ಬೆಂಗಳೂರು : ರಾಜಧಾನಿಯಲ್ಲಿ ಕಳೆದ 8 ದಿನಗಳಲ್ಲಿ ಆ್ಯಂಬುಲೆನ್ಸ್ ಇಲ್ಲದೆ 1,500ಕ್ಕೂ ಹೆಚ್ಚು ರೋಗಿಗಳು ಪರದಾಡಿದ್ದಾರೆ. 3 ಗಂಟೆಗೂ ಹೆಚ್ಚು ಕಾಲ ಈ ರೋಗಿಗಳು ಆ್ಯಂಬುಲೆನ್ಸ್ಗಾಗಿ ಕಾಯುವಂತಾಗಿದೆ. ಬೆಂಗಳೂರಿನಲ್ಲಿ ಸದ್ಯ 163 ಆ್ಯಂಬುಲೆನ್ಸ್‌ಗಳು ಕೊರೊನಾ ರೋಗಿಗಳಿಗಾಗಿ ಮೀಸಲಿವೆ. ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆ್ಯಂಬುಲೆನ್ಸ್‌ಗಳು ಸಾಲುತ್ತಿಲ್ಲ.
ಒಬ್ಬ ಸೋಂಕಿತನನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ ನಂತರ ಇಡೀ ಆ್ಯಂಬುಲೆನ್ಸ್‌ನ ರಾಸಾಯನಿಕ ಬಳಸಿ ಶುಚಿಗೊಳಿಸಬೇಕು. ಆ್ಯಂಬುಲೆನ್ಸ್ ಸಿಬ್ಬಂದಿ ಪಿಪಿಇ ಕಿಟ್ ಬದಲಿಸಬೇಕು. ಸ್ನಾನ ಮಾಡಬೇಕು. ಇಷ್ಟೆಲ್ಲಾ ಮಾಡಲು ಕನಿಷ್ಠ 4 ತಾಸುಗಳಾಗುತ್ತದೆ.
ಇದರಿಂದ ಒಂದು ಆ್ಯಂಬುಲೆನ್ಸ್‌ನಲ್ಲಿ ಒಂದು ದಿನದಲ್ಲಿ ಗರಿಷ್ಠ 4ರಿಂದ 5 ರೋಗಿಗಳನ್ನು ಮಾತ್ರ ಶಿಫ್ಟ್ ಮಾಡಬಹುದಾಗಿದೆ. ಹಾಗಾಗಿ ಆ್ಯಂಬುಲೆನ್ಸ್ನಗಳ ಕೊರತೆ ಉಂಟಾಗಿದೆ ಎನ್ನಲಾಗುತ್ತಿದೆ.