ETV Bharat / city

ಅತಿಯಾದ ತೃಪ್ತಿಯ ರೋಗವೇ ದುರಾಸೆ: ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ - ಗಾಂಧಿ ಜಯಂತಿ

ದುರಾಸೆಯು ಮನುಷ್ಯನಿಗೆ ಹಲವಾರು ಅಪರಾಧಗಳನ್ನು ಎಸಗಲು ಪ್ರೇರೇಪಿಸುವುದರ ಜತೆಗೆ, ಭ್ರಷ್ಟಾಚಾರವನ್ನು ಉತ್ತೇಜಿಸುತ್ತದೆ. ‌ಹಾಗೇ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವುದರೊಂದಿಗೆ ಮುಂದಿನ ಯುವಜನತೆಯ ದಿಕ್ಕು ತಪ್ಪಿಸುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.

decline-of-the-social-values-and-its-effects-conversation-by-retired-justice-n-santosh-hegde
ಸಾಮಾಜಿಕ ಮೌಲ್ಯಗಳ ಕುಸಿತ ಹಾಗೂ ಅದರ ಪರಿಣಾಮಗಳು ಸಂವಾದ
author img

By

Published : Oct 2, 2020, 3:54 PM IST

Updated : Oct 2, 2020, 4:34 PM IST

ಬೆಂಗಳೂರು: ಇಂದಿನ ಸಮಾಜ ಹಣಕ್ಕೆ ಹೆಚ್ಚಿನ ಒತ್ತುಕೊಟ್ಟು ದುರಾಸೆಯನ್ನು ಬೆಳೆಸಿಕೊಂಡು ಮಾನವೀಯ ಮೌಲ್ಯಗಳನ್ನು ಹಾಳು ಮಾಡಲು ಹೊರಟಿರುವುದು ನಿಜಕ್ಕೂ ಶೋಚನೀಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.

ಗಾಂಧಿ ಜಯಂತಿ ಹಿನ್ನೆಲೆ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಇಲಾಖೆಯ ರಾಜ್ಯ ಎನ್ಎಸ್ಎಸ್ ಕೋಶ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಸಾಮಾಜಿಕ ಮೌಲ್ಯಗಳ ಕುಸಿತ ಹಾಗೂ ಅದರ ಪರಿಣಾಮಗಳು' ಎಂಬ ಸಂವಾದದಲ್ಲಿ ಮಾತನಾಡಿದ ಅವರು, ಇಂದಿನ ಸಮಾಜ ಹಣಕ್ಕೆ ಹೆಚ್ಚಿನ ಒತ್ತುಕೊಟ್ಟು ದುರಾಸೆಯನ್ನು ಬೆಳೆಸಿಕೊಂಡಿದೆ. ಈ ಮೂಲಕ ಮಾನವೀಯ ಮೌಲ್ಯಗಳನ್ನು ಹಾಳು ಮಾಡಲು ಹೊರಟಿರುವುದು ನಿಜಕ್ಕೂ ಶೋಚನೀಯ ಎಂದರು.

ಈ ಸಮಾಜದ ಬಗ್ಗೆ ಅರ್ಥಮಾಡಿಕೊಳ್ಳದೆ, ನಾನು ಕೂಪಮಂಡೂಕನಾಗಿದ್ದೆ. ವಕೀಲನಾಗಿದ್ದಾಗ ಕಕ್ಷಿದಾರರ ಹೇಳಿಕೆ ಮೇಲೆ ವಾದ ಮಂಡಿಸುತ್ತಿದ್ದೆ. ನ್ಯಾಯಾಧೀಶನಾಗಿದ್ದಾಗ ವಕೀಲರ ವಾದದ ಮೇಲೆ ತೀರ್ಪುಗಳನ್ನು ನೀಡುತ್ತಿದ್ದೆ. ಆದರೆ ಲೋಕಾಯುಕ್ತನಾಗಿ ಕೆಲಸ ಪ್ರಾರಂಭಿಸಿದಾಗ, ಜನಗಳ ನಿಜವಾದ ಕಷ್ಟ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರು ಎದುರಿಸಬೇಕಾದ ತೊಂದರೆಗಳು ಹಾಗೂ ಸಮಾಜದಲ್ಲಿರುವ ಭ್ರಷ್ಟಾಚಾರ, ಅದರಲ್ಲೂ ಅಧಿಕಾರಿಗಳ ಅಮಾನವೀಯ ವರ್ತನೆಗಳನ್ನು ಕಂಡಾಗ ನನ್ನ ಮನ ಕುಲಕಿತು ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ಸಮಾಜದಲ್ಲಿ ಜನರು ದುರಾಸೆಯನ್ನು ಬೆಳಸಿಕೊಂಡು ಹಲವಾರು ತಪ್ಪುಗಳನ್ನು ಮಾಡಲು ಹೊರಟಿದ್ದಾರೆ. ಭ್ರಷ್ಟಾಚಾರಕ್ಕೆ ತಮ್ಮ ಮೌಲ್ಯಯುತವಾದ ಜೀವನವನ್ನು ಕಳೆದುಕೊಳ್ಳುತ್ತಿರುವುದು ಗಾಂಧೀಜಿ ಕಂಡಂತಹ ಆಶಯಗಳಿಗೆ ತದ್ವಿರುದ್ಧವಾಗಿದೆ. ನಾನು ಸುಮಾರು 1600ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಲ್ಲಿ ಈ ಮಾನವೀಯ ಮೌಲ್ಯಗಳ ಬಗ್ಗೆ ವಿಶೇಷವಾಗಿ ಯುವಕರನ್ನು ಪ್ರೇರೇಪಿಸಿ, ಸ್ವಸ್ಥ ಸಮಾಜವನ್ನು ಸೃಷ್ಟಿಸುವ ಪ್ರಯತ್ನದ ಬಗ್ಗೆ ಉಪನ್ಯಾಸವನ್ನು ನೀಡುತ್ತಿದ್ದೇನೆ. ನಾವು ಇಂದು ಇರುವ ಸಮಾಜ ನಮ್ಮ ಹಿರಿಯರು ಕಟ್ಟಿದಂತಹ ಸಮಾಜವಲ್ಲ. ಇಂದು ಪ್ರತಿಯೊಬ್ಬರು ಸ್ವಾರ್ಥ ಜೀವನವನ್ನ ಹಾಗೂ ಮೌಲ್ಯರಹಿತ ಜೀವನವನ್ನು ನಡೆಸಿಕೊಂಡು ತಮ್ಮ ತೃಪ್ತಿ ಕಳೆದುಕೊಂಡು ಮಾನವೀಯತೆ ಮರೆಯುತ್ತಿದ್ದಾರೆ.

'ಅತಿಯಾದ ತೃಪ್ತಿಯ ರೋಗವೇ ದುರಾಸೆ', ಈ ದುರಾಸೆಯು ಮನುಷ್ಯನಿಗೆ ಹಲವಾರು ಅಪರಾಧಗಳನ್ನು ಎಸಗಲು ಪ್ರೇರೇಪಿಸುವುದರ ಜತೆಗೆ, ಭ್ರಷ್ಟಾಚಾರವನ್ನು ಉತ್ತೇಜಿಸುತ್ತದೆ. ‌ಹಾಗೇ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವುದರ ಜೊತೆಗೆ ಮುಂದಿನ ಯುವಜನತೆಯನ್ನು ದಿಕ್ಕುತಪ್ಪಿಸುತ್ತಿದೆ ಎಂದು ಪ್ರತಿಪಾದಿಸಿದರು.

ಮಹಾತ್ಮ ಗಾಂಧೀಜಿಯವರ ಕನಸು ನನಸು ಮಾಡಲು ಯುವಕರು ಮುಂದಾಗಬೇಕು. ಇಂದಿನ ನ್ಯಾಯ ವ್ಯವಸ್ಥೆಯಲ್ಲಿ, ನ್ಯಾಯಾಲಯಗಳು ನ್ಯಾಯವನ್ನು ತ್ವರಿತಗತಿಯಲ್ಲಿ ನೀಡುವುದರ ಮೂಲಕ ಪ್ರಜೆಯ ಹಕ್ಕುಗಳನ್ನು ಎತ್ತಿಹಿಡಿಯಬೇಕು. ಅತಿಯಾದ ನ್ಯಾಯವೇ ವಿಳಂಬ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವುದು ಹಾಗೂ ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ ಅಂದರು.

ಈ ವೇಳೆ ಮಾತನಾಡಿದ ಪ್ರೊ. ಕೆ.ಆರ್. ವೇಣುಗೋಪಾಲ್, ಗಾಂಧಿ ಜಯಂತಿ ಪ್ರಯುಕ್ತ ಬೆಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆಯ ಏರ್ಪಡಿಸಿರುವ ಸಾಮಾಜಿಕ ಮೌಲ್ಯ ಸಂಬಂಧದ ಸಂವಾದ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾದದ್ದು. ಗಾಂಧೀಜಿ ಕಂಡಂತಹ ಕನಸು ನನಸಾಗಲು ಸಾಮಾಜಿಕ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಗುಣಮಟ್ಟದ ಸಾಮಾಜಿಕ ಮೌಲ್ಯ ಉತ್ತಮ ಪ್ರಗತಿಪರ ಹಾಗೂ ಆರೋಗ್ಯಕರ ಸಮಾಜವನ್ನು ಸೃಷ್ಟಿಸುವುದರಲ್ಲಿ ಸಂದೇಹವೇ ಇಲ್ಲವೆಂದು ತಿಳಿಸಿದರು.

‌ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ.ಆರ್. ವೇಣುಗೋಪಾಲ್ ಅವರು ನೆರವೇರಿಸಿಕೊಟ್ಟರು. ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಭಾಗವಹಿಸಿದ್ದರು.

Last Updated : Oct 2, 2020, 4:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.