ಬೆಂಗಳೂರು: ದಿಶಾ ಹತ್ಯೆಯ ನಂತ್ರ ನಗರ ಪೊಲೀಸರು ಎಚ್ಚೆತ್ತು ಎಲ್ಲೆಡೆ ಭದ್ರತೆ ಹೆಚ್ಚಿಸಿದ್ದಾರೆ. ಹಾಗೆ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಕಳೆದ ರಾತ್ರಿ 1.45ರ ಸುಮಾರಿಗೆ ಮಹಿಳೆಯರ ರಕ್ಷಣೆ ಬಗ್ಗೆ ರಿಯಾಲಿಟಿ ಚೆಕ್ ಮಾಡಿಸಿದ್ದಾರೆ.
ತಡರಾತ್ರಿ ಕೇಂದ್ರ ವಿಭಾಗ ವ್ಯಾಪ್ತಿಯ ಯುಬಿ ಸಿಟಿಯಲ್ಲಿ ರಾತ್ರಿ ಊಟಕ್ಕೆಂದು ಓರ್ವ ಯುವತಿ ಹಾಗೂ ಆಕೆಯ ಇಬ್ಬರು ಸ್ನೇಹಿತರು ಬಂದಿದ್ದರು. ಈ ವೇಳೆ ಯುಬಿ ಸಿಟಿ ರಸ್ತೆಯಲ್ಲಿ ರೌಂಡ್ಸ್ ಹೊರಟಿದ್ದ ಡಿಸಿಪಿ ಚೇತನ್ ಸಿಂಗ್ ರಾಥೋರ್ ಮೊದಲು ಯುವತಿ ಹಾಗೂ ಆಕೆಯ ಸ್ನೇಹಿತರನ್ನ ಕಂಡು ನಿಮಗೆ ಏನಾದರೂ ಸಹಾಯ ಬೇಕಿದ್ದಲ್ಲಿ 'ಡಯಲ್ 100'ಕ್ಕೆ ಕರೆ ಮಾಡುವಂತೆ ತಿಳಿಸಿದ್ದಾರೆ.
ಈ ವೇಳೆ ಅಲ್ಲಿದ್ದ ಯುವತಿಯರು ಅವೆಲ್ಲಾ ಯೂಸ್ ಆಗಲ್ಲ. ನಾವು ಈ ಮೊದಲು ಹರಿಯಾಣದಲ್ಲಿ ಪೊಲೀಸರಿಗೆ ಕಾಲ್ ಮಾಡಿದ್ವಿ. ಯೂಸ್ ಆಗಿಲ್ಲ ಎಂದಿದ್ದಾರೆ. ಈ ವೇಳೆ ಡಿಸಿಪಿ ಮಾತನಾಡಿ ಅದು ಹರಿಯಾಣ, ಇದು ಬೆಂಗಳೂರು. ಇಲ್ಲೊಮ್ಮೆ ಟ್ರೈ ಮಾಡಿ ಎಂದು ಡಯಲ್ 100ಕ್ಕೆ ಕರೆ ಮಾಡಿಸಿದ್ದಾರೆ.
ಈ ವೇಳೆ ಯುವತಿಯರು ಮೊದಲ ಕರೆ ಮಾಡಿದಾಗ 100 ಎಂಗೇಜ್ ಆಗಿತ್ತು. ಬಳಿಕ ತಮ್ಮ ಗನ್ ಮ್ಯಾನ್ ಮೊಬೈಲ್ನಲ್ಲಿ ಕರೆ ಮಾಡಿಸಿದಾಗ ಮೊಬೈಲ್ನಲ್ಲಿ ಮಾತನಾಡುತ್ತಿದ್ದಂತೆ ಲೋಕೇಷನ್ ಪಡೆದ ಡಯಲ್ 100 ಸಿಬ್ಬಂದಿ ಕೇವಲ ಮೂರು ನಿಮಿಷಕ್ಕೆ ಯುಬಿ ಸಿಟಿಯ ಯುವತಿಯರು ಇದ್ದ ಸ್ಥಳಕ್ಕೆ ಬಂದಿದ್ದಾರೆ. ಇನ್ನು ಡಿಸಿಪಿ ಚೇತನ್ ಸಿಂಗ್ ಕಾರ್ಯ ಮೆಚ್ಚಿ ಯುವತಿಯರು ಧನ್ಯವಾದ ಹೇಳಿದ್ದಾರೆ.