ETV Bharat / city

45 ಲಕ್ಷ ಟನ್ ಬತ್ತ ಖರೀದಿಸಲು ಅನುಮತಿಗಾಗಿ ಕೇಂದ್ರಕ್ಕೆ ಮನವಿ; ಸಚಿವ ಗೋಪಾಲಯ್ಯ

ರಾಜ್ಯದ ರೈತರಿಂದ 12 ಲಕ್ಷ ಟನ್ ಬತ್ತ ಖರೀದಿಸಲು ನಮಗೆ ಅವಕಾಶವಿದೆ. ಆದರೆ ಕೊರೊನಾ ಕಾಲಘಟ್ಟದಲ್ಲಿ ರೈತರಿಗೆ, ಸಾಗಣೆದಾರರಿಗೆ ಮತ್ತು ಯುವಕರಿಗೆ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಸುವ ದೃಷ್ಟಿಯಿಂದ ನಮ್ಮ ಬತ್ತ ನಮಗೇ ಇರಲಿ ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.

ಸಚಿವ ಗೋಪಾಲಯ್ಯ
ಸಚಿವ ಗೋಪಾಲಯ್ಯ
author img

By

Published : Jan 18, 2021, 10:57 PM IST

ಬೆಂಗಳೂರು : ರಾಜ್ಯದ ರೈತರು ಬೆಳೆಯುವ 45 ಲಕ್ಷ ಟನ್​ಗಳಷ್ಟು ಬತ್ತವನ್ನು ಖರೀದಿ ಮಾಡಲು ರಾಜ್ಯಕ್ಕೆ ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆಯೆಂದು ಸಚಿವ ಗೋಪಾಲಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ, ಸದ್ಯಕ್ಕೆ ರಾಜ್ಯದ ರೈತರಿಂದ 12 ಲಕ್ಷ ಟನ್ ಬತ್ತ ಖರೀದಿಸಲು ನಮಗೆ ಅವಕಾಶವಿದೆ. ಆದರೆ ಕೊರೊನಾ ಕಾಲಘಟ್ಟದಲ್ಲಿ ರೈತರಿಗೆ, ಸಾಗಣೆದಾರರಿಗೆ ಮತ್ತು ಯುವಕರಿಗೆ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಸುವ ದೃಷ್ಟಿಯಿಂದ ನಮ್ಮ ಬತ್ತ ನಮಗೇ ಇರಲಿ ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.

ರಾಜ್ಯದಲ್ಲಿ ಪ್ರತಿ ವರ್ಷ 50 ಲಕ್ಷ ಟನ್ ಅಕ್ಕಿಯನ್ನು ಜನ ಬಳಕೆ ಮಾಡುತ್ತಿದ್ದು ಈ ಪೈಕಿ ದೊಡ್ಡ ಪ್ರಮಾಣದ ಬತ್ತವನ್ನು ಹೊರರಾಜ್ಯಗಳಿಂದ ಪಡೆಯಲಾಗುತ್ತಿದೆ. ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ನಮಗೆ ಬತ್ತ ಸರಬರಾಜಾಗುತ್ತಿದ್ದು ಹೀಗೆ ಸರಬರಾಜಾಗುವ ಬತ್ತಕ್ಕೆ ಪ್ರತಿಯಾಗಿ ನೂರಾರು ಕೋಟಿ ರೂ. ಸಾಗಣೆ ವೆಚ್ಚ ತಗಲುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ರೈತರು ಬೆಳೆಯುವ ಬತ್ತವನ್ನು ಬೆಂಬಲ ಬೆಲೆ ನೀಡಿ ಖರೀದಿಸಲು ನಮಗೇ ಅವಕಾಶವಾದರೆ ರೈತ ಹಾಗೂ ಸಾಗಾಣಿಕೆದಾರರಿಗೂ ಅನುಕೂಲವಾಗುತ್ತದೆ. ಅದೇ ರೀತಿ ಬೆಳೆದ ಬತ್ತವನ್ನು ರಾಜ್ಯ ಸರ್ಕಾರವೇ ಖರೀದಿ ಮಾಡುತ್ತದೆ ಎಂಬುದು ಖಚಿತವಾದರೆ ಹೆಚ್ಚಿನ ಯುವಕರು ಕೃಷಿ ಕೆಲಸದಲ್ಲಿ ತೊಡಗಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ವಿವರಿಸಿದರು.

ಕೊರೊನಾದಿಂದಾಗಿ ರಾಜ್ಯ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು ಇಂತಹ ಸನ್ನಿವೇಶದಲ್ಲಿ ಹೊಸ ಉದ್ಯೋಗವಕಾಶಗಳನ್ನು ಸೃಷ್ಟಿಸುವ ಮೂಲಕ ಆರ್ಥಿಕತೆಗೆ ಚೇತರಿಕೆ ನೀಡುವ ಅಗತ್ಯವಿದೆ ಎಂದು ಸಚಿವ ಗೋಪಾಲಯ್ಯ ಹೇಳಿದರು.

ಈ ಬಾರಿಯ ಬಜೆಟ್​ನಲ್ಲಿ ರಾಜ್ಯದ ಜನರಿಗೆ ಹೊಸ ಶಕ್ತಿ ತುಂಬುವ ಯೋಜನೆಗಳನ್ನು ನೀಡಬೇಕು ಎಂಬ ಯೋಚನೆ ಇದೆ. ಆದರೆ ಸರ್ಕಾರದ ಆರ್ಥಿಕ ಪರಿಸ್ಥಿತಿಯ ಮೇಲೆ ಇದು ಜಾರಿಯಾಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿಗಳು ಸದ್ಯದಲ್ಲೇ ಬಜೆಟ್ ಪೂರ್ವಭಾವಿ ಸಭೆಯನ್ನು ನಡೆಸಲಿದ್ದು ಈ ಸಂದರ್ಭದಲ್ಲಿ ಆಹಾರ ಇಲಾಖೆಗೆ ಸಂಬಂಧಿಸಿದ ಪ್ರಸ್ತಾವವನ್ನು ಅವರಿಗೆ ಸಲ್ಲಿಸುತ್ತೇವೆ. ಈ ಪ್ರಸ್ತಾವದಲ್ಲಿ ನಮ್ಮ ಹೊಸ ಯೋಜನೆಗಳ ವಿವರ ಇರಲಿದೆ ಎಂದರು.

ಕೊರೊನಾ ವಿಕೋಪಕ್ಕೆ ಹೋದ ಸನ್ನಿವೇಶದಲ್ಲಿ ಆಹಾರ ಇಲಾಖೆ ಅತ್ಯುತ್ತಮವಾಗಿ ಕೆಲಸ ಮಾಡಿದೆ ಎಂದು ಸಮರ್ಥಿಸಿಕೊಂಡ ಅವರು, ಕೇಂದ್ರದ ನೆರವಿನೊಂದಿಗೆ ಜನರ ನೆರವಿಗೆ ನಾವು ಬಂದಿದ್ದೇವೆ. ಈಗಿನ ಆರ್ಥಿಕ ಬಿಕ್ಕಟ್ಟು ಇನ್ನೊಂದು ವರ್ಷದಲ್ಲಿ ನಿವಾರಣೆಯಾಗುವ ಲಕ್ಷಣಗಳಿವೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಮುಂದಿನ ಬಜೆಟ್​ನಲ್ಲಿ ನಾವು ಕೇಳಿದ್ದೆಲ್ಲವನ್ನೂ ಕೊಡುವುದು ಮುಖ್ಯಮಂತ್ರಿಗಳಿಗೆ ಕಷ್ಟವಾಗಬಹುದು. ಹೀಗಾಗಿ ಅವರು ನೀಡುವ ಸೂಚನೆಯನ್ನು ಅನುಸರಿಸಿ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.