ETV Bharat / city

ಸಾಂಪ್ರದಾಯಿಕ ವೃತ್ತಿ ಅವಲಂಬಿತರನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ: ಡಿಕೆಶಿ - ಕರ್ನಾಟಕ ಲಾಕ್​ಡೌನ್​ ಸುದ್ದಿ

ದೇಶ ಕಟ್ಟಲು ನಿಸ್ವಾರ್ಥದಿಂದ ದುಡಿಯುತ್ತಿರುವ ಸಾಂಪ್ರದಾಯಿಕ ವೃತ್ತಿಪರರ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

dk-shivakumar-statement-on-traditional-career-dependent
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
author img

By

Published : May 26, 2020, 3:43 PM IST

ಬೆಂಗಳೂರು: ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವ ಅಸಂಘಟಿತ ಕಾರ್ಮಿಕರ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಈ ಸಂಬಂಧ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸವಿತಾ ಸಮಾಜದವರು, ದರ್ಜಿಗಳು, ಚಮ್ಮಾರರು, ಪೂಜಾರಿಗಳು, ಚಾಲಕರೂ ಸೇರಿದಂತೆ ವಿವಿಧ ವೃತ್ತಿಯಲ್ಲಿ ಕೆಲಸ ಮಾಡುವವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ತಾವು ತೆರಳಿ ಸಿಎಂ ಭೇಟಿ ಮಾಡಿ ತಲಾ 10 ಸಾವಿರ ರೂ. ಸಹಾಯಧನ ನೀಡಬೇಕೆಂದು ಮನವಿ ಮಾಡಿದ್ದೆವು.

ಅದಕ್ಕೆ ಸಿಎಂ ಸಮ್ಮತಿಸಿ ನಂತರ 5 ಸಾವಿರ ರೂ. ಘೋಷಣೆ ಮಾಡಿದ್ದಾರೆ. ಕೆಲವರನ್ನು ಮಾತ್ರ ಆಯ್ಕೆ ಮಾಡಿ 5 ಸಾವಿರ ರೂ. ನೀಡುವುದಾಗಿ ತಿಳಿಸಿದ್ದಾರೆ. ಆದರೆ ಅನೇಕ ನಿಯಮ, ನಿರ್ಬಂಧ ಹೇರಿದ್ದರಿಂದ ಯಾರೊಬ್ಬರಿಗೂ ಇದುವರೆಗೂ ಒಂದು ರೂಪಾಯಿ ಕೂಡ ತಲುಪಿಲ್ಲ. ಅಧಿಕಾರಿಗಳು ಸುಮ್ಮನೆ ಓಡಾಡಿಕೊಂಡಿದ್ದಾರೆ. ಹಣ ನೀಡಲು ಕಮೀಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ದೇಶ ಕಟ್ಟಲು, ಸಮಾಜ ಉಳಿಸಿಕೊಳ್ಳಲು ತಮ್ಮ ಬದುಕನ್ನು ಮುಡಿಪಾಗಿಟ್ಟು ವೃತ್ತಿ ಮುಂದುವರೆಸಿಕೊಂಡು ಸಾಗಿರುವ ಈ ಸಾಂಪ್ರದಾಯಿಕ ವೃತ್ತಿಪರರ ಪರ ನಾವು ನಿಲ್ಲುತ್ತೇವೆ. ಅವರಿಗೆ ದೊಡ್ಡ ಅನ್ಯಾಯವಾಗಿದೆ. ಅವರ ಪರ ನಾವು ನಿರಂತರ ಹೋರಾಡುತ್ತೇವೆ.

ಕ್ಯಾಬ್ ಚಾಲಕರಿಗೆ ಆನ್​ಲೈನ್​​ ಮೂಲಕ ಅರ್ಜಿ ತುಂಬಲು ಹೇಳುತ್ತಿದ್ದಾರೆ. ಬಡವರಿಗೆ ಹಣ ನೀಡಲು ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ ಎನ್ನುವುದು ಅರಿವಾಗುತ್ತಿಲ್ಲ. ದಯವಿಟ್ಟು ಮುಂದಿನ ದಿನಗಳಲ್ಲಿ ಇಂತದ್ದೊಂದು ಕಾರ್ಯ ಸರ್ಕಾರ ಮಾಡದಿರಲಿ ಎಂದು ಹೇಳಿದರು.

ಕಾನೂನಿನ ಎದುರು ಎಲ್ಲರೂ ಒಂದೇ

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಕ್ವಾರಂಟೈನ್ ವಿಚಾರವಾಗಿ ಮಾತನಾಡಿ, ಕಾನೂನು ಎಲ್ಲರಿಗೂ ಒಂದೇ. ಸದಾನಂದಗೌಡ, ಡಿಕೆಶಿ ಯಾರೇ ಇದ್ದರೂ ಕಾನೂನು ದುರ್ಬಳಕೆ ಮಾಡಲು ಸಾಧ್ಯವಿಲ್ಲ. ಕೇಂದ್ರ ಸಚಿವರಾಗಿ ಸದಾನಂದಗೌಡರಿಗೆ ಜವಾಬ್ದಾರಿ ಇದೆ. ಅವರು ಪಲಾಯನ ಮಾಡಲು ಸಾಧ್ಯವಿಲ್ಲ. ಅವರು ಜನ ಸೇವೆಯಲ್ಲೇ ಇದ್ದಾರೆ. ಆದಾಗ್ಯೂ ಕಾನೂನಿನ ಎದುರು ಎಲ್ಲರೂ ಒಂದೇ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.