳುತ್ತೇವೆ. ಎಲ್ಲಾ ತಾಲೂಕು ಜಿಲ್ಲೆಯಲ್ಲಿ ಭಿಕ್ಷೆ ಎತ್ತಿ, ಮಕ್ಕಳಿಗೆ ಬಟ್ಟೆ ಕೊಡುತ್ತೇವೆ ಎಂದರು.

ಇದನ್ನೂ ಓದಿ: ಪಠ್ಯ ಪುಸ್ತಕ ಮುದ್ರಣ ವಿಚಾರ.. ಖರ್ಚು-ವೆಚ್ಚ ಕೇಳಿದ್ದಕ್ಕೆ ಸಚಿವರು ಗರಂ, ಮಾಧ್ಯಮಗೋಷ್ಟಿ ಅರ್ಧಕ್ಕೇ ಮೊಟಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.