ಬೆಂಗಳೂರು: ಜಿಕೆವಿಕೆ ಕೃಷಿ ವಿವಿಯ ಸೂರ್ಯಕಾಂತಿ ವಿಭಾಗದಿಂದ ಹೊಸ ತಳಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಶೇಕಡಾ 39 ರಿಂದ 40ರಷ್ಟು ಎಣ್ಣೆ ಅಂಶ ಹೊಂದಿರುವ, ಅಧಿಕ ಇಳುವರಿ ನೀಡಲಿರುವ ಸೂರ್ಯಕಾಂತಿ ತಳಿ ಇದಾಗಿದೆ ಎಂದು ಅಖಿಲ ಭಾರತ ಸೂರ್ಯಕಾಂತಿ ಸಂಶೋಧನಾ ಯೋಜನೆಯ ತಾಂತ್ರಿಕ ಸಹಾಯಕರಾದ ದತ್ತಾತ್ರೇಯ ಭಟ್ ಹೇಳಿದರು.
ಕೆ.ಬಿ.ಎಸ್.ಹೆಚ್ 88, ಹಾಗೂ ಕೆ.ಬಿ.ಎಸ್. ಹೆಚ್ 89 ಈ ತಳಿಗಳು. ದೊಡ್ಡದಾದ ತೆನೆ, ಮಧ್ಯಮ ಎತ್ತರದ, 39 ರಿಂದ 40 ಶೇಕಡಾ ಎಣ್ಣೆ ಅಂಶ ಹೊಂದಿರುವ ಸೂರ್ಯಕಾಂತಿ ತಳಿ ಇದಾಗಿದ್ದು, ಅಧಿಕ ಇಳುವರಿ ನೀಡಲಿದೆ. ಒಂದು ಎಕರೆಗೆ 8 ರಿಂದ 10 ಕ್ವಿಂಟಲ್ ಇಳುವರಿ ಬರಲಿದೆ ಎಂದು ತಿಳಿಸಿದರು.
ಹಳೇ ತಳಿಗಳಿಗಿಂತ ಹತ್ತು ದಿನ ಬೇಗನೇ ಕಟಾವಿಗೆ ಬರಲಿದ್ದು, ಇಳುವರಿ ಕೂಡಾ ಹೆಚ್ಚು ಬರಲಿದೆ. ಇನ್ನು ಕೆ.ಬಿ.ಎಸ್.ಹೆಚ್ 89 ತಳಿಯಲ್ಲಿ ಕಟಾವಿನ ದಿನ ಹಾಗೂ, ಗಾತ್ರದಲ್ಲಿ ವ್ಯತ್ಯಾಸ ಇರಲಿದೆ ಎಂದರು.