ETV Bharat / city

'ಟೂಲ್​ಕಿಟ್'​ ಅಪ್​ಲೋಡ್​ ಆರೋಪ: ದಿಶಾ ರವಿ ಅರೆಸ್ಟ್, ಐದು ದಿನ ಪೊಲೀಸ್​ ಕಸ್ಟಡಿಗೆ​ - ರೈತರ ಪ್ರತಿಭಟನೆ ವೇಳೆ ಶಸ್ತ್ರಾಸ್ತ್ರ ಪೂರೈಕೆ

ಬೆಂಗಳೂರು ಮೂಲದ ದಿಶಾ ರವಿ ಮೌಂಟ್ ಕಾರ್ಮಲ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ಈಕೆಯನ್ನು ದೆಹಲಿ ಪೋಲಿಸರು ಬಂಧಿಸಿದ್ದಾರೆ.

Disha Ravi
ದಿಶಾ ರವಿ ಅರೆಸ್ಟ್​
author img

By

Published : Feb 14, 2021, 3:11 PM IST

Updated : Feb 14, 2021, 3:22 PM IST

ಬೆಂಗಳೂರು: ರೈತರ ಪ್ರತಿಭಟನೆ ವೇಳೆ ಗಲಭೆಗೆ ಪ್ರಚೋದನೆ ನೀಡುವ ಮಾಹಿತಿಯುಳ್ಳ 'ಟೂಲ್​ಕಿಟ್​' ಅನ್ನು ಇಂಟರ್​ನೆಟ್​ಗೆ ಅಪ್​ಲೋಡ್​ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬೆಂಗಳೂರಿನ ದಿಶಾ ರವಿ ಹೆಸರಿನ ಯುವತಿಯನ್ನು ಬಂಧಿಸಿದ್ದಾರೆ. ಈಕೆ ಪರಿಸರ ಹೋರಾಟಗಾರ್ತಿ ಎಂದು ಹೇಳಲಾಗಿದೆ.

ಬೆಂಗಳೂರು ಮೂಲದ ದಿಶಾ ರವಿ ಮೌಂಟ್ ಕಾರ್ಮಲ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ಈಕೆಯನ್ನು ದೆಹಲಿ ಪೋಲಿಸರು ಬಂಧಿಸಿದ್ದಾರೆ.

ಫ್ರೈಡೇ ಫಾರ್ ಫ್ಯೂಚರ್ ಎಂಬ ಸಂಘಟನೆಯ ಸ್ಥಾಪಕರಲ್ಲಿ ಒಬ್ಬಳಾದ ದಿಶಾ ರವಿ, ರೈತರ ಪ್ರತಿಭಟನೆಗೆ ವೇಳೆ ಗಲಭೆಗೆ ‌‌ಕುಮ್ಮಕ್ಕು ನೀಡಿದ್ದಾರೆ ಮತ್ತು ಹಿಂಸಾಚಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಪ್ರಚೋದನೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಆಕೆಯನ್ನು ಬಂಧಿಸಲಾಗಿದೆ.

ದೆಹಲಿಯ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿದ್ದು, ದಿಶಾ ರವಿ ವಿರುದ್ದ ದೇಶದ್ರೋಹ, ಅಪರಾಧ ಒಳಸಂಚು ಸೇರಿದಂತೆ ಐಪಿಸಿ ಸೆಕ್ಷನ್ 124 A, 120A ಹಾಗೂ 153 A ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಐದು ದಿನ ಪೊಲೀಸ್​ ಕಸ್ಟಡಿಗೆ ದಿಶಾ ರವಿ: ಬೆಂಗಳೂರಿನಲ್ಲಿ ಬಂಧಿತಳಾದ ದಿಶಾ ರವಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯವೊಂದು ದಿಶಾಳನ್ನು ಐದು ದಿನಗಳ ಕಾಲ ದೆಹಲಿ ಪೊಲೀಸರ ವಿಶೇಷ ಸೆಲ್​ ಕಸ್ಟಡಿಗೆ ಒಪ್ಪಿಸಿದೆ.

ಇದನ್ನೂ ಓದಿ:ಟೂಲ್​ಕಿಟ್ ಪ್ರಕರಣ: ಬೆಂಗಳೂರಿನ ಯುವತಿಯನ್ನು ಬಂಧಿಸಿದ ದೆಹಲಿ ಪೊಲೀಸರು

Last Updated : Feb 14, 2021, 3:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.