ETV Bharat / city

ಪಾದಯಾತ್ರೆಯ ದಿನದ ಕೊನೆಯಲ್ಲಿ ಒಟ್ಟಾಗಿ ಹೆಜ್ಜೆ ಹಾಕಿದ ಸಿದ್ದರಾಮಯ್ಯ, ಡಿಕೆಶಿ

ಬೆಂಗಳೂರು ನಗರದಲ್ಲಿ ಐದು ದಿನದ ಪಾದಯಾತ್ರೆ ಮಾಡಲು ಚಿಂತಿಸಲಾಗಿತ್ತು. ಆದರೆ ಬಜೆಟ್​ ಅಧಿವೇಶನದ ಕಾರಣ ನಾಳೆಗೆ ಪಾದಯಾತ್ರೆ ಅಂತಿಮಗೊಳ್ಳಲಿದೆ.

author img

By

Published : Mar 2, 2022, 10:55 PM IST

d.k shivakumar and siddaramayai today mekedhatu padayatre
ಪಾದಯಾತ್ರೆಯ ದಿನದ ಕೊನೆಯಲ್ಲಿ ಒಟ್ಟಾಗಿ ಹೆಜ್ಜೆ ಹಾಕಿದ ಸಿದ್ದರಾಮಯ್ಯ, ಡಿಕೆಶಿ

ಬೆಂಗಳೂರು: ನಗರದಲ್ಲಿ ಪಾದಯಾತ್ರೆ ಆರಂಭವಾದ ಎರಡು ದಿನದಲ್ಲಿ ಉಭಯ ನಾಯಕರು ನಡೆದಿದ್ದೇ ಅಪರೂಪ. ನಿನ್ನೆ ಬೆಳಿಗ್ಗೆ ಒಂದಿಷ್ಟು ದೂರ ಒಟ್ಟಾಗಿ ಸಂಚರಿಸಿದ ನಾಯಕರು ನಂತರ ತಮ್ಮ ತಮ್ಮ ಬೆಂಬಲಿಗರ ಜೊತೆ ಪ್ರತ್ಯೇಕವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಊಟಕ್ಕೆಂದು ತಮ್ಮ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ ಮಧ್ಯಾಹ್ನದ ಪಾದಯಾತ್ರೆಯಲ್ಲಿ ಭಾಗಿಯಾಗಿರಲಿಲ್ಲ.

ಇಂದು ಬೆಳಗ್ಗಿನಿಂದಲೂ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಒಟ್ಟಾಗಿ ನಡೆಯಲಿಲ್ಲ. ಬೆಳಿಗ್ಗೆ ಸಿದ್ದರಾಮಯ್ಯ ಮುಂಚೆ ಪಾದಯಾತ್ರೆ ಆರಂಭಿಸಿದರು. ಇವರು ತೆರಳಿದ ಬಳಿಕ ಡಿ.ಕೆ.ಶಿವಕುಮಾರ್ ಆಗಮಿಸಿದರು. ಎನ್.ಎ.ಹ್ಯಾರಿಸ್ ಪ್ರತಿನಿಧಿಸುವ ಶಾಂತಿನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬಂದ ಬಳಿಕ ಹರೀಶ್ ಹಾಗೂ ಅವರ ಪುತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಕೇವಲ ಡಿಕೆಶಿ ವೈಭವಕ್ಕೆ ಪಾದಯಾತ್ರೆ ಮಾಡಿದರು.

ಮಧ್ಯಾಹ್ನ ಭೋಜನ ವಿರಾಮದ ಬಳಿಕ ಶಿವಕುಮಾರ್ ಹೊರಡುವುದಕ್ಕೂ 15 ನಿಮಿಷ ಮುನ್ನವೇ ಸಿದ್ದರಾಮಯ್ಯ ಪಾದಯಾತ್ರೆ ಆರಂಭಿಸಿದರು. ಇಬ್ಬರು ನಾಯಕರು ಪ್ರತ್ಯೇಕವಾಗಿಯೇ ಹಲಸೂರು ಸಮೀಪ ಇರುವ ತಿರುವಳ್ಳುವರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬೆಳಿಗ್ಗೆಯಿಂದ ನಾನೊಂದು ತೀರ ನೀನೊಂದು ತೀರ ಅಂತಿದ್ದ ನಾಯಕರು ಸಂಜೆ ಅರಮನೆ ಮೈದಾನ ತಲುಪುವ ಸಮಯಕ್ಕೆ ಒಟ್ಟಾಗಿ ಹೆಜ್ಜೆ ಹಾಕಿದರು.

ಮೊಳಗಿದ ತಮಿಳು ಹಾಡು: ಮೇಕೆದಾಟು ಪಾದಯಾತ್ರೆಯಲ್ಲಿ ಮೊಳಗಿದ ತಮಿಳು ಗೀತೆ ಎಲ್ಲರ ಹುಬ್ಬೇರುವಂತೆ ಮಾಡಿತು. ತಮಿಳು ಭಾಷಿಗರು ಹೆಚ್ಚಿರುವ ಶಾಂತಿನಗರ ವಿಧಾನಸಭೆ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿದ ಸಂದರ್ಭ ಅದರಲ್ಲೂ ಟ್ರಿನಿಟಿ ವೃತ್ತ ತಲುಪಿದಾಗ ಆರ್ಕೆಸ್ಟ್ರಾ ಗಾಯಕರು ಹಾಡೊಂದನ್ನು ಹಾಡಿದರು.

ಸಂಪತ್​ ರಾಜ್​ ಮತ್ತು ನಲಪಾಡ್​ ವಾಕ್​ ಸಮರ: ಡಿ.ಕೆ.ಶಿವಕುಮಾರ್​ಗೆ ಹಾರ ಹಾಕುವ ವಿಚಾರದಲ್ಲಿ ಡಿ.ಕೆ.ಶಿ ಶಿಷ್ಯರಾದ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹಾಗೂ ಮಾಜಿ ಮೇಯರ್ ಸಂಪತ್‌ರಾಜ್ ನಡುವೆ ಒಂದು ಸಣ್ಣ ಪ್ರಮಾಣದ ವಾಕ್ಸಮರ ನಡೆಯಿತು. ಕ್ರೇನ್​ ಚಾಲಕನಿಗೆ ಆದೇಶ ನೀಡುವಾಗ ಇಬ್ಬರ ನಡುವೆ ಘರ್ಷಣೆಯಾಯಿತು. ನಾನು ಹೇಳ್ತೀನಿ ನೀನು ಸುಮ್ನೆ ಇರ್ಬೇಕು ಎಂದು ಏರುಧ್ವನಿಯಲ್ಲಿ ಮೊಹಮ್ಮದ್ ನಲಪಾಡ್ ಕೂಗಿದಾಗ, ಮುಂದೇನು ಮಾತನಾಡದೆ ಸಂಪತ್ ರಾಜ್ ಮೌನಕ್ಕೆ ಶರಣಾದರು.

ಎಳನೀರು ಅವಮಾನ: ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾದ ಕಾರ್ಯಕರ್ತರಿಗೆ ಮಾಜಿ ಮೇಯರ್ ಸಂಪತ್ ರಾಜ್ ಬೆಂಬಲಿಗರು ಎಳನೀರನ್ನು ನೀಡದೆ ಅವಮಾನಿಸಿದರು. ಶಾಸಕರಿಗೆ ಮಾತ್ರ ನೀಡಲು ಸಂಪತ್ ರಾಜ್ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿ ಕಾರ್ಯಕರ್ತರಿಗೆ ಅವಮಾನ ಮಾಡಲಾಯಿತು.

ನಾಳೆ ಕಡೆಯ ದಿನದ ಪಾದಯಾತ್ರೆಯಾಗಿದ್ದು, ಸಂಜೆ ನ್ಯಾಷನಲ್​ ಕಾಲೇಜು ಆವರಣದಲ್ಲಿ ಬೃಹತ್​ ಸಭೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: 'ಭಾರತೀಯ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕೇಂದ್ರದ ಅನಿಶ್ಚಿತ, ಬೇಜವಾಬ್ದಾರಿ ನಿಲುವು ಕಾರಣ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.