ETV Bharat / city

ಪಾರ್ಕಿಂಗ್​ ವಿಚಾರಕ್ಕೆ ಸ್ಯಾಂಡಲ್​ವುಡ್​ ನಟನೊಬ್ಬನಿಂದ ಮಾರಾಣಾಂತಿಕ ಹಲ್ಲೆ.. - Director Rishika

ಟ್ರಂಕ್​ ನಟ ನಿಹಾಲ್ ರಜಪೂತ್ ಮತ್ತು ನಿರ್ದೇಶಕಿ ರಿಷಿಕಾ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ತೆಗೆದು ಹರ್ಷಾ ಎಂಬ ಯುವಕನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪಾರ್ಕಿಂಗ್​ ವಿಚಾರಕ್ಕೆ ಸ್ಯಾಂಡಲ್​ವುಡ್​ ನಟನೊಬ್ಬನಿಂದ ಮಾರಾಣಾಂತಿಕ ಹಲ್ಲೆ
author img

By

Published : Sep 29, 2019, 1:35 PM IST

ಬೆಂಗಳೂರು: ಟ್ರಂಕ್​ ನಟ ನಿಹಾಲ್ ರಜಪೂತ್ ಮತ್ತು ನಿರ್ದೇಶಕಿ ರಿಷಿಕಾ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ತೆಗೆದು ಹರ್ಷಾ ಎಂಬ ಯುವಕನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Deadly onslaught by a Sandalwood actor for parking issue
ಪಾರ್ಕಿಂಗ್​ ವಿಚಾರಕ್ಕೆ ಸ್ಯಾಂಡಲ್​ವುಡ್​ ನಟನೊಬ್ಬನಿಂದ ಮಾರಾಣಾಂತಿಕ ಹಲ್ಲೆ

ಸೆಪ್ಟೆಂಬರ್‌ 19ರ ಮಧ್ಯಾಹ್ನ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹರ್ಷಾ ಸ್ವರೂಪ್​ ಮನೆ ಮುಂದೆ ನಿರ್ದೇಶಕಿ ರಿಷಿಕಾ ತಮ್ಮ ಬೌನ್ಸ್​ ಬೈಕ್​ ಪಾರ್ಕ್​ ಮಾಡಲು ಮುಂದಾಗಿದ್ದಾರೆ. ಆಗ ಹರ್ಷಾ ತಮ್ಮ ಮನೆ ಮುಂದೆ ನಿಲ್ಲಿಸದಂತೆ ಹೇಳಿದ್ದಾರೆ. ಈ ವೇಳೆ ನಿರ್ದೇಶಕಿ ರಿಷಿಕಾ, ಹರ್ಷಾ ಅವರಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಇದೇ ವಿಷಯ ತಾರಕಕ್ಕೇರಿತ್ತು.

ನಿರ್ದೇಶಕಿ ರಿಷಿಕಾ ಬಳಿಕ ಈ ವಿಷಯವನ್ನ ನಿಹಾಲ್​ಗೆ ತಿಳಿಸಿದ್ದಾರೆ. ಬಳಿಕ ನಟ ನಿಹಾಲ್​, ಹರ್ಷಾಗೆ ಕರೆ ಮಾಡಿ ನೀನು ನನ್ನ ಮನೆಯ ಬಳಿ ಬರಬೇಕು ಎಂದಿದ್ದಾನೆ. ಈ ವೇಳೆ ಬರಲು ಸಾಧ್ಯವಿಲ್ಲ ಎಂದಿರೋದಕ್ಕೆ ನಾನು ಸಿನಿಮಾದ ದೊಡ್ಡ ಕಲಾವಿದ. ನಾನೇ ಬಂದು ಬಾಗಿಲನ್ನ ಒಡೆದು ಹಾಕುತ್ತೇನೆ ಹೇಳಿದ್ದಾನೆ. ನಂತರ 10ಕ್ಕೂ ಹೆಚ್ಚು ಮಂದಿ ಜೊತೆ ಗುಂಪು ಕಟ್ಟಿಕೊಂಡು ಮನೆಯ ಬಳಿ ಬಂದು ರಿಷಿಕಾ ಅನ್ನೋ ಹೆಣ್ಣು ಮಗಳ ಪವರ್ ಏನ್ ಗೊತ್ತಾ ಎಂದು ಆವಾಜ್ ಹಾಕಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ.

ಜೀವ ಬೆದರಿಕೆ ಹಿನ್ನೆಲೆ, ಹರ್ಷಾ ವೈಯ್ಯಾಲಿಕಾವಲ್ ಪೊಲೀಸರಿಗೆ ದೂರು ನೀಡಿ, ಈ ಬಗ್ಗೆ ಕಮಿಷನರ್​ ಅವರಿಗೆ ಇ-ಮೇಲ್ ಮಾಡಿ ವಿಚಾರ ತಿಳಿಸಿದ್ದಾರೆ. ಸದ್ಯ ಕಮಿಷನರ್ ಸೂಚನೆ ಮೇರೆಗೆ FIR ದಾಖಲಿಸಿದ ವೈಯ್ಯಾಲಿಕಾವಲ್ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. ಸದ್ಯ ಹರ್ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮುಖ, ಎದೆ ಹಾಗೂ ಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ.

ಗಾಯಾಳು ಹರ್ಷಾ ವಿರುದ್ಧ ಪ್ರತಿದೂರು ದಾಖಲಿಸಿರುವ ನಿಹಾಲ್ ರಜಪೂತ್, ಬೌನ್ಸ್ ಬೈಕ್ ಪಾರ್ಕಿಂಗ್ ಮಾಡುವಾಗ ಹರ್ಷಾ ತಕರಾರು ಮಾಡಿ,ಕೀಳು ಮಟ್ಟದ ಭಾಷೆ ಬಳಸಿ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಎರಡು ಕಡೆ ದೂರಿನ ಆಧಾರದ ಮೇಲೆ ತನಿಖೆ ಮುಂದುವರೆದಿದೆ.

Intro:ಸ್ಯಾಂಡಲ್ ನಟನೊಬ್ಬ ನಿಂದ ಗೂಂಡಾವರ್ತನೆ
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಮಾರಾಣಾಂತಿಕ ಹಲ್ಲೆ...

ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ತೆಗೆದು ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆಂದು ಕನ್ನಡ ಚಿತ್ರರಂಗದ ನಾಯಕ ನಟ ಹಾಗೂ ನಿರ್ದೇಶಕಿ ವಿರುದ್ಧ ಆರೋಪವೊಂದು ಕೇಳಿ ಬಂದಿದೆ.‌

ಸೆ.19 ರಂದು ವೈಯಾಲಿಕಾವಾಲ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯಾಹ್ನ ದೂರುದಾರ ಹರ್ಷಾ ಸ್ವರುಪ್ ‌ ಮನೆಯ ಮುಂದೆ ನಿಹಾಲ್ ರಜಾಪೂತ್ ಹಾಗೂ ರಿಶಿಕಾ ಕಾರು ಹಾಗೂ ಬೌನ್ಸ್ ಗಾಡಿ ನಿಲ್ಲಿಸುವಾಗ ಮನೆಯ ಮುಂದೆ ನಿಲ್ಲಿಸದಂತೆ ಹೇಳಿದ್ದಾರೆ. ಈ ವೇಳೆ ರಿಶಿಕಾ ಬಾಯಿಗೆ ಬಂದಂತೆ ಹರ್ಷಾ ಗೆ ಬೈದ ಕಾರಣ ಜಗಳ ತಾರಕ ಕ್ಕೆ ಏರಿದೆ. ನಂತ್ರ ದೂರುದಾರರಿಗೆ ನಿಹಾಲ್ ರಾಜಪುತ್ ಕರೆ ಮಾಡಿ ನೀನು ನನ್ನ ಮನೆಯ ಬಳಿ ಬರಬೇಕು ಎಂದಿದ್ದಾನೆ. ಈ ವೇಳೆ ಬರಲು ಸಾಧ್ಯವಿಲ್ಲ ಎಂದಿದಕ್ಕೆ ನಾನು ಸಿನಿಮಾದ ದೊಡ್ಡ ಕಲಾವಿದ ನಾನೆ ಬಂದು ಬಾಗಿಲನ್ನ ಹೊಡೆದು ಹಾಕುತ್ತೆನೆಂದು ಹೇಳಿ ನಂತ್ರ ದೂರುದಾರ ಮನೆಗೆ ಬಂದು ಹಲ್ಲೆ ಮಾಡಿ ರಿಶಿಕಾ ಅನ್ನೋ ಹೆಣ್ಣು ಮಗಳ ಪವರ್ ಏನ್ ಗೊತ್ತಾ ಎಂದು ಅವಾಜ್ ಹಾಕಿ ಹಿಗ್ಗಾ ಮುಗ್ಗ
10ಕ್ಕೂ ಹೆಚ್ಚು ಮಂದಿ ಜೊತೆ ಗುಂಪುಕಟ್ಟಿಕೊಂಡು ಮನೆಯ ಬಳಿ ಬಂದು ಹರ್ಷಾ ಕತ್ತಿನ ಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾರೆ .

ಜೀವಬೆದರಿಕೆ ಹಿನ್ನೆಲೆ ಹರ್ಷಾ ವೈಯ್ಯಾಲಿಕಾವಲ್ ಪೊಲೀಸರಿಗೆ ದೂರು ನೀಡಿದ್ದಾರೆ‌ ಅಷ್ಟು ಮಾತ್ರವಲ್ಲದೇ ಕಮಿಷನರ್ಗೆ ಇ-ಮೇಲ್ ಮಾಡಿ ವಿಚಾರ ತಿಳಿಸಿದ್ದು ಸದ್ಯ ಕಮಿಷನರ್ ಸೂಚನೆ ಮೇರೆಗೆ FIR ದಾಖಲಿಸಿದ ವೈಯ್ಯಾಲಿಕಾವಲ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ಸದ್ಯ ಹರ್ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮುಖ, ಎದೆ ಹಾಗೂ ಕಾಲಿನ ಭಾಗಕ್ಕೆ ಗಂಭೀರ ಗಾಯಗಳಗಿದೆ.

ಮತ್ತೊಂದೆಡೆ ಗಾಯಾಳು ವಿರುದ್ಧ ಪ್ರತಿದೂರು ದಾಖಲು ಮಾಡಿರುವ ನಿಹಾಲ್ ರಾಜಪೂತ್ ಬೌನ್ಸ್ ಬೈಕ್ ಪಾರ್ಕಿಂಗ್ ಮಾಡಲು ತಕರಾರು ಮಾಡಿದ್ದಾರೆ ಈ ವೇಳೆ ಕೀಳುಮಟ್ಟದ ಬಾಷೆ ಬಳಸಿ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು ಸದ್ಯ ಎರಡು ಕಡೆ ದೂರಿನ ಆಧಾರದ ಮೇಲೆ ತನಿಖೆ ಮುಂದುವರೆದಿದೆ

ಇನ್ನು ನಿಹಾಲ್ ರಜಪೂತ್ ಟ್ರಂಕ್ ಚಿತ್ರದ ನಾಯಕ ನಟ ನಾಗಿದ್ದಾನೆ.ಹಾಗೆ ರಿಷಿಕಾ ಹಲವಾರು ಸಿನಿಮಾದ ನಿರ್ದೇಶಕಿ ಎಂದು ತಿಳಿದು ಬಂದಿದೆ.

Body:KN_BNG_03_FILM ACTER_7204498Conclusion:KN_BNG_03_FILM ACTER_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.