ETV Bharat / city

ಕೊರೊನಾ ಹೊಡೆತಕ್ಕೆ ತತ್ತರಿಸಿದ ಸೆಕೆಂಡ್‌ ಹ್ಯಾಂಡ್ ಕಾರು ಮಾರಾಟ ಉದ್ಯಮ: ದರ ಕಡಿತ ಮಾಡಿದ್ರೂ ಬಿಕರಿಯಾಗ್ತಿಲ್ವಂತೆ! - ಬೆಂಗಳೂರು

ಬೇಸಿಗೆಗೆ ಭರ್ಜರಿ ಮಾರುಕಟ್ಟೆ ಸಿಗಲಿದೆ ಎಂಬ ಸೆಕೆಂಡ್ ಹ್ಯಾಂಡ್ ಕಾರು ಮಾರಾಟಗಾರರ ನಿರೀಕ್ಷೆಯನ್ನು ಕೊರೊನಾ ಹುಸಿ ಮಾಡಿದೆ. ಆದರೆ ಲಾಕ್​ಡೌನ್ ಸಡಿಲಿಕೆಯಾದರೂ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟಕ್ಕೆ ಪೂರಕ ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ. ಲಾಕ್​ಡೌನ್​ನಿಂದ ಆರ್ಥಿಕ ಸ್ಥಿತಿ ಕುಸಿದಿದೆ. ಕಾರು ಖರೀದಿ ಮಾಡಬೇಕು ಎನ್ನುವವರು ಸ್ವಲ್ಪ ಯೋಚನೆ ಮಾಡುತ್ತಿದ್ದಾರೆ.

pre- owned cars
ಕಾರು ಮಾರಾಟ ಉದ್ಯಮ
author img

By

Published : Jun 24, 2020, 7:47 PM IST

ಬೆಂಗಳೂರು: ಲಾಕ್​ಡೌನ್ ಕಾರಣದಿಂದ ಆರ್ಥಿಕ ಚಟುವಟಿಕೆ ಕುಸಿದಿದ್ದು, ಪ್ರೀ ಓನ್ಡ್ ಕಾರ್​ಗಳಿಗೆ ಒಳ್ಳೆಯ ಮಾರುಕಟ್ಟೆ ಸಿಗಲಿದೆ ಎನ್ನುವ ನಂಬಿಕೆ ಹುಸಿಯಾಗಿದೆ. ಜನರು ಹಳೆಯ ಕಾರುಗಳ ಖರೀದಿಗೂ ಉತ್ಸಾಹ ತೋರುತ್ತಿಲ್ಲ.

ಕೊರೊನಾ ಎಫೆಕ್ಟ್​ನಿಂದಾಗಿ ಹಳೆಯ ಕಾರುಗಳ ಮಾರಾಟ ಉದ್ಯಮ‌ ಚೇತರಿಕೆಗೆ ಕನಿಷ್ಠ ಒಂದು ವರ್ಷ ಬೇಕಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮಧ್ಯಮ ವರ್ಗದ ಜನರು ಕಡಿಮೆ ಬೆಲೆಯ ಕಾರುಗಳು ಇಲ್ಲವೇ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಕೊಳ್ಳಲು ಹೆಚ್ಚಿನ ಆದ್ಯತೆ ನೀಡುತ್ತಾರೆ. ಹಾಗಾಗಿಯೇ ಪ್ರೀ ಓನ್ಡ್ ಕಾರುಗಳ ಮಾರಾಟವೂ ಶೋ ರೂಂಗಳ ರೀತಿಯಲ್ಲಿಯೇ ನಡೆಯುತ್ತಿದೆ.

ಕೊರೊನಾ ಹೊಡೆತಕ್ಕೆ ತತ್ತರಿಸಿದ ಸೆಕೆಂಡ್‌ ಹ್ಯಾಂಡ್ ಕಾರು ಮಾರಾಟ ಉದ್ಯಮ

ಈ ಬಾರಿಯ ಬೇಸಿಗೆಗೆ ಭರ್ಜರಿ ಮಾರುಕಟ್ಟೆ ಸಿಗಲಿದೆ ಎಂಬ ಸೆಕೆಂಡ್ ಹ್ಯಾಂಡ್ ಕಾರು ಮಾರಾಟಗಾರರ ನಿರೀಕ್ಷೆಯನ್ನು ಕೊರೊನಾ ಹುಸಿ ಮಾಡಿದೆ. ಆದರೆ ಲಾಕ್​ಡೌನ್ ಸಡಿಲಿಕೆಯಾದರೂ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟಕ್ಕೆ ಪೂರಕ ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ. ಲಾಕ್​ಡೌನ್​ನಿಂದ ಆರ್ಥಿಕ ಸ್ಥಿತಿ ಕುಸಿದಿದೆ. ಹೊಸ ಕಾರು ಖರೀದಿ ಮಾಡಬೇಕು ಎನ್ನುವವರು ಸ್ವಲ್ಪ ಯೋಚನೆ ಮಾಡುತ್ತಿದ್ದಾರೆ.

ಸದ್ಯಕ್ಕೆ ಹಳೆಯ ಕಾರು ಖರೀದಿ‌ ಮಾಡಿದರೆ ಹೇಗೆ ಎನ್ನುವ ಚಿಂತನೆಯಲ್ಲಿ ಇದ್ದಾರೆ. ಇದರ ಜೊತೆಗೆ ಲಾಕ್​ಡೌನ್ ಮಾರ್ಗಸೂಚಿ ಕೂಡ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಬೇಡಿಕೆ ಸೃಷ್ಟಿಸುವ ರೀತಿಯಲ್ಲಿದೆ. ಸಾಮಾಜಿಕ ಅಂತರದ ಜೊತೆಗೆ ಸಾರ್ವಜನಿಕ ಸಾರಿಗೆ ಬದಲು ಸ್ವಂತ ವಾಹನದಲ್ಲಿ ಓಡಾಟ ಒಳಿತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಹಣಕಾಸಿನ ಮುಗ್ಗಟ್ಟು ಮತ್ತು ಕೊರೊನಾ ಎರಡರ ಕಾರಣದಿಂದ ಭರ್ಜರಿ ಮಾರುಕಟ್ಟೆ ಸಿಗಲಿದೆ ಎನ್ನುವ ಪ್ರೀ ಓನ್ಡ್ ಕಾರ್ ಮಾರಾಟಗಾರರ ನಿರೀಕ್ಷೆ ಹುಸಿಯಾಗಿದೆ.

ಕಳೆದ ವರ್ಷ ಉತ್ತಮ ವಹಿವಾಟು ನಡೆಸಿದ್ದ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್​ಗಳು, ಈ ಬಾರಿ ಇನ್ನೂ‌ ಹೆಚ್ಚು ಬ್ಯುಸಿನೆಸ್ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ ಕೊರೊನಾ ಹೊಡೆತಕ್ಕೆ ಡೀಲರ್‌ಗಳು‌ ತತ್ತರಿಸಿದ್ದಾರೆ. ಸೆಕೆಂಡ್ ಹ್ಯಾಂಡ್ ಕಾರ್ ಮಾರಾಟ ಕೇಂದ್ರಗಳನ್ನು ತೆರೆದಿದ್ದರೂ ಗ್ರಾಹಕರಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಳೆಯ ಕಾರುಗಳ ದರದಲ್ಲಿ ಕಡಿತ ಮಾಡಿದ್ದರೂ ಮಾರಾಟ ಮಾತ್ರ ಕುಸಿಯುತ್ತಿದೆ. ಇಂದಲ್ಲಾ ನಾಳೆ ಗ್ರಾಹಕರು ಇತ್ತ ಬರಲಿದ್ದಾರೆ ಎನ್ನುವ ನಂಬಿಕೆಯಲ್ಲಿ ಕಾರ್ ಡೀಲರ್​​ಗಳು ಕಾದು ಕುಳಿತಿದ್ದಾರೆ.

ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಡೀಲ್ಸ್ ಆನ್ ವ್ಹೀಲ್ಸ್ ಮಾಲೀಕ ಎನ್.ಶ್ರೀಧರ್, ಲಾಕ್​ಡೌನ್ ಮೊದಲು ನಮಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಲಾಕ್​ಡೌನ್ ಆದ ನಂತರ ಜನ ಈ ಕಡೆ ಬರ್ತಾ ಇಲ್ಲ. ಕೊರೊನಾ ಭಯದಲ್ಲಿ ಇದ್ದಾರೆ. ಹಣ ಖರ್ಚು ಮಾಡಲೂ ಮುಂದೆ ಬರುತ್ತಿಲ್ಲ. ಹಾಗೆಯೇ ಸಾಮಾಜಿಕ ಅಂತರ ಇತ್ಯಾದಿ ನೋಡಿದರೆ ನಮಗೆ ಡಿಮ್ಯಾಂಡ್ ಜಾಸ್ತಿ ಆಗಬೇಕಿತ್ತು, ಆದರೆ ಆಗಿಲ್ಲ. ಜನ ಬರುತ್ತಿಲ್ಲ. ಜನರಲ್ಲಿ ಜಾಗೃತಿ ಮೂಡುತ್ತಿದೆ. ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ನಾವು ವ್ಯವಹಾರಕ್ಕೆ ಕಾಯಬೇಕಿದೆ ಎಂದರು.

ಲಾಕ್​ಡೌನ್ ಎಫೆಕ್ಟ್ ಬಹಳ ಪ್ರಮಾಣದಲ್ಲಿ ಆಗಿದೆ. ಆರು ತಿಂಗಳಿನಿಂದ ವರ್ಷದವರೆಗೂ ಸಮಯಾವಕಾಶ ನಮ್ಮ ಚೇತರಿಕೆಗೆ ಬೇಕಾಗಲಿದೆ. ಲಾಕ್​ಡೌನ್ ಆರಂಭಕ್ಕೆ ಮೊದಲಿಗಿಂತಲೂ ದರ ಕಡಿಮೆ ಮಾಡಿದ್ದೇವೆ. ಗ್ರಾಹಕರು ಬಂದರೆ ಕಡಿಮೆ ದರಕ್ಕೆ ಕಾರುಗಳನ್ನು ಕೊಡಲು ಸಿದ್ಧರಿದ್ದೇವೆ. ಆದರೆ ಜನ ಬರುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಲಾಕ್​ಡೌನ್, ಫೈನಾನ್ಸಿಯಲ್ ಕ್ರೈಸಿಸ್​ನಿಂದ ನಮಗೆ ಬೇಡಿಕೆ ಹೆಚ್ಚಾಗಬೇಕಿತ್ತು. ಆದರೆ ಅದೂ ಆಗುತ್ತಿಲ್ಲ. ಇನ್ನಷ್ಟು ಸಮಯ ಬೇಕು. ಜನರಲ್ಲಿ ಜಾಗೃತಿ ಮೂಡಿದ ನಂತರ ಅವರೇ ಬರಲಿದ್ದಾರೆ. ಅಲ್ಲಿಯವರೆಗೂ ನಾವು ಕಾಯಬೇಕು ಅಷ್ಟೇ. ಲಾಕ್​ಡೌನ್ ನಡುವಿನ ಸಂಕಷ್ಟದಲ್ಲಿ ನಮ್ಮ ಉದ್ಯಮ ನಡೆಸಿಕೊಂಡು‌ ಹೋಗುವ ಅನಿವಾರ್ಯತೆ ಎದುರಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.