ETV Bharat / city

ಮಂತ್ರಿಗಳು ಹಾಗೂ ಅಧಿಕಾರಿಗಳು ಸರ್ಕಾರದ ಕಂಟ್ರೋಲ್‌ನಲ್ಲಿ ಇಲ್ಲ: ಡಿಕೆಶಿ

ಕೆಂಪೇಗೌಡರ ಪುಸ್ತಕ ಓದಲಿ ಎಂದ ಮುನಿರತ್ನ ವಿಚಾರ ಪ್ರಸ್ತಾಪಿಸಿ, ಅವರು ಪುಸ್ತಕ ಬೇಗ ಕೊಡಲಿ. ನನಗೆ ರಾಜಕೀಯದಲ್ಲಿ ಈ ವಿದ್ಯೆನೂ ಇದೆ ಅಂತ ಗೊತ್ತಿರಲಿಲ್ಲ. ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಜೊತೆ ಇದ್ದಾರೆ. ನಾನು ಕೂಡ ಸಿದ್ದರಾಮಯ್ಯ ಜೊತೆಯೇ ಇದ್ದೇನೆ ಅವರೇ ನಮ್ಮ ನಾಯಕರು..

dk-shivakumar-talk-about-karnataka-govt-and-cm
ಸರ್ಕಾರದ ಕೈಯಲ್ಲಿ ಮಂತ್ರಿಗಳು ಹಾಗೂ ಅಧಿಕಾರಿಗಳಿಗೆ ಕಂಟ್ರೋಲ್ ಇಲ್ಲ: ಡಿಕೆಶಿ ಆರೋಪ....
author img

By

Published : Oct 25, 2020, 3:43 PM IST

ಬೆಂಗಳೂರು: ಸರ್ಕಾರದ ಕೈಯಲ್ಲಿ ಮಂತ್ರಿಗಳೂ ಕಂಟ್ರೋಲ್ ಇಲ್ಲ ಅಧಿಕಾರಿಗಳ ಮೇಲೂ ಕಂಟ್ರೋಲ್ ಇಲ್ಲ. ಸಿಎಂ ಬರೀ ಆಶ್ವಾಸನೆ ಕೊಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪ ಮಾಡಿದ್ದಾರೆ.

ಕಂಟ್ರೋಲ್ ತಪ್ಪಿಗ ಸರ್ಕಾರ.. ಕೆಪಿಸಿಸಿ ಸಾರಥಿ ಡಿಕೆಶಿ ಕಿಡಿ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಕಳೆದ ವರ್ಷವೂ ಆಶ್ವಾಸನೆ ನೀಡಿದ್ದರು. ಅವರಿಗೆ ಚುನಾವಣೆಯೇ ಮುಖ್ಯ, ಜನರ ನೋವಿಗೆ ಸ್ಪಂದಿಸುತ್ತಾ ಇಲ್ಲ. ದೆಹಲಿಗೆ ಸರ್ವಪಕ್ಷ ಸಭೆ ಕರೆದುಕೊಂಡು ಹೋಗಲು ಹೇಳಿದ್ದೆವು. ಆದರೆ, ಸರ್ಕಾರ ಏನು‌ ಮಾಡ್ತಾ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು, ಸಿಎಂ ವೈಮಾನಿಕ ಸಮೀಕ್ಷೆ ಮಾಡದೆ, ಏರ್‌ಪೋರ್ಟ್‌ನಲ್ಲಿ ಮೀಟಿಂಗ್ ಮಾಡಿದ್ದಾರೆ. ಸಿಎಂ ಜನರ ನೋವಿಗೆ ಸ್ಪಂದಿಸುತ್ತಿಲ್ಲ, ಅವರಿಗೆ ಚುನಾವಣೆಯೇ ಮೊದಲ ಆದ್ಯತೆ ಎಂದರು.

ನಾನು ಕೂಡ ಸಿದ್ದರಾಮಯ್ಯ ಜೊತೆ ಇದ್ದೇನೆ:

ಕೆಂಪೇಗೌಡರ ಪುಸ್ತಕ ಓದಲಿ ಎಂದ ಮುನಿರತ್ನ ವಿಚಾರ ಪ್ರಸ್ತಾಪಿಸಿ, ಅವರು ಪುಸ್ತಕ ಬೇಗ ಕೊಡಲಿ. ನನಗೆ ರಾಜಕೀಯದಲ್ಲಿ ಈ ವಿದ್ಯೆನೂ ಇದೆ ಅಂತಾ ಗೊತ್ತಿರಲಿಲ್ಲ. ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಜೊತೆ ಇದ್ದಾರೆ, ನಾನು ಕೂಡ ಸಿದ್ದರಾಮಯ್ಯ ಜೊತೆಯಲ್ಲಿ ಇದ್ದೇನೆ. ಅವರೇ ನಮ್ಮ ನಾಯಕರು ಎಂದರು.

ಎಸ್​​ಟಿ ಸೋಮಶೇಖರ್ ಕಾಂಗ್ರೆಸ್ ಬಿಡಲು ಡಿ ಕೆ ಶಿವಕುಮಾರ್ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ವಿಜಯ ದಶಮಿ ದಿನ ನನ್ನ ಬಗ್ಗೆ ಮಾತನಾಡ್ತಾ ಇದಾರಲ್ಲ, ಅವರಿಗೆಲ್ಲ ಬೇಗ ಪ್ರಮೋಷನ್ ಸಿಗಲಿ. ನನ್ನ ಬಗ್ಗೆ ಮಾತನಾಡಿದರೆ ಅವರಿಗೆ ಪ್ರಚಾರ ಸಿಗುತ್ತೆ. ನನ್ನ ಬಗ್ಗೆ ಮಾತನಾಡಬೇಕು ಇಲ್ಲ ಸಿದ್ದರಾಮಯ್ಯ ಬಗ್ಗೆ ಮಾತನಾಡಬೇಕು. ಸೋಮಶೇಖರ್, ಅಶೋಕ್, ಸಿಟಿ ರವಿ ಎಲ್ಲಾ ಮಾತನಾಡುತ್ತಾ ಇದ್ದಾರೆ. ಏನೇನಿದೆಯೋ ಹುಡುಕಲಿ ಎಂದು ಮಾರ್ಮಿಕವಾಗಿ ನುಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.