ಬೆಂಗಳೂರು : ಕಾಂಗ್ರೆಸ್ ಸಂಸ್ಥಾಪನಾ ದಿನ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದೆವು. ಈಗ ಸ್ಥಳೀಯ ಮಟ್ಟದ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ನಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ನಗರ ವ್ಯಾಪ್ತಿಯ ಬ್ಲಾಕ್ ಅಧ್ಯಕ್ಷರು ಹಾಗೂ ಮುಖಂಡರ ಜೊತೆಗಿನ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದರು.
ಓದಿ: ಬ್ಲಾಕ್ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಾಳೆಯಿಂದ ಡಿಕೆಶಿ ರಾಜ್ಯ ಪ್ರವಾಸ
ಸಂಕಲ್ಪ ಸಮಾವೇಶದ ಉದ್ದೇಶ ಕೂಡ ಅದೇ ಆಗಿದ್ದು, ಹೋರಾಟ ರೂಪಿಸಲು ಸಮಾವೇಶ ಮಾಡುತ್ತಿದ್ದೇವೆ. ಬ್ಲಾಕ್ ಮಟ್ಟದ ಅಧ್ಯಕ್ಷರ ಸಭೆ ಕರೆದಿದ್ದೇವೆ. ನಾವೆಲ್ಲ ಕಾರ್ಯಕರ್ತರು, ಇಲ್ಲಿ ಯಾರು ನಾಯಕರಲ್ಲ. ಮೊನ್ನೆ ಮೈಸೂರು ವಿಭಾಗದ ಸಮಾವೇಶ ಮಾಡಿದ್ದೇವೆ, ಇವತ್ತು ಬೆಂಗಳೂರು ವಿಭಾಗದ ಸಭೆ ಮಾಡುತ್ತಿದ್ದೇವೆ. ಸ್ಥಳೀಯ ಮಟ್ಟದ ಸಮಸ್ಯೆಗಳ ಬಗ್ಗೆ ಗಮನ ಹರಿಸಿದ್ದೇವೆ ಎಂದರು.
ಕೊರೊನಾ ಸಂದರ್ಭದಲ್ಲಿ ಜನರು ಸಂಕಷ್ಟದಲ್ಲಿದ್ದು, ಈ ಸಂದರ್ಭದಲ್ಲಿ ತೆರಿಗೆ ಹೆಚ್ಚಳ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ ಇಪ್ಪತ್ತು ಸಾವಿರ ಕೋಟಿ ಹಣ ಎಲ್ಲಿ ಹೋಯಿತು. ಯಾವೊಬ್ಬ ಜನರಿಗೆ ಅದರ ಪ್ರಯೋಜನ ತಲುಪಲಿಲ್ಲ.
ಹೀಗಾಗಿ ಸಾಮಾನ್ಯ ಜನರ ಧ್ವನಿಯಾಗಲು ಸಮಾವೇಶ ಮಾಡುತ್ತಿದ್ದೇವೆ. ಇದು ಪಕ್ಷ ಸಂಘಟನೆ ಮಾತ್ರವಲ್ಲ, ಮಂಗಳೂರಿನಲ್ಲಿ ಮೈಸೂರು ಭಾಗದ ಸಮಾವೇಶ ನಡೆಸಿದ್ದೇವೆ. ಇಂದು ಬೆಂಗಳೂರು ವಿಭಾಗದ ಸಮಾವೇಶ ನಡೆಸುತ್ತಿದ್ದೇವೆ ಎಂದರು.
ವಾಯ್ಸ್ ಆಫ್ ದಿ ಬ್ಲಾಕ್ ಪ್ರೆಸಿಡೆಂಟ್ ಶುಡ್ ಬಿ ವಾಯ್ಸ್ ಆಫ್ ದಿ ಪ್ರೆಸಿಡೆಂಟ್. ಬೆಂಗಳೂರು ಹಾಗೂ ರಾಜ್ಯದಲ್ಲಿ ಕೊರೊನಾ ವೇಳೆ ರಾಜ್ಯ ಸರ್ಕಾರ ವಿಫಲ ಆಗಿದ್ದು, ಜನರ ಮೇಲೆ ಹೊರೆ ಹೊರಿಸಿ ಕಿರುಕುಳ ಕೊಡುತ್ತಿದೆ. ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದು ಬಿಟ್ಟರೆ, ಕೊರೊನಾ ಟೈಮ್‌ನಲ್ಲಿ ಈ ಸರ್ಕಾರ ಬೇರೆ ಏನನ್ನೂ ಮಾಡಿಲ್ಲ. ರೈತರು, ದರ್ಜಿ, ಕಮ್ಮಾರರು, ಸವಿತಾ ಸಮಾಜ ಯಾರಿಗೂ ಸರ್ಕಾರ ಸಹಾಯ ಮಾಡಲಿಲ್ಲ.
ನಮ್ಮವರ ವಿರುದ್ಧ ಪ್ರಕರಣ ದಾಖಲು : ಜ. 28ನೇ ತಾರೀಖಿನಂದು ಕಾಂಗ್ರೆಸ್ ಸಂಸ್ಥಾನ ದಿನ ಇದೆ. ಈ ವರ್ಷ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಎನ್ನುವ ಉದ್ದೇಶದಿಂದ ಸಂಕಲ್ಪ ಯಾತ್ರೆ ಮಾಡುತ್ತಿದ್ದೇವೆ. ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿ, ಹೊಸ ಪದ್ಧತಿ ಪ್ರಾರಂಭ ಮಾಡುತ್ತಿದ್ದೇವೆ. 11ನೇ ತಾರೀಖಿನಂದು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಇದೆ. ಸ್ಥಳೀಯ ವಿಚಾರಗಳನ್ನು ಮುಂದಿಡಬೇಕು.
ಮೊನ್ನೆ ರಾಮಲಿಂಗ ರೆಡ್ಡಿ ಅವರು ಪ್ರತಿಭಟನೆ ಮಾಡಿದ್ದರು, ಅದೇ ಮಾದರಿಯಲ್ಲಿ ಆಗಬೇಕು. ಜನಸಂಖ್ಯೆಗೆ ಅನುಗುಣವಾಗಿ ಅವರನ್ನು ಗುರುತಿಸಿ ಅವರ ಪರವಾಗಿ ಹೋರಾಟ ಮಾಡುತ್ತೇವೆ. ಸರ್ಕಾರಿ ಕಚೇರಿಗಳನ್ನು ಬಿಜೆಪಿ ಕಚೇರಿ ಮಾಡಿಕೊಂಡಿದ್ದಾರೆ. ಪೊಲೀಸ್ ಸ್ಟೇಷನ್‌ನಲ್ಲಿ ಬಿಜೆಪಿ ಸ್ಥಳೀಯ ನಾಯಕರು ಧಮ್ಮಿ ಹಾಕಿ ನಮ್ಮವರ ಮೇಲೆ ಕೇಸ್ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲವನ್ನೂ ರೆಕಾರ್ಡ್ ಮಾಡಿಸಿದ್ದೇನೆ. ಹೆಣ್ಣು ಮಕ್ಕಳನ್ನು, ಯುವಕರನ್ನು ಪಂಚಾಯತ್ ಮಟ್ಟದಲ್ಲಿ ಬಳಸಿಕೊಳ್ಳಬೇಕು. ಮಾಸ್ ಬೇಸ್ ಜೊತೆಗೆ ಕೇಡರ್ ಬೇಸ್ ಪಾರ್ಟಿ ಮಾಡಬೇಕು ಎಂದರು.
ಸಿದ್ದರಾಮಯ್ಯ ಅವರ ಅವಧಿಯಲ್ಲಿ ಅನೇಕ ಯೋಜನೆಗಳನ್ನು ಮಾಡಿದ್ದರು, ಅವುಗಳನ್ನು ನಿಲ್ಲಿಸಿದ್ದಾರೆ. ಅವುಗಳನ್ನು ಕೂಡಲೇ ಪ್ರಾರಂಭ ಮಾಡಬೇಕು. ನಾವು ಹಲವಾರು ಕಡೆ ಪ್ರವಾಸ ಮಾಡುತ್ತೇವೆ ಎಂದರು.