ETV Bharat / city

ಕಾಲರಾ ಪತ್ತೆ ಹಿನ್ನೆಲೆ.. ಬೀದಿ ಬದಿ ಆಹಾರ ವಸ್ತುಗಳ ಮಾರಾಟ ತಡೆಗೆ ಬಿಬಿಎಂಪಿ ಕಠಿಣ ಕ್ರಮ - ರಸ್ತೆ ಬದಿಗಳಲ್ಲಿ ಶುದ್ಧ ನೀರು ಬಳಸದೇ ಇದ್ದರೆ

ಇದನ್ನು ವಿರೋಧಿಸಿರುವ ಬೀದಿ ಬದಿಯ ವ್ಯಾಪಾರಿಗಳ ಸಂಘಟನೆ, ಈಗಾಗಲೇ ನೈರ್ಮಲ್ಯದಿಂದ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವ ಬಗ್ಗೆ ತರಬೇತಿಗಳು ನಡೆದಿವೆ. ಸರ್ಕಾರದಿಂದಲೇ ಪ್ರಮಾಣಪತ್ರ ತೆಗೆದುಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು.

Kn_bng_01_streetfood_7202707
ಕಾಲರಾ ಪತ್ತೆ ಹಿನ್ನೆಲೆ, ಬೀದಿ ಬದಿ ಆಹಾರ ವಸ್ತುಗಳ ಮಾರಾಟ ನಿಷೇಧಿಸಿದ ಬಿಬಿಎಂಪಿ...!
author img

By

Published : Mar 10, 2020, 6:00 PM IST

Updated : Mar 10, 2020, 11:51 PM IST

ಬೆಂಗಳೂರು : ನಗರದಲ್ಲಿ ಕಾಲರಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಬಿಬಿಎಂಪಿ ನಿನ್ನೆಯಿಂದಲೇ ಬೀದಿ ಬದಿಯ ಆಹಾರ ವಸ್ತುಗಳ ಮಾರಾಟ ನಿಷೇಧಿಸಿತ್ತು. ಆದರೂ ಪ್ರಮುಖ ರಸ್ತೆಗಳಲ್ಲೇ ಇಂದು ತಿಂಡಿ, ತಿನಿಸು, ಹಣ್ಣು, ಆಹಾರಗಳ ಮಾರಾಟ ಎಂದಿನಂತೆ ನಡೆಯುತ್ತಿದೆ.

ಕಾಲರಾ ಪತ್ತೆ ಹಿನ್ನೆಲೆ.. ಬೀದಿ ಬದಿ ಆಹಾರ ವಸ್ತುಗಳ ಮಾರಾಟ ನಿಷೇಧಿಸಿದ ಬಿಬಿಎಂಪಿ..

ಕಲುಷಿತ ನೀರಿನಿಂದ ಕಾಲರಾ ಬರುವ ಹಿನ್ನೆಲೆ ರಸ್ತೆ ಬದಿಗಳಲ್ಲಿ ಶುದ್ಧ ನೀರು ಬಳಸದೇ ಇದ್ದರೆ ಅಥವಾ ವಾಹನಗಳು ರಸ್ತೆಯ ಹೊಗೆ ಧೂಳಿನಿಂದ ಕಲುಷಿತ ಆಹಾರ ಮಾರಾಟ ಮಾಡಬಾರದೆಂದು ಸ್ವಲ್ಪ ದಿನಗಳ ಕಾಲ ನಿಷೇಧಿಸಲಾಗಿದೆ. ಆದರೆ, ಇದನ್ನು ವಿರೋಧಿಸಿರುವ ಬೀದಿ ಬದಿಯ ವ್ಯಾಪಾರಿಗಳ ಸಂಘಟನೆ, ಈಗಾಗಲೇ ನೈರ್ಮಲ್ಯದಿಂದ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವ ಬಗ್ಗೆ ತರಬೇತಿಗಳು ನಡೆದಿವೆ. ಸರ್ಕಾರದಿಂದಲೇ ಪ್ರಮಾಣಪತ್ರ ತೆಗೆದುಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು.

ಬಿಬಿಎಂಪಿ ಪಶ್ಚಿಮ ವಿಭಾಗದ ಆರೋಗ್ಯಾಧಿಕಾರಿ ಬಾಲಸುಂದರ್ ಮಾತನಾಡಿ, ಆಯುಕ್ತರ ಆದೇಶದ ಮೇರೆಗೆ ಈಗಾಗಲೇ ಮುನ್ನೂರಕ್ಕೂ ಹೆಚ್ಚು ಅಂಗಡಿಗಳನ್ನು ತೆರವು ಮಾಡಲಾಗಿದೆ. ಒಂದು ದಿನ ತೆರವು ಮಾಡಿದ ಜಾಗದಲ್ಲಿ ಮತ್ತೆ ತಳ್ಳುವ ಗಾಡಿಗಳು ತಂದಿದ್ರೆ, ವಸ್ತುಗಳನ್ನು ಸೀಜ್‌ ಮಾಡಲಾಗುವುದು. ಜಲಮಂಡಳಿಯ ಜತೆ ಚರ್ಚೆ ಮಾಡಿ ನೀರಲ್ಲಿ ಕ್ಲೋರಿನ್ ಪ್ರಮಾಣ ಹೆಚ್ಚಿಸಲು ತಿಳಿಸಲಾಗಿದೆ ಎಂದರು.

Last Updated : Mar 10, 2020, 11:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.