ಬೆಂಗಳೂರು: ಕೆ.ಆರ್. ಪುರ ವಾರ್ಡ್ನಲ್ಲಿ ಮೂರು ಸಾವಿರ ಬಡವರಿಗೆ ಬಿಬಿಎಂಪಿ ನಾಮ ನಿರ್ದೇಶಿತ ಮಾಜಿ ಸದಸ್ಯ ಪಿ.ಜೆ. ಆಂತೋಣಿಸ್ವಾಮಿ ಅವರು ರೇಷನ್ ಕಿಟ್ ಹಾಗೂ ತರಕಾರಿ ಕಿಟ್ಗಳನ್ನ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಆಂತೋಣಿಸ್ವಾಮಿ ಲಾಕ್ಡೌನ್ ಸಂದರ್ಭದಲ್ಲಿ ಯುವಕರ ತಂಡವನ್ನ ರಚನೆ ಮಾಡಿಕೊಂಡು ಪ್ರತಿನಿತ್ಯ ಬಡವರಿಗೆ, ನಿರ್ಗತಿಕರಿಗೆ, ವಲಸೆ ಕಾರ್ಮಿಕರಿಗೆ ಊಟ ತಲುಪಿಸುವ ಕೆಲಸ ಮಾಡಿತ್ತಿದ್ದಾರೆ. ಇದೀಗ ಲಾಕ್ಡೌನ್ ಸಡಿಲಿಕೆ ಆಗಿದ್ದರೂ ಸಹ ಜನ-ಜೀವನ ಸಹಜ ಸ್ಥಿತಿಗೆ ತಲುಪಲು ಸಮಯ ಹಿಡಿಯುವುದರಿಂದ ಅಲ್ಲಿಯವರೆಗೂ ಬಡವರು ಹಸಿವಿನಿಂದ ಇರಬಾರದೆಂದು ಸಚಿವ ಬೈರತಿ ಬಸವರಾಜ್ ಅವರು ಸೂಚಿಸಿದ್ದಾರೆ. ಅವರ ಸೂಚನೆ ಮೇರೆಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಗುತ್ತಿದೆ.
ರೇಷನ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಬೈರತಿ ಬಸವರಾಜ್, ಆಂತೋಣಿಸ್ವಾಮಿ ಹಾಗೂ ಅವರ ತಂಡ ಲಾಕ್ಡೌನ್ ಸಂದರ್ಭದಲ್ಲಿ ಬಡವರ ಪರವಾಗಿ ನಿಂತು ಅವರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಪರವಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಕ್ಷೇತ್ರದಲ್ಲಿನ ಬಡವರು ಹಸಿವಿನಿಂದ ಬಳಲಬಾರದೆಂದು ಪ್ರತಿಯೊಂದು ವಾರ್ಡ್ನಲ್ಲೂ ರೇಷನ್ ಕಿಟ್ ನೀಡಲಾಗುತ್ತಿದೆ ಎಂದರು.
ಪಿ.ಜೆ. ಆಂತೋಣಿಸ್ವಾಮಿ ಮಾತನಾಡಿ, ಲಾಕ್ಡೌನ್ ಆದಾಗಿನಿಂದಲೂ ಬಡವರ ಪರ ಕೆಲಸ ಮಾಡಿಕೊಂಡು ಬಂದಿದ್ದು, ಅಕ್ಕಿ, ಎಣ್ಣೆ, ಉಪ್ಪು, ಮಸಾಲ ಪದಾರ್ಥಗಳು, ತರಕಾರಿ ಸೇರಿದಂತೆ ಅಗತ್ಯ ಕಿಟ್ಗಳನ್ನು ಇಂದು ನೀಡಿದ್ದೇವೆ ಎಂದರು.