ETV Bharat / city

ಪುನೀತ್ 'ಹೃದಯದ ಸ್ಟಾರ್'.. ಕಣ್ಣೀರಿಡುತ್ತಾ ಪುನೀತ್​ ಸರಳತೆ, ಸಮಾಜ ಸೇವೆ ನೆನೆದ ಡಿಕೆಶಿ

author img

By

Published : Oct 31, 2021, 2:08 PM IST

ಪುನೀತ್​ ಕೇವಲ ಪವರ್​ ಸ್ಟಾರ್​ ಅಲ್ಲ. ಕರ್ನಾಟಕ ರಾಜ್ಯದ ಜನರ ಹೃದಯವನ್ನ ಗೆದ್ದಿದ್ದಾರೆ. 'ಹೃದಯದ ಸ್ಟಾರ್' ಅಂದ್ರೂ ತಪ್ಪಿಲ್ಲ. ಸಮಾಜದ ಸೇವೆಯಲ್ಲಿ ಅವರ ಕೊಡುಗೆ ದೊಡ್ಡದು ಎಂದು ಅಪ್ಪುವನ್ನ ನೆನೆದು ಡಿಕೆಶಿ ಭಾವುಕರಾಗಿದ್ದಾರೆ.

ಡಿಕೆಶಿ
ಡಿಕೆಶಿ

ಬೆಂಗಳೂರು: ಕನ್ನಡ ಚಿತ್ರರಂಗದ ದೊಡ್ಮನೆ ದೀಪವಾಗಿದ್ದ, ಪವರ್‌ಸ್ಟಾರ್ ಪುನೀತ್ ರಾಜ್​ಕುಮಾರ್​ರ ಅಂತ್ಯಕ್ರಿಯೆ ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಸಕಲ ವಿಧಿವಿಧಾನಗಳೊಂದಿಗೆ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಕುಟುಂಬದ ಸದಸ್ಯರು ಹಾಗೂ ಕೆಲವು ಗಣ್ಯರು ಮಾತ್ರ ಭಾಗವಹಿಸಿದ್ದರು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪುನೀತ್ ರಾಜ್‍ಕುಮಾರ್ ಅವರ ಸರಳತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನ ಬೇರೆ ಕಲಾವಿದರು ನೋಡಿ ಕಲಿಯಬೇಕು ಅಂತಾ ಹೇಳಿದ್ದಾರೆ.

ಕಳೆದ ಮೂರು ದಿನಗಳಿಂದ ಜನ ಸಾಗರ‌ವನ್ನ ನಾವು ನೋಡಿದ್ದೇವೆ. ಜನ ಉಚಿತ ಮರಣ ಖಚಿತ. ಮನುಷ್ಯನ ಹುಟ್ಟು ಆಕಸ್ಮಿಕ, ಆದರೆ ಸಾವು ಅನಿವಾರ್ಯ ಅಂತಾ ನಾನು ಯಾವಾಗಲೂ ಹೇಳ್ತಾ ಇದ್ದೆ. ಹುಟ್ಟು ಸಾವಿನ ಮಧ್ಯೆ ನಾವು ಏನ್​ ಮಾಡಿದ್ದೇವೆ ಅನ್ನೋದು ಮುಖ್ಯ. ಇದರಿಂದಲೇ ಪುನೀತ್ ಅವರು ಪವರ್ ಸ್ಟಾರ್ ಆಗಿದ್ದಾರೆ. ಅವರು ಅಜಾತ ಶತ್ರು ಎಂದು ಕಣ್ಣೀರಿಡುತ್ತಲೇ ಡಿಕೆಶಿ ಮಾತನಾಡಿದರು.

ಪುನೀತ್​ ಸರಳತೆ, ಸಮಾಜ ಸೇವೆ ನೆನೆದ ಡಿಕೆಶಿ

'ಹೃದಯದ ಸ್ಟಾರ್'

ಪುನೀತ್​ ಕೇವಲ ಪವರ್​ ಸ್ಟಾರ್​ ಅಲ್ಲ. ಕರ್ನಾಟಕ ರಾಜ್ಯದ ಜನರ ಹೃದಯವನ್ನ ಗೆದ್ದಿದ್ದಾರೆ. 'ಹೃದಯದ ಸ್ಟಾರ್' ಅಂದ್ರೂ ತಪ್ಪಿಲ್ಲ. ಅನೇಕ ರಾಜ್ಯದ ಮೂಲೆ ಮೂಲೆಗಳಿಂದ ಜನರು ಬಂದು, ಅವರನ್ನು ನೋಡಿ ಕಣ್ಣು ತುಂಬಿಕೊಂಡಿದ್ದಾರೆ. ನಾನು ಪುನೀತ್ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಅವರೊಬ್ಬ ಕಲಾವಿದ ಮಾತ್ರವಲ್ಲ. ಸಮಾಜದ ಸೇವೆಯಲ್ಲಿ ಅವರ ಕೊಡುಗೆ ದೊಡ್ಡದು. ಸರ್ಕಾರ ಯಾವುದೇ ಕೆಲಸಕ್ಕೆ ಕರೆದರೂ ಅವರು ನಿರಾಕರಿಸುತ್ತಿರಲಿಲ್ಲ. ಸರ್ಕಾರದ ಕೆಲಸಕ್ಕೆ ಹಣ ಪಡೆಯುತ್ತಿರಲಿಲ್ಲ. ನಾನು ಲೈಟ್ ಮತ್ತು ಹಾಲಿನ ಜಾಹೀರಾತಿಗಾಗಿ ಅವರನ್ನು ಕರೆದಿದ್ದೆ‌. ಒಂದು ರೂಪಾಯಿ ಹಣ ಪಡೆಯದೇ ಪುನೀತ್ ಬಂದು ಜಾಹೀರಾತಿನಲ್ಲಿ ನಟಿಸಿದರು. ಬೇರೆಯವರು ಆಗಿದ್ದರೆ ದುಡ್ಡು ಕಾಸು ಅಂತಾ ನೊಡ್ತಾ ಇದ್ದರು ಎಂದರು.

ರಾಜಕೀಯಕ್ಕೆ ತರಲು ನೋಡಿದ್ವಿ

ಪುನೀತ್ ಅವರನ್ನ ರಾಜಕಾರಣಕ್ಕೆ ಕರೆಯೋದಿಕ್ಕೆ ನೋಡಿದ್ವಿ, ಆದ್ರೆ ಆಗಲಿಲ್ಲ. ಅವರ ಅತ್ತಿಗೆ ಎಲೆಕ್ಷನ್​​ಗೆ ನಿಂತಾಗ ಅವರ ಮೇಲೆ ಒತ್ತಡವಿತ್ತು. ಆದರೂ ತಾನು ಅಪ್ಪನ ಹಾದಿಯಲ್ಲಿ ಸಾಗುತ್ತೇನೆ ಎಂದಿದ್ದರು. ನನಗೆ ನಂಬಲು ಆಗಿಲ್ಲ. ಅಪ್ಪು ನಿಧನದ ಸುದ್ದಿಯನ್ನು ವಿನಯ ಕಾಲ್ ಮಾಡಿ ಹೇಳಿದ್ದರು. ಈಗಲೂ ನಂಬಲು ಆಗುತ್ತಿಲ್ಲ. ಪುನೀತ್ ನಡೆಸಿದ ಸಂಸ್ಥೆಗಳನ್ನು ಅವರ ಪತ್ನಿ ಮುನ್ನಡೆಸಬಹುದು. ನಾನು ಅಸೆಂಬ್ಲಿಯಲ್ಲಿ ಮಾತನಾಡುತ್ತೇನೆ. ನಮ್ಮ ಕೆಲ ಸಲಹೆಗಳನ್ನು ಕೊಡುತ್ತೇವೆ ಎಂದು ಹೇಳಿದರು.

ಕಣ್ಣೀರಿಟ್ಟ ಡಿಕೆಶಿ

ಪ್ರತಿ ದಿನ‌ ತಂದೆ, ತಾಯಿ ಸಮಾಧಿಗೆ ಬಂದು ನಮಸ್ಕಾರ ಮಾಡ್ತಾ ಇದ್ದರು. ದೂರದ ಊರುಗಳಿಂದ ಅಭಿಮಾನಿಗಳು ಬಂದರೆ ಕಾರಿನಿಂದ ಇಳಿದು ನಮಸ್ಕಾರ ಮಾಡಿ ಹೋಗ್ತಾ ಇದ್ದರು. ನಮ್ಮ ಮನೆಯ ಮಕ್ಕಳು ಹೊರಗಡೆ ಇದ್ರೆ, ಕಾರು ನಿಲ್ಲಿಸಿ ಮಾತನಾಡಿಸಿ ಹೋಗ್ತಾ ಇದ್ದರು. ಆರೀತಿಯ ಸಜ್ಜನಿಕೆ, ಸರಳತೆಯನ್ನು ಯಾವ ಕಲಾವಿದನಲ್ಲಿ ನೋಡಲಿಲ್ಲ. ಬೇರೆ ಕಲಾವಿದರು ಪುನೀತ್​ರನ್ನ ನೋಡಿ ಕಲಿಯಬೇಕು ಎಂದು ಡಿಕೆಶಿ ಹೇಳಿದರು.

ಸರ್ಕಾರಕ್ಕೆ ಅಭಿನಂದನೆ

ರಾಜ್ಯದ ಜನ ಬಂದು ಗೌರವ ಸಲ್ಲಿಸಿದ್ದಾರೆ‌. ಗೌರವ ಪೂರ್ವಕವಾಗಿ ಕಳಿಸಿಕೊಟ್ಟಿದ್ದಾರೆ‌. ಶಾಂತಿ ಕಾಪಾಡೋದು ಬಹಳ ಮುಖ್ಯವಾಗಿತ್ತು. ನಾನು ಪ್ರತಿ ಪಕ್ಷದವನು ಆದರೂ ಕೂಡ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯ ಸರ್ಕಾರದವರು ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ‌. ಯಾವುದೇ ತೊಂದರೆ ಇಲ್ಲದೆ ಅಂತ್ಯಕ್ರಿಯೆ ನಡೆಸಿಕೊಟ್ಟಿದ್ದಾರೆ ಎಂದು ಸರ್ಕಾರಕ್ಕೆ ಡಿಕೆಶಿ ಅಭಿನಂದನೆ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.