ETV Bharat / city

ಬಿಜೆಪಿ ಸೇರದಿರೋದಕ್ಕೆ ನನ್ನನ್ನು ತಿಹಾರ ಜೈಲಿಗೆ ಹಾಕಿದ್ರು : ಡಿಕೆಶಿ ಹೊಸ ಬಾಂಬ್ - dk shivakumar reaction on Eshwarappa jail statement

ಬಿಜೆಪಿಯನ್ನು ಬೆಂಬಲಿಸಲಿಲ್ಲ ಹಾಗೂ ಅವರ ಪಕ್ಷವನ್ನು ಸೇರಲಿಲ್ಲ ಎಂಬ ಕೋಪಕ್ಕೆ ನನ್ನನ್ನು ಜೈಲಿಗೆ ಹಾಕಲಾಯಿತು. ಈ ಕುರಿತು ನನ್ನ ಬಳಿ ದಾಖಲೆಗಳಿವೆ ಎಂದು ಸಚಿವ ಈಶ್ವರಪ್ಪ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು..

dk shivakumar
ಡಿಕೆ ಶಿವಕುಮಾರ್
author img

By

Published : Dec 6, 2021, 2:26 PM IST

Updated : Dec 6, 2021, 3:18 PM IST

ಬೆಳಗಾವಿ : ಬಿಜೆಪಿ ಸೇರದಿರೋದಕ್ಕೆ ನನ್ನನ್ನು ತಿಹಾರ ಜೈಲಿಗೆ ಹಾಕಲಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಹೊಸ ಬಾಂಬ್ ಸಿಡಿಸಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏನು ತಪ್ಪು ಮಾಡಿ ತಿಹಾರ್ ಜೈಲಿಗೆ ಹೋಗಿದ್ರಿ ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ. ನೀವು ಕಳಿಸಿದಕ್ಕೆ ನಾನು ತಿಹಾರ ಜೈಲಿಗೆ ಹೋದೆ. ನಿಮ್ಮನ್ನು ಬೆಂಬಲಿಸಲಿಲ್ಲ ಎಂಬ ಕಾರಣಕ್ಕೆ, ಬಿಜೆಪಿ ಸೇರಲಿಲ್ಲ ಎನ್ನುವ ಕೋಪಕ್ಕೆ ನನ್ನನ್ನು ಜೈಲಿಗೆ ಹಾಕಿದರು. ಈ ಬಗ್ಗೆ ಎಲ್ಲವೂ ರೆಕಾರ್ಡ್ ಇದೆ ಎಂದು ಡಿಕೆಶಿ ತಿರುಗೇಟು ನೀಡಿದರು.

ಸಚಿವ ಈಶ್ವರಪ್ಪ ತಿಹಾರ ಜೈಲ್​ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿರುವುದು..

ಬಿಎಸ್‌ವೈಗೆ ಡಿಕೆಶಿ ತಿರುಗೇಟು : ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇವೆ ಎಂಬ ಬಿಎಸ್‌ವೈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪಾಪ ಅವರಿಗಾದ ನೋವನ್ನು ಯಡಿಯೂರಪ್ಪನವರಿಗೆ ಬಿಜೆಪಿಯವರ ಮೇಲೆ ಹಾಕಲು ಆಗುತ್ತಿಲ್ಲ. ಆ ದುಃಖ, ದುಮ್ಮಾನ, ರೇಡ್, ಮಾನಸಿಕ ಹಿಂಸೆ, ರಾಜೀನಾಮೆ ಇವೆಲ್ಲವನ್ನೂ ಹೇಳಲು ಸಾಧ್ಯವಾಗುತ್ತಿಲ್ಲ.

ಅವರ ಕೋಪ-ತಾಪ ಹೊರಗೆ ಹಾಕಬೇಕಲ್ಲ. ನಾವು ಫ್ರೀ ಇದ್ದೇವೆ. ಹೀಗಾಗಿ, ನಮ್ಮ ಮೇಲೆ ಹಾಕುತ್ತಿದ್ದಾರೆ. ನಮ್ಮನ್ನ ಪರ್ಮನೆಂಟ್ ಆಗಿ ವಿಪಕ್ಷದಲ್ಲಿ ಕೂರಿಸ್ತಿವಿ ಅಂತಿದ್ದಾರೆ. ಬಿಜೆಪಿಯಲ್ಲಿ ಏನಾಗ್ತಿದೆ ಎಂಬುದು ಅವರ ಸಚಿವರು, ಶಾಸಕರಿಗೆ ಗೊತ್ತಿದೆ.

ನಾನ್ಯಾಕೆ ಮಾತನಾಡಲಿ? ಸರ್ಕಾರದ ಸ್ಟೆಬಿಲಿಟಿ ನಾವು ಹಾಳು ಮಾಡ್ತಿಲ್ಲ, ಅವರ ಪಕ್ಷದವರಿಂದ ಈ ಕೆಲಸ ನಡೆಯುತ್ತಿದೆ. ರಾಷ್ಟ್ರೀಯ ಪಕ್ಷದವರಿಗೆನೇ ಈ ರಾಜ್ಯ ನಿಯಂತ್ರಿಸಲು ಆಗುತ್ತಿಲ್ಲ. ಅವರ ಕೈಯಲ್ಲಿ ಇನ್ನೇನು ಆಗುತ್ತದೆ‌ ಎಂದು ಟೀಕಿಸಿದರು.

ನಮ್ಮ ಅಭ್ಯರ್ಥಿ ಹೆಬ್ಬಾಳ್ಕರ್ ಅಲ್ಲ : ಬೆಳಗಾವಿಯಲ್ಲಿ ಜಾರಕಿಹೊಳಿ ವರ್ಸಸ್ ಹೆಬ್ಬಾಳ್ಕರ್ ಮಧ್ಯೆ ಚುನಾವಣೆ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ನಮ್ಮ ಅಭ್ಯರ್ಥಿ ಹೆಬ್ಬಾಳ್ಕರ್ ಅಲ್ಲ, ಚನ್ನರಾಜ್ ಕಾಂಗ್ರೆಸ್ ಕ್ಯಾಂಡಿಡೇಟ್. ಎಲ್ಲ ಕಡೆ ಎಲ್ಲ ಪಕ್ಷಗಳಲ್ಲಿ ಕುಟುಂಬ ಸದಸ್ಯರಿಗೆ ಟಿಕೆಟ್ ಕೊಟ್ಟಿದ್ದಾರೆ. ಹೆಬ್ಬಾಳ್ಕರ್ ಸುದ್ದಿನೇ ಇಲ್ಲ ಇಲ್ಲಿ, ನಮಗೆ ಚನ್ನರಾಜ್ ಕಾಂಗ್ರೆಸ್ ಅಭ್ಯರ್ಥಿ. ಯುವಕರಿಗೆ ಅವಕಾಶ ಕೊಡಬೇಕು ಅಂತಾ ಇಡೀ ಜಿಲ್ಲೆ ನಾಯಕರು ಸೇರಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ ಎಂದರು.

ಇಂತಹದ್ದೆಲ್ಲ ಎಷ್ಟು ನೋಡಿಲ್ಲ ಬಿಡಪ್ಪ : ಡಿ.14ರಂದು ಡಿಕೆಶಿ ವಿರುದ್ಧ ಓಪನ್ ವಾರ್ ಆಗಲಿ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂತಹದ್ದೆಲ್ಲ ನಾವು ಎಷ್ಟೋ ನೋಡಿದ್ದೇವೆ ಬಿಡಪ್ಪ ಎಂದು ವ್ಯಂಗ್ಯವಾಡಿದರು.

ಎಲ್ಲಿಯೂ ಭಿನ್ನಾಭಿಪ್ರಾಯವಿಲ್ಲ : ವಿಧಾನ ಪರಿಷತ್ ಚುನಾವಣೆಗೆ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇನೆ, ಎಲ್ಲಿಯೂ ಭಿನ್ನಾಭಿಪ್ರಾಯ ಇಲ್ಲ. ಒಂದು ಕಡೆ ಭಿನ್ನಾಭಿಪ್ರಾಯ ಇತ್ತು. ಉಳಿದ ಎಲ್ಲ ಕಡೆ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಸೂಚಿಸಿದ್ದಾರೆ. ಎಲ್ಲೆಡೆ ಒಗ್ಗಟ್ಟಾಗಿ ಕೆಲಸ ಮಾಡ್ತಿದ್ದಾರೆ. ಇದೇ ನಮ್ಮ ಪಕ್ಷದ ಗೆಲುವಿಗೆ ಸಹಕಾರವಾಗಲಿದೆ.

ಆದರೆ, ಬಿಜೆಪಿಯಲ್ಲಿ ಹಾಗಿಲ್ಲ. ಸಿಂಗಲ್ ಕ್ಯಾಂಡಿಡೇಟ್ ಹಾಕಿ ಇಲ್ಲೇನ್ ನಡೀತಿದೆ ನಿಮಗೆ ಗೊತ್ತು. ಒಂದೇ ಸ್ಟೇಜ್, ಒಂದೇ ಜನ, ಎರಡು ಭಾಷಣ ಆಗುತ್ತಿದೆ. ಬಿಜೆಪಿ ಇಷ್ಟು ವೀಕ್ ಆಗಿದೆ ಅಂತಾ ನಾನು ತಿಳಿದುಕೊಂಡಿರಲಿಲ್ಲ. ಸಿಎಂ ಸಹ ಅಸಹಾಯಕರಾಗಿದ್ದಾರೆ. ಬೆಳಗಾವಿಯಲ್ಲಿ ನಮಗೆ ಯಾರೂ ಎದುರಾಳಿ ಅಲ್ಲ. ನಮ್ಮ ವೋಟ್ ನಾವು ಹಾಕಿಸಿಕೊಂಡರೆ ಸಾಕು.

ಒಳ್ಳೆಯ ಹಾಗೂ ಒಮ್ಮತದ ಅಭ್ಯರ್ಥಿಯನ್ನು ನಾವು ಹಾಕಿದ್ದೇವೆ. ನಮಗೆ ಯಾರೂ ಎದುರಾಳಿ ಇಲ್ಲ. ಎರಡೆರಡು ಅಭ್ಯರ್ಥಿಗಳನ್ನು ಹಾಕಿದರೆ ನಮ್ಮ ವೋಟ್ ಹೋಗತ್ತೆ ಅಂತಾ ಹೆದರಬೇಕಾಗಿತ್ತು. ನಮ್ಮಲ್ಲಿ ರೆಬಲ್ ಯಾರೂ ಇಲ್ಲ, ಪಕ್ಷಕ್ಕೆ ಮೋಸ ಮಾಡುವವರಿಲ್ಲ ಎಂದು ರಮೇಶ್ ಜಾರಕಿಹೊಳಿ‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಸಾಮೂಹಿಕ ಆತ್ಮಹತ್ಯೆಗೆ ಅರ್ಜಿ : ಬಿಜೆಪಿ ಸರ್ಕಾರ ಬಂದ ನಂತರ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡಿಸಿಲ್ಲ‌. ನಮ್ಮ ಒತ್ತಾಯಕ್ಕೆ ಮಣಿದು ಈ ಸಲ ಬೆಳಗಾವಿಯಲ್ಲಿ ಅಧಿವೇಶನ ಮಾಡುತ್ತಿದ್ದಾರೆ. ನಡುವೆ ಅಧಿವೇಶನ ಮುಂದೆ ಹಾಕುವ ಪ್ರಯತ್ನ ಮಾಡುತ್ತಿದ್ದರು. ಬದಲಾವಣೆ ಮಾಡಿದ್ರೆ ಸಾಮೂಹಿಕವಾಗಿ ಪ್ರತಿಭಟನೆ ಮಾಡುವುದಾಗಿ ಸ್ಪೀಕರ್‌ ಎದುರು ಹೇಳಿದ್ದೇವೆ. ನಿನ್ನೆ ರಾಯಬಾಗದಲ್ಲಿ 40 ನೆರೆ ಸಂತ್ರಸ್ತ ಹೆಣ್ಣುಮಕ್ಕಳು ಸಾಮೂಹಿಕ ಆತ್ಮಹತ್ಯೆಗೆ ಅವಕಾಶ ಮಾಡಿಕೊಡಿ ಎಂದು ಅರ್ಜಿ ಕೊಟ್ಟಿದ್ದಾರೆ. ಅಧಿವೇಶನದಲ್ಲಿ ಖಂಡಿತವಾಗಿ ಈ ಕುರಿತು ಹೋರಾಟ ಮಾಡುತ್ತೇವೆ ಎಂದರು.

ಮಹದಾಯಿ ವಿಚಾರ : ಜನರ ಧ್ವನಿ ಎತ್ತಲಿಲ್ಲ ಅಂದ್ರೆ ಹೇಗೆ? ಸರ್ಕಾರದ ವೈಫಲ್ಯ ಬಗ್ಗೆಯೂ ಧ್ವನಿ ಎತ್ತುತ್ತೇವೆ. ರಾಜ್ಯ-ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಮಹದಾಯಿ ವಿಚಾರವಾಗಿ ತಗಾದೆ ಏಕೆ? ಜಡ್ಡ್‌ಮೆಂಟ್ ಬಂದಿದೆ. ಆ ಕೆಲಸ ಮಾಡೋಕೆ ಏನು ಸಮಸ್ಯೆ? ಮಹದಾಯಿ ತೀರ್ಪು ಬಂದ ಮೇಲೆ ಕೆಲಸ ಆರಂಭಿಸದಿದ್ರೆ ಹೇಗೆ? ಗೋವಾದ ಏನು ಪಾಲಿಟಿಕ್ಸ್? ಇಲ್ಲಿ 28 ಸಂಸದರು ಬೇಕಾ, ಗೋವಾದ ಒಬ್ಬ ಎಂಪಿ ಬೇಕಾ?. ಬಸವರಾಜ ಬೊಮ್ಮಾಯಿ ಜಲಸಂಪನ್ಮೂಲ ಸಚಿವರಾಗಿದ್ದವರು, ಅವರಿಗೆ ಅನುಭವ ಇದೆ. ಆದರೆ, ಅವರದ್ದೇ ಕ್ಯಾಬಿನೆಟ್ ಮಿನಿಸ್ಟರ್ ಸಿಎಂ ಚೇಂಜ್ ಆಗ್ತಿದಾರೆ, ನಿರಾಣಿ ಸಿಎಂ ಆಗಲಿದ್ದಾರೆ ಎಂದಿದ್ದಾರೆ.

ಇನ್ಯಾಕೆ ಆ ಮಂತ್ರಿನ ಅಲ್ಲೇ ಇಟ್ಟುಕೊಂಡು ಕುಳಿತಿದ್ದಾರೆ. ಅದೇ ಸ್ಟೇಜ್ ಮೇಲೆ ಬೊಮ್ಮಾಯಿ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ ಅಂತಾ ಹೇಳಬೇಕಿತ್ತು. ಸರ್ಕಾರದ ಸ್ಟೆಬಿಲಿಟಿ ಎಲ್ಲಿದೆ. ಗುತ್ತಿಗೆದಾರರೇ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ. ನಮಗೆ ಟೆನ್ ಪರ್ಸೆಂಟ್ ಅಂದಿದ್ರು, ಅದನ್ನ ಪ್ರಧಾನಿ ತನಿಖೆ ಮಾಡಿಸಬಹುದಿತ್ತಲ್ಲ. ಇಡೀ ದೇಶದಲ್ಲಿಯೇ ಅತಿ ಹೆಚ್ಚು ಭ್ರಷ್ಟಾಚಾರ ಈ ರಾಜ್ಯದಲ್ಲಿ ಇದೆ ಎಂದರು.

Last Updated : Dec 6, 2021, 3:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.