ದೊಡ್ಡಬಳ್ಳಾಪುರ: ಒಂದು ತಿಂಗಳು ಶ್ರಮ ವಹಿಸಿ ಬೆಳೆದ ಹೂಕೋಸು ಬೆಳೆಯಲ್ಲಿ ಹೂ ಬಾರದೆ ರೈತ ಕಂಗಲಾಗಿದ್ದಾನೆ. 50 ಸಾವಿರ ರೂ. ಬಂಡವಾಳ ಹಾಕಿದ ರೈತನೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕಳಪೆ ಮಟ್ಟದ ಸಸಿಯಿಂದ ಹೂವು ಬಂದಿಲ್ಲವೆಂದು ಕಂಪನಿಯ ವಿರುದ್ಧ ರೈತ ಅಕ್ರೋಶ ವ್ಯಕ್ತಪಡಿಸಿದ್ದಾನೆ.
ದೊಡ್ಡಬಳ್ಳಾಪುರ ತಾಲೂಕಿನ ವಡ್ಡರಪಾಳ್ಯದ ರಾಜಣ್ಣ ನಷ್ಟ ಅನುಭವಿಸಿರುವ ರೈತ. ತರಕಾರಿ ಬೆಳೆಗಳನ್ನು ಬೆಳೆದು ಲಾಭದಾಯಕ ಕೃಷಿ ಮಾಡುತ್ತಿದ್ದಾನೆ. ಆದ್ರೆ ಈ ಬಾರಿ ನಷ್ಟ ಅನುಭವಿಸುವಂತಾಗಿದೆ. ಮಾರುಕಟ್ಟೆಯಲ್ಲಿ ಹೂ ಕೋಸಿಗೆ ಉತ್ತಮ ಬೆಲೆ ಇದ್ದು, ರಾಜಣ್ಣನು ಕಂಪನಿಯೊಂದರ ಒಟ್ಟು 10 ಸಾವಿರ ಸಸಿಗಳನ್ನು ಅರ್ಧ ಎಕರೆ ಜಮೀನಲ್ಲಿ ಹಾಕಿದ್ದರು. ಕೂಲಿ, ರಸಗೊಬ್ಬರ, ಕೀಟನಾಶಕಗಳಿಗೆ ಸೇರಿದಂತೆ ಒಟ್ಟು 50 ಸಾವಿರ ರೂ. ಖರ್ಚು ಮಾಡಲಾಗಿತ್ತು. 1 ತಿಂಗಳು 15 ದಿನಕ್ಕೆ ಹೊಕೋಸು ಕಟಾವಿಗೆ ಬರುತ್ತಿತ್ತು. ಮಾರುಕಟ್ಟೆಯಲ್ಲಿ ಪ್ರತಿ ಹೂಕೋಸುಗೆ 15 ರೂಪಾಯಿ ದರ ಇದ್ದು, 1 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಲಾಭದ ನಿರೀಕ್ಷೆಯಲ್ಲಿದ್ದ.
ಇದನ್ನೂ ಓದಿ: ಭಾರತ್ ಬಂದ್ : ಬೆಂಗಳೂರಿನ ಕೆಲ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ವ್ಯವಸ್ಥೆ
1 ತಿಂಗಳು 15ದಿನಗಳಾದರು ಹೂಕೋಸು ಗಿಡದಲ್ಲಿ ಹೂವು ಮಾತ್ರ ಬಂದಿಲ್ಲ. ಕಂಪನಿಯ ಕಳಪೆ ಬೀಜ ಬಿತ್ತನೆಯಿಂದ ಹೂಕೋಸುನಲ್ಲಿ ಹೂವು ಬಂದಿಲ್ಲ ಎಂಬುದು ರೈತ ರಾಜಣ್ಣ ಆರೋಪವಾಗಿದೆ. ಕಳಪೆ ಬೀಜದ ಬಗ್ಗೆ ಕಂಪನಿಯವರನ್ನು ಕೇಳಿದ್ರೆ ವಾತಾವರಣ ಬದಲಾವಣೆಯಿಂದ ಹೂಕೋಸುನಲ್ಲಿ ಹೂವು ಬಂದಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ನಾವು ಇದೇ ಜಮೀನಲ್ಲಿ ಬೇರೆ ಬ್ರ್ಯಾಂಡ್ ಹೂಕೋಸು ಬೆಳೆಯಲಾಗಿದ್ದು, ಉತ್ತಮ ಇಳುವರಿ ಸಹ ಬಂದಿದೆ. ಕಳಪೆ ಬೀಜದಿಂದಲೇ ಹೂಕೋಸಿನಲ್ಲಿ ಹೂವು ಬಂದಿಲ್ಲ. ಇದರಿಂದ ನಮಗೆ 50 ಸಾವಿರ ರೂ. ನಷ್ಟವಾಗಿದ್ದು, ನಷ್ಟದ ಹಣವನ್ನ ಕಂಪನಿಯೇ ಪರಿಹಾರವಾಗಿ ಕೊಡಬೇಕೆಂಬುದು ರೈತ ರಾಜಣ್ಣನ ಒತ್ತಾಯವಾಗಿದೆ.