ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ, ಅಗತ್ಯ ಸೇವೆಗಳನ್ನ ಸಲ್ಲಿಸಲು ಹಾಗೂ ಕಾರ್ಯ ನಿರ್ವಹಿಸಲು ಈಗಾಗ್ಲೇ ಪಾಸ್ಗಳು ಕಡ್ಡಾಯ ಎಂಬ ಘೋಷಣೆಯನ್ನು ನಿನ್ನೆ ಪೊಲೀಸ್ ಇಲಾಖೆ ಸೂಚಿಸಿದೆ.
ಸದ್ಯ ಆನ್ಲೈನ್ ಡೆಲಿವರಿಗಳಾದ ಫ್ಲಿಪ್ಕಾರ್ಟ್, ಅಮೆಜಾನ್, ಸ್ವಿಗ್ಗಿ ಒಳಗೊಂಡಂತೆ ಎಲ್ಲಾ ಆನ್ಲೈನ್ ಸೇವೆಗಳಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಆದ್ರೆ ಪಾಸ್ ಕಡ್ಡಾಯ ಮಾಡಲಾಗಿದೆ. ಪಾಸ್ ಇಲ್ಲದವರು ಓಡಾಡಿದ್ರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
1. ಹೇಮಂತ್ ನಿಂಬಾಳ್ಕರ್-ಅಡ್ಮಿನ್ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ (ಪಾಸ್ ವಿತರಣೆ ಹಾಗೂ ಐಟಿ ಕಂಪನಿಗಳ ಆನ್ಲೈನ್ ಪಾಸ್ ವಿತರಣೆಯ ಜವಾಬ್ದಾರಿ)
2. ಸಂದೀಪ್ ಪಾಟೀಲ್- ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ (ಅಂತರ ಕಾಯ್ದುಕೊಳ್ಳುವುದರ ಬಗ್ಗೆ ಪರಿಶೀಲನೆ ಹಾಗೂ ಅಗತ್ಯ ವಸ್ತುಗಳ ಪೂರೈಕೆ ಬಗ್ಗೆ ಪರಿಶೀಲನೆ)
3. ಇಶಾ ಪಂತ್- ಕಮಾಂಡ್ ಸೆಂಟರ್ ಡಿಸಿಪಿ( ನೋಡಲ್ ಅಧಿಕಾರಿ ಆರೋಗ್ಯ ಇಲಾಖೆ)
4.ನಿಶಾ ಜೇಮ್ಸ್- ಅಡ್ಮಿನ್ ವಿಭಾಗದ ಡಿಸಿಪಿ(ಐಟಿ ವಿಭಾಗದ ಆನ್ಲೈನ್ ಪಾಸ್ ವಿತರಣೆಯ ಕೋಆರ್ಡಿನೇಟ್ ಜವಾಬ್ದಾರಿ)
5. ದಿವ್ಯ ಸಾರಾ ಥಾಮಸ್- CAR ಡಿಸಿಪಿ(ಆಹಾರ ಪೂರೈಕೆ ಪರಿಶೀಲನೆಯ ಜವಾಬ್ದಾರಿ)
6. ಎಂ.ಅಶ್ವಿನಿ-ಗುಪ್ತಚರದಳ ಡಿಸಿಪಿ(ಕಂಟ್ರೋಲ್ ರೂಂ ಹಾಗೂ ವಿದೇಶಿಗರ ಪಟ್ಟಿ ಜವಾಬ್ದಾರಿ)
7. ಕ್ಷಮಾ ಮಿಶ್ರಾ-ಸಿಐಡಿ ಎಸ್ ಪಿ (ಸಾಮಾಜಿಕ ಜಾಲತಾಣದ ಜವಾಬ್ದಾರಿ)
8. ಕುಲದೀಪ್ ಜೈನ್- ಸಿಸಿಬಿ ಡಿಸಿಪಿ(ಅಕ್ರಮ ಮಾರಾಟಗಳ ಬಗ್ಗೆ ಪರಿಶೀಲನೆ, ಇಲಾಖೆ ಸಿಬ್ಬಂದಿಗಳ ಆಹಾರ ಪೂರೈಕೆ ಪರಿಶೀಲನೆಯ ಜವಾಬ್ದಾರಿ)
9. ರವಿ ಕುಮಾರ್- ಸಿಸಿಬಿ ಡಿಸಿಪಿ-2(ಕುಲದೀಪ್ ಜೈನ್ಗೆ ಕೋ ಆರ್ಡಿನೇಟರ್)
10. ಸಿದ್ದರಾಜು-ಡಿಸಿಪಿ CAR ಪಶ್ಚಿಮ ವಿಭಾಗ (ಪೊಲೀಸ್ ಇಲಾಖೆ ಸಿಬ್ಬಂದಿಗಳ ಅಂತರದ ಬಗ್ಗೆ ಹಾಗೂ ಅಗತ್ಯ ವಸ್ತುಗಳ ಪೂರೈಕೆ ಬಗ್ಗೆ ಪರಿಶೀಲನೆ)
11. ಯೋಗೇಶ್-CAR, ಡಿಸಿಪಿ(ಪೊಲೀಸ್ ಇಲಾಖೆ ಸಿಬ್ಬಂದಿಗಳ ಅಂತರದ ಬಗ್ಗೆ ಹಾಗೂ ಅಗತ್ಯ ವಸ್ತುಗಳ ಪೂರೈಕೆ)
12. ಅಬ್ರಹಾಂ ಜಾರ್ಜ್- CAR ಡಿಸಿಪಿ ಉತ್ತರ ವಿಭಾಗ(ಪೊಲೀಸ್ ಇಲಾಖೆ ಸಿಬ್ಬಂದಿಗಳ ಅಂತರದ ಬಗ್ಗೆ ಹಾಗೂ ಅಗತ್ಯ ವಸ್ತುಗಳ ಪೂರೈಕೆ )
13. ಅಶೋಕ್ ಜುಂಜರ್ವಾಡ್-ಡಿಸಿಪಿ ವಿಧಾನಸೌಧ ಸೆಕ್ಯೂರಿಟಿ ವಿಭಾಗ(ರಾಜಭವನ,ವಿಧಾನಸೌಧ,ಹೈ ಕೋರ್ಟ್,ಸರ್ಕಾರಿ ಕಚೇರಿಗಳ ಭದ್ರತಾ ಜವಾಬ್ದಾರಿ)
ಇಷ್ಟು ಮಂದಿಗೆ ಜವಾಬ್ದಾರಿ ನೀಡಿದ್ದು, ಈಗಾಗ್ಲೇ ಪಾಸ್ ವಿತರಣೆ ಕಾರ್ಯ ಆರಂಭವಾಗಿದೆ. ಅಗತ್ಯ ಪಾಸ್ಗಳನ್ನ ತೆಗೆದುಕೊಳ್ಳಲು ಜನ ಕೂಡ ಬರ್ತಿದ್ದಾರೆ.